ವರ್ತಕರು ನಗರದ ಎಪಿಎಂಸಿ ಮಾರುಕಟ್ಟೆಯ ಪ್ರಾರಾಂಗಣದಲ್ಲಿ ಪ್ರತಿಭಟನೆ
ರಾಣಿಬೆನ್ನೂರ 18: ತಾಲೂಕಿನ ಹೂಲಿಹಳ್ಳಿ-ಕೂನಬೇವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ ಮಾರುಕಟ್ಟೆ ನಿವೇಶನಗಳನ್ನು ಸ್ಥಳೀಯ ವರ್ತಕರಿಗೆ ಮೀಸಲಿರಿಸಿ ಹಂಚಿಕೆ ಮಾಡಬೇಕು ಮತ್ತು ನಿವೇಶನಗಳ 250 ರೂ. ದರದೊಳಗೆ ನಿಗದಿಪಡಿಸಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿ, ಬುಧವಾರ ವರ್ತಕರು ನಗರದ ಎಪಿಎಂಸಿ ಮಾರುಕಟ್ಟಯ ಪ್ರಾರಾಂಗಣದಲ್ಲಿ ಪ್ರತಿಭಟನೆ ನಡೆಸಿ ಎಪಿಎಂಸಿ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ತಾಲೂಕಿನ ಹೂಲಿಹಳ್ಳಿ-ಕೂನಬೇವು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ ಮಾರುಕಟ್ಟೆ ನಿವೇಶನಗಳನ್ನು ಸ್ಥಳೀಯ ವರ್ತಕರಿಗೆ ಮೀಸಲಿರಿಸಿ ಹಂಚಿಕೆ ಮಾಡಬೇಕು ಮತ್ತು ನಿವೇಶನಗಳ 250 ರೂ. ದರದೊಳಗೆ ನಿಗದಿಪಡಿಸಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಕೃಷಿ ಉತ್ಪನ್ನ ಮರುಕಟ್ಟೆ ಸಮಿತಿ ಕಾರ್ಯದರ್ಶಿಗಳು ಹೂಲಿಹಳ್ಳಿ-ಕೂನಬೇವು ಉಪ ಮಾರುಕಟ್ಟೆ (ಮೆಘಾ ಮಾರುಕಟ್ಟೆ) ಪ್ರಾಂಗಣಗಳಲ್ಲಿಯ ನಿವೇಶನಗಳನ್ನು ಲೀಜ್-ಕಂ-ಸೇಲ್ ಹಂಚಿಕೆ ಮಾಡಲು 2024 ಜ. 10 ರಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದೀರಿ ಸಕ್ಷಮ ಪ್ರಾಧಿಕಾರವು ಹೂಲಿಹಳ್ಳಿ-ಕೂನಬೇವು ಉಪ ಮಾರುಕಟ್ಟೆ (ಮಘಾ ಮಾರುಕಟ್ಟೆ) ಪ್ರಾಂಗಣಗಳಲ್ಲಿನ ನಿವೇಶನಗಳನ್ನು ಪ್ರತಿ ಚದರು ಅಡಿಗೆ ರೂ.400/- ನಿಗಧಿ ಪಡಿಸಿ, ಎ.ಬಿ.ಸಿ.ಡಿ.ಇ ಬ್ಲಾಕ್ ಗಳಲ್ಲಿಯ ಒಟ್ಟು 522 ನಿವೇಶನಗಳ ಬದಲಾಗಿ 300 ನಿವೇಶನಗಳನ್ನು ಹಂಚಿಕೆ ಮಾಡಲು 05.01.2024 ರಂತೆ ಸಭಾಭವನದಲ್ಲಿ ಕರೆದ ವರ್ತಕರ ಪೂರ್ವಬಾವಿ ಸಭೆಯನ್ನು ಕರೆದು ಮಾಹಿತಿ ನೀಡಲಾಗಿದೆ ಎಂದು ಸುಳ್ಳು ಹೇಳಿದ್ದೀರಿ ಎಂದು ಆರೋಪಿಸಿದರು.
ಈ ಸಭೆಯನ್ನು ಆಡಳಿತಾಧಿಕಾರಿಗಳ ಆಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಅದರೆ ಆಡಳಿತಾಧಿಕಾರಿಗಳು ಈ ಸಭೆಗೆ ಹಾಜರ ಆಗಲೇ ಇಲ್ಲಾ, ತಾವೇ ಸೇರಿ ಈ ಸಭೆಯನ್ನು ಅವರ ಅನುಪಸ್ಥಿತಿಯಲ್ಲಿಯೇ ನಡೆಸಿರುತ್ತೀರಿ. ಸಭೆಯಲ್ಲಿ ರಾಣೇಬೆನ್ನೂರಿನ ವರ್ತಕರ ಸಂಘದವರು ಮತ್ತು ವರ್ತಕರು ನಮ್ಮ ಬೇಡಿಕೆಗಳನ್ನು ತಮಗೆ ಪತ್ರದ ಮುಖಾಂತರ ಮತ್ತು ಮೌಖಿಕವಾಗಿಯೂ ತಿಳಿಸಿದ್ದರೂ ಕೂಡಾ ಮತ್ತೆ ಈ ಸಭೆಯಲ್ಲಿ ತಮ್ಮ ಗಮನಕ್ಕೆ ಒಕ್ಕೊರಲಿನಿಂದ ತಿಳಿಸಿದರೂ ನಿವೇಶನಗಳ ದರವನ್ನು ರೂ.150/- ರಿಂದ ಪ್ರತಿ ಚದುರ ಅಡಿಗೆ ರೂ.400 ರಂತೆ ನಿಗದಿಪಡಿಸಿರುವುದಾಗಿ ತಿಳಿದಿದೆ. ಆದಕಾರಣ ನಿವೇಶನಗಳನ್ನು 250 ರೂ. ದರದೊಳಗೇ ಹಂಚಿಕೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಎಲ್ಲಾ ಬೇಡಿಕೆಗಳುನ್ನು ಈಡೇರಿಸಲು ಎಪಿಎಂಸಿ ಸಚಿವರನ್ನು ಬೆಟ್ಟಿ ಮಾಡಿ ಅವರ ಜೊತೆಗೆ ನಿಮ್ಮ ಬೇಡಿಕೆಗಳ ಬಗ್ಗೆ ಚರ್ಚಿಸಿ ತೀರ್ಮಾನ ತಗೆದುಕೊಳ್ಳೊಣ ಎಂದು ಹೇಳಿ ಅವರ ಜೊತೆ ಚರ್ಚಿಸದೇ ತರಾತುರಿಯಲ್ಲಿ ಹಂಚಿಕೆ ಮಾಡುತ್ತಿರುವುದು ನಮಗೆ ಅನ್ಯಾಯವೆಸಗಲು ಬಿಡುವುದಲ್ಲ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ವರ್ತಕರ ಸಂಘದ ಅಧ್ಯಕ್ಷ ಗದಿಗಪ್ಪಗೌಡ ಹೊಟ್ಟಿಗೌಡ್ರ, ವರ್ತಕರಾದ ವಿ.ಪಿ. ಲಿಂಗನಗೌಡ್ರ, ರಾಜಣ್ಣ ಮೋಟಗಿ, ಅಶೋಕಗೌಡ ಗಂಗನಗೌಡ್ರ, ಸದಾನಂದ ಉಪ್ಪಿನ, ಸೋಮಣ್ಣ ಗೌಡಶಿವಣ್ಣವರ ಸೇರಿದಂತೆ ವರ್ತಕರು ಮತ್ತು ವರ್ತಕರ ಸಂಘದ ಪದಾಧಿಕಾರಿಗಳು ಪ್ರತಿಭಟನೆಯಲ್ಲಿ ಇದ್ದರು.