ರಾಣೆಬೆನ್ನೂರ

ಇಂದು ಕುಸ್ತಿ, ಕಬಡ್ಡಿ ಗರಡಿಮನೆ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು ವಿಷಾಧಕರ ಸಂಗತಿ

ಇಂದು ಕುಸ್ತಿ, ಕಬಡ್ಡಿ ಗರಡಿಮನೆ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು ವಿಷಾಧಕರ ಸಂಗತಿ

ಇಂದು ಕುಸ್ತಿ, ಕಬಡ್ಡಿ ಗರಡಿಮನೆ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು ವಿಷಾಧಕರ ಸಂಗತಿ

ರಾಣೇಬೆನ್ನೂರ  16: ಭಾರತೀಯ  ಪ್ರಮುಖ ಕ್ರೀಡೆಗಳಾದ ಕುಸ್ತಿ, ಕಬಡ್ಡಿ, ಗರಡಿಮನೆಯಂತಹ ಪ್ರಮುಖ ಕ್ರೀಡೆಗಳ ಜೊತೆಗೆದೇಹದಂಡನೆಯ ತಾಣವಾಗಿರುವ ಗರಡಿಮನಿಯಿಂದ ಮನುಷ್ಯನ ದೇಹ ಸದೃಢ ಹಾಗೂ ಆರೋಗ್ಯಯುತವಾಗಿರುತ್ತದೆ ಎಂದು ಕೂಡಲಸಂಗಮದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಮಹಾಸ್ವಾಮಿಗಳು ಹೇಳಿದರು.  ಅವರು ಶುಕ್ರವಾರ ಇಲ್ಲಿನ ದೊಡ್ಡಪೇಟೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮಾರುತಿ ಗರಡಿಮನಿ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರಾಜ್ಯದ ಉತ್ತರ ಕರ್ನಾಟಕ ಭಾಗದಲ್ಲಿ ಇಂತಹ ಕುಸ್ತಿ ಮತ್ತು ಗಡಿಮನಿಯಂತಹ ಕ್ರೀಡೆಗಳು ಹೆಚ್ಚಾಗಿ ನಡೆಯುತ್ತಿದೆ ಗರಡಿಮನಿಯಿಂದ ಉತ್ತಮ ಆರೋಗ್ಯದ ಜೊತೆಗೆ ಶಾರೀರಿಕ ಸದೃಢತೆ ಉತ್ತಮವಾಗುವುದು ಎಂದರು. ಆದರೆ ಇಂದು ಕುಸ್ತಿ, ಕಬಡ್ಡಿ ಗರಡಿಮನಿ ಅಂತ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು ವಿಷಾಧಕರ ಸಂಗತಿಯಾಗಿದೆ. ಉತ್ತರ ಕರ್ನಾಟಕದ  ಕೆಲ ಭಾಗಗಳಲ್ಲಿ ಮಹಿಳೆಯರು ಸಹ ಗರಡಿಮನೆ ಅಂತಹ ಆಟಗಳಲ್ಲಿ ಭಾಗವಹಿಸಿ ವಿಶೇಷತೆ ಮೆರೆಯುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ.ಎಂದರು.    ಇದೀಗ ಜಿಮ್ ನಂತಹ ವ್ಯಾಪಾರಿಕರಣದ ಆಟಗಳು ನಗರದಲ್ಲಿ ಕಂಡು ಬರುತ್ತಿದ್ದು ಇದರಿಂದ ತಾತ್ಕಾಲಿಕ ದೇಹ ಸದೃಢತೆ ಆಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಊರು , ನಾಡು ದೇಶ ಕಟ್ಟುವ ಕಾಯಕದಲ್ಲಿ ಇಂತಹ ಕ್ರೀಡೆಗಳು ಹೆಚ್ಚು ಪ್ರಾಮುಖ್ಯತೆ ವಹಿಸುತ್ತಿವೆ. ಅದಕ್ಕಾಗಿ ಯುವಕರು ದೇಶಿಯ ಕ್ರೀಡೆಗಳಂತ ಆಟಗಳಿಗೆ ಪ್ರೋತ್ಸಾಹಿಸುವ ಮೂಲಕ ಉಳಿಸಿ ಬೆಳೆಸುವ ಕೆಲಸ ಮಾಡಬೇಕು.ನಮ್ಮ ಪೂರ್ವಜರು ಗ್ರಾಮದ ಸುಭಧ್ರತೆಗಾಗಿ, ಜನರ ದೇಹ ಸದೃಢ ತೆಗಾಗಿ ಪ್ರತಿ ಗ್ರಾಮಕ್ಕೊಂದು ಗರಡಿಮನಿಗಳನ್ನು ನಿರ್ಮಸಿ ತನ್ನ ಮೂಲಕ ಜಟ್ಟಿಗಳನ್ನು ತಯಾರಿಸುತ್ತಿದ್ದರು.  

  ಇದರಿಂದ ಯುವಕರು ಚಟಮುಕ್ತರಾಗಿ ಸಮಾಜ  ನಿರ್ಮಾಣ, ಗ್ರಾಮ ಸಂರಕ್ಷಣೆ ಮಾಡುತ್ತಿದ್ದರು. ಇಂದು ಆಧುನಿಕ ಭರಾಟೆಯಲ್ಲಿ ಗರಡಿಮನಿಗಳು ಕಣ್ಮರೆಯಾಗುತ್ತಿವೆ. ಗರಡಿಮನಿಯಲ್ಲಿ ಪಳಗಿದ ಪೈಲ್ವಾನರು ಶಾಶ್ವತ ಜಟ್ಟಿಗಳಾಗುವ ಜೊತೆಗೆ ಆರೋಗ್ಯವಂತರಾಗಿರುತ್ತಾರೆ. ಎಂದರು.  ಸ್ಥಳೀಯ ಯುವಕರು ದುಶ್ಚಟಗಳ ದಾಸರಾಗದೆ, ಈ ಗರಡಿಮನಿಯಲ್ಲಿ ಪಳಗುವ ಮೂಲಕ ಇದರ ಸದುಪಯೋಗ ಪಡೆದುಕೊಂಡು ಉತ್ತಮ ನಾಗರಿಕರಾಗಿ ದೇಶ ಕಟ್ಟುವ ಕೆಲಸ ಮಾಡಬೇಕು. ಅಲ್ಲದೆ  ಕುಟುಂಬಕ್ಕೆ ಹೊರೆಯಾಗದೆ ತಂದೆ ತಾಯಿಗಳಿಗೆ ಮತ್ತು ತಾಲೂಕಿಗೆ ಕೀರ್ತಿ ತರುವ ಜವಾಬ್ದಾರಿ ಹೋರಬೇಕು ಎಂದರು.       

ಮಾರುತಿ ಗರಡಿಮನಿ ಆಡಳಿತ ಮಂಡಳಿ ಅಧ್ಯಕ್ಷ ಮಂಜುನಾಥ ಬೇತೂರ, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಜಿ.ಪಂ.ಮಾಜಿ ಸದಸ್ಯ  ಸಂತೋಷಕುಮಾರ ಪಾಟೀಲ,  ಸಿದ್ದಣ್ಣ ಚಿಕ್ಕಬಿದರಿ, ವಕೀಲ ಕುಮಾರ ಎಳೇಹೊಳಿ, ಪ್ರಭುಸ್ವಾಮಿ ಕರ್ಜಗಿಮಠ ಮತ್ತಿತರರು ಮಾತನಾಡಿದರು.   ಪೈಲ್ವಾನ ಈರ​‍್ಪ  ಶ್ಯಾಮಣ್ಣ ಬೇತೂರ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕೊಟ್ರ​‍್ಪ ಸಿದ್ದಾಳಿ, ನಾಗಣ್ಣ ಗೌಳಿ, ಕರಬಸಪ್ಪ  ಮಾಕನೂರ, ಮೂಕಪ್ಪ ಸೊಟ್ಟಮೂಕಣ್ಣನವರ, ನಾಗಪ್ಪ ಕುರಬರ, ಸಮಿತಿ ಸದಸ್ಯರಾದ ಬಿದ್ದಾಡೆಪ್ಪ ಚಕ್ರಸಾಲಿ. ಕಪ್ಪತ್ತಪ್ಪ ಸಾಲಿಮನಿ, ಸಣ್ಣಬಸಪ್ಪ ಗೌಡಶಿವಣ್ಣನವರ, ಕುಬೇರ​‍್ಪ ಮಾಳಗಿ, ಚನ್ನಪ್ಪ ಪಾಗಾದವರ, ಬಸವರಾಜ ಮುದೋಳ್ಕರ, ಮುತ್ತಣ್ಣ ಕೊಳೊರ, ಶಿವರಾಜ ಬೇತೂರ, ವಿಜಯಕುಮಾರ ರೊಡ್ಡನವರ, ಶಿವರಾಜ ಚಿಮ್ಮಲಗಿ ಮತ್ತಿತರರು ಇದ್ದರು.ಇದೇ ಸಂದರ್ಭದಲ್ಲಿ ನಗರ,ತಾಲೂಕು, ಜಿಲ್ಲೆ ಮತ್ತು ನಾಡಿನ ಪ್ರಸಿದ್ಧ  ಪೈಲ್ವಾನ್ ರನ್ನು ಸನ್ಮಾನಿಸಿ ಗೌರವಿಸಲಾಯಿತು. 


ಸುದ್ದಿ ಓದಿ