ಮನರಂಜನೆ

ನಾಳೆ ಪಿವಿಆರ್ ಸಿನಿಮಾ ಹಾಲ್ ಗಳು ಓಪನ್

ನಾಳೆ ಪಿವಿಆರ್ ಸಿನಿಮಾ ಹಾಲ್ ಗಳು ಓಪನ್

ನವದೆಹಲಿ, ಅ 15 :ಕೋವಿಡ್ ಸಾಂಕ್ರಾಮಿಕ ನಿಯಂತ್ರಿಸುವ ಉದ್ದೇಶದಿಂದ ಸ್ಥಗಿತಗೊಂಡಿದ್ದ ಥಿಯೇಟರ್ ಗಳು ತೆರೆದುಕೊಳ್ಳುತ್ತಿವೆ.  ಗುರುವಾರದಿಂದ ಹಲವಾರು ಸಿನೆಮಾ ಹಾಲ್‌ಗಳು ಮತ್ತೆ ತೆರೆಯುತ್ತಿದ್ದರೂ, ಪ್ರಮುಖ ಸಿನೆಮಾ ಹಾಲ್ ಪಿವಿಆರ್ ತನ್ನ ಸಿನೆಮಾ ಹಾಲ್‌ಗಳನ್ನು ಶುಕ್ರವಾರದಿಂದ ತೆರೆಯುತ್ತಿದೆ. ದೆಹಲಿಯ 130 ಸಿನೆಮಾ ಪರದೆಗಳಲ್ಲಿ 68 ಮಾತ್ರ ಮತ್ತೆ ತೆರೆಯುತ್ತಿವೆ.ಸುಮಾರು ಏಳು ತಿಂಗಳ ಅಂತರದ ನಂತರ ದೆಹಲಿಯ ಸಿನೆಮಾ ಹಾಲ್‌ಗಳು ಸೇರಿದಂತೆ ದೇಶದ ಹಲವಾರು ಭಾಗಗಳಲ್ಲಿ ಗುರುವಾರ ಸಾರ್ವಜನಿಕರಿಗಾಗಿ ತೆರೆದುಕೊಂಡಿದೆ. ದೆಹಲಿ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ಆಂಧ್ರಪ್ರದೇಶ ದಲ್ಲಿ ಸೀಮಿತ ಆಸನ ಸಾಮರ್ಥ್ಯದೊಂದಿಗೆ ಸೋಮವಾರದಿಂದ ಪುನರಾರಂಭಗೊಳ್ಳಲಿದ್ದು, ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಲಾಗುತ್ತಿದೆ.   ಮಹಾರಾಷ್ಟ್ರ, ರಾಜಸ್ಥಾನ, ಒಡಿಶಾ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ಸದ್ಯಕ್ಕೆ ಥಿಯೇಟರ್ ಗಳು ತೆರೆಯುತ್ತಿಲ್ಲ ಎನ್ನಲಾಗಿದೆ.

ಗೃಹ ಸಚಿವಾಲಯದ ಅನ್‌ಲಾಕ್ 5 ಮಾರ್ಗಸೂಚಿಗಳ ಪ್ರಕಾರ, ಸಿನಿಮಾ ಹಾಲ್‌ಗಳು ಗುರುವಾರದಿಂದ ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅಕ್ಟೋಬರ್ 6 ರಂದು ಚಿತ್ರಮಂದಿರಗಳಿಗೆ ಪ್ರವೇಶಿಸುವ ಮುನ್ನ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಪಟ್ಟಿಯನ್ನು ಬಿಡುಗಡೆ ಗೊಳಿಸಿದ್ದಾರೆ. ಥರ್ಮಲ್ ಸ್ಕ್ರೀನಿಂಗ್ ನಡೆಸಿ ರೋಗಲಕ್ಷಣವಿಲ್ಲದ ವ್ಯಕ್ತಿಗಳನ್ನು ಮಾತ್ರ ಥಿಯೇಟರ್ ಒಳಗೆ ಅನುಮತಿಸಲಾಗುತ್ತದೆ.


ಸುದ್ದಿ ಓದಿ