ಸಿರುಗುಪ್ಪ

ಹಜ್ ಯಾತ್ರೆ ಹಾಜಿಗಳಿಗೆ ತರಬೇತಿ ಶಿಬಿರ ಕಾರ್ಯಾಗಾರ

ಹಜ್ ಯಾತ್ರೆ ಹಾಜಿಗಳಿಗೆ ತರಬೇತಿ ಶಿಬಿರ ಕಾರ್ಯಾಗಾರ


ಲೋಕದರ್ಶನ ವರದಿ 

ಸಿರುಗುಪ್ಪ 02: ಪ್ರತಿಯೊಬ್ಬ ಮುಸ್ಲಿಂ ಬಂಧುಗಳು ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎನ್ನುವ ಮನೋಭಾವನೆ ಹೊಂದಿರುತ್ತಾರೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು. 


ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ರೈತ ಭವನದಲ್ಲಿ ಆಯೋಜಿಸಿದ ಹಜ್ ಯಾತ್ರಾರ್ಥಿ ಹಾಜಿಗಳಿಗೆ ತರಬೇತಿ ಶಿಬಿರದ ಕಾರ್ಯಾಗಾರದ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಈ ವರ್ಷ ರಾಯಚೂರು ಜಿಲ್ಲೆಯಿಂದ 88ಮಂದಿ ಹಜ್ ಯಾತ್ರೆಗೆ ಹಾಜಿಗಳು ಸೌದಿ ಅರೇಬಿಯಾದ ಮಕ್ಕಾ ಮದೀನಾಗೆ ತೆರಳುವರು ಸುರಕ್ಷಿತದಿಂದ ಅವರು ತೆರಳಿ ಪವಿತ್ರ ಸ್ಥಳಗಳ ದರ್ಶನದಲ್ಲಿ ನಮ್ಮೆಲ್ಲರಿಗೂ ದುವಾ ಮಾಡಬೇಕು ಮೊಹಮ್ಮದ್ ಪೈಗಂಬರ  ಸಲ್ಲಲ್ಲಾಹು ಅಲೈಹಿವ ಸಲ್ಲಮ್ ಅವರಿಗೆ ಸಲಾಂ ತಿಳಿಸಬೇಕು  ಎಂದು ವಿನಂತಿಸಿಕೊಂಡರು. ರಾಯಚೂರು ಜಿಲ್ಲಾ ಹಜ್ ತರಬೇತಿ ಸಂಪನ್ಮೂಲ ವ್ಯಕ್ತಿ ಸೈಯದ್ ಸಮಿಯುದ್ದೀನ್ ಖಾದ್ರಿ ಅವರು ಹಜ್ ಕುರಿತು ವಿವರಿಸಿ ಸಂಪೂರ್ಣವಾಗಿ ಮಾಹಿತಿ ನೀಡಿದರು ಧಾರ್ಮಿಕ ವಿದ್ವಾಂಸರಾದ ಮುಫ್ತಿ ಸೈಯದ್ ರೋಷನ್ ಖಾದ್ರಿ, ಸೈಯದ್ ರೆಹಮತ್ ಅಲಿ,ಜಾಗೀರದಾರ್ ಹಾಫೀಜ್ ಸೈಯದ್ ಇಕ್ರಾಮುದ್ದೀನ್ ಖಾದ್ರಿ, ಹಬೀಬ್ ರಹಮತ್ ಅಲಿ, ಸೇರಿದಂತೆ ಮುಖಂಡರು ಗಳಿದ್ದರು. 


ಸುದ್ದಿ ಓದಿ