ಪವರ್ ಸ್ಟಾರ್ ಅಭಿನಯದ ‘ಜೇಮ್ಸ್’ ಗೆ ನಾಳೆ ಮುಹೂರ್ತ
ಬೆಂಗಳೂರು, ಜ 18 , ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಸಿನಿಮಾ 'ಜೇಮ್ಸ್' ನಾಳೆ ಭಾನುವಾರ ಲಾಂಚ್ ಆಗುತ್ತಿದ್ದು, ಬೆಂಗಳೂರಿನ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದ ಮೂಲಕ ಶುಭಾರಂಭ ಮಾಡಲಿದೆ. ದೇವಸಂದ್ರ ಲೇ ಔಟ್ ನ ರಾಮಯ್ಯ ಆಸ್ಪತ್ರೆ ಎದುರಿನ ಶ್ರೀ ಬಾಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ಮುಹೂರ್ತ ಕಾರ್ಯಕ್ರಮ ನೆರವೇರಲಿದೆಚಿತ್ರಕ್ಕೆ ಚೇತನ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದು, ಇದು ಅವರ 4ನೇ ಸಿನಿಮಾ ಆಗಿದೆ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಸಿನಿಮಾಗೆ ನಿರ್ದೇಶಿಸುತ್ತಿರುವುದು ವಿಶೇಷ ವಾಗಿದ್ದು, ಕಿಶೋರ್ ಪ್ರೊಡಕ್ಷನ್ಸ್ ಸಿನಿಮಾದ ನಿರ್ಮಾಣ ಮಾಡುತ್ತಿದೆ. ಈ ಹಿಂದೆಯೇ ಸಿನಿಮಾದ ಸಣ್ಣ ಟೀಸರ್ ವೊಂದು ಬಿಡುಗಡೆಯಾಗದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದಿರುವ 'ಜೇಮ್ಸ್' ಸಿನಿಮಾ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಸದ್ಯ 'ಯುವರತ್ನ' ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಬ್ಯುಸಿ ಇದ್ದಾರೆ. ಈ ಸಿನಿಮಾ ಇದೇ ವರ್ಷ ಬಿಡುಗಡೆ ಆಗುತ್ತಿದೆ. ಈ ಚಿತ್ರದ ನಂಜೇಮ್ಸ್' ಸಿನಿಮಾ ಬರುತ್ತದೆ. 'ಜೇಮ್ಸ್' ಟೈಟಲ್ ಈಗಾಗಲೇ ದೊಡ್ಡ ಕುತೂಹಲ ಸೃಷ್ಟಿಸಿದೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 