ಧಾರಾಕಾರ ಮಳೆ: ಸಿಡಿಲಿಗೆ ಬೆಲೆಬಾಳುವ ಎತ್ತು ಸಾವು
ರಾಣೇಬೆನ್ನೂರು 21: ತಾಲೂಕಿನ ನೋಕಾಪೂರ ಗ್ರಾಮದಲ್ಲಿ ನಿನ್ನೆ ಸಂಜೆ ಸುರಿದ ಮಳೆಯ ಜೊತೆಗೆ ಬರಶಿಡಿಲಿನಂತೆ ಅಪ್ಪಳಿಸಿದ ಸಿಡಿಲಿಗೆ ಅಪಾರ ಬೆಲೆಬಾಳುವ ಎತ್ತು ಸ್ಥಳದಲ್ಲಿಯೇ ಸಾವು ಕಂಡ ದುರಂತ ಘಟನೆ ರವಿವಾರ ಸಂಭವಿಸಿದೆ. ಲೋಕಾಪುರ ಗ್ರಾಮದ ಬಡ ರೈತ ಹಾಲೇಶ ಯಲ್ಲಪ್ಪ ಕುಂಬಾರ ಎಂಬುವರಿಗೆ ಸೇರಿದ ಈ ಎತ್ತಿನ ಮೌಲ್ಯವು ಅಂದಾಜು 70 ಸಾವಿರ ರೂಗಳು ಎಂದು ಅಂದಾಜಿಸಲಾಗಿದೆ. ಮನೆಯ ಪಕ್ಕದಲ್ಲಿರುವ ಹಕ್ಕಿಮನೆಯಲ್ಲಿ ಕಟ್ಟಿದ ಎರಡು ಎತ್ತುಗಳಲ್ಲಿ, ಭೀಕರ ಸಿಡಿಲು ಅಪ್ಪಳಿಸಿ ಅದರಲ್ಲಿ ಒಂದು ಎತ್ತು ಸಾವು ಕಂಡಿದೆ.
ರಾತ್ರಿ ಸುರಿಯುತ್ತಿರುವ ಮಳೆಯ ಮದ್ಯ ಎತ್ತುಗಳಿಗೆ ಮೇವು ಹಾಕಲು ಬಂದಾಗ ಒಂದು ಎತ್ತು ಸತ್ತುಬಿದ್ದಿರುವ ಎತ್ತನ್ನು ನೋಡಿ ರೈತ ದಿಕ್ಕುಕಾಣದೆ ಕಂಗಲಾಗಿದ್ದಾನೆ. ಹಾಲೇಶ ಎಲ್ಲಪ್ಪ ಕುಂಬಾರ ರೈತನ ಹೆಸರಿನಲ್ಲಿ ಸರ್ವೆ ನಂಬರ 99/ಅ ನೆದ್ದರಲ್ಲಿ 1 ಎಕರೆ 20 ಗುಂಟೆ ಜಮೀನು ಹೊಂದಿದ್ದು ಇತರೆ ಕೊರು ಮತ್ತು ಲಾವಣಿ ರೋಪದಲ್ಲಿ ಜಮೀನು ಮಾಡುತ್ತಾ ಜೀವನಸಾಗಿಸುತಿದ್ದರು. ಇಂದು ಸಿಡಿಲಿಗೆ ಒಂದು ಎತ್ತನ್ನು ಕಳೆದುಕೊಂಡು ದಿಕ್ಕುಕಾಣದೆ ಕಂಗಲಾಗಿದ್ದಾನೆ ತಕ್ಷಣವೇ ತಹಸೀಲ್ದಾರರು ಮತ್ತು ಪಶು ಸಂಗೋಪನ ಇಲಾಖೆ ಭೇಟೀನೀಡಿ ಪ್ರಕೃತಿವಿಕೋಪಕ್ಕೆ ತುತ್ತದ ಎತ್ತಿನ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಿ ನೊಂದ ರೈತರಿಗೆ ನೆರವು ನೀಡಬೇಕೆಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ.