ಧಾರವಾಡ - ಹುಬ್ಬಳ್ಳಿ

ಇಂದು ಕಿತ್ತೂರ ಚನ್ನಮ್ಮ ವಿಜಯೋತ್ಸವ 200ನೇ ಸಂಭ್ರಮಾಚರಣೆ

ಇಂದು ಕಿತ್ತೂರ ಚನ್ನಮ್ಮ ವಿಜಯೋತ್ಸವ 200ನೇ ಸಂಭ್ರಮಾಚರಣೆ


            ಇಂದು ಕಿತ್ತೂರ ಚನ್ನಮ್ಮ ವಿಜಯೋತ್ಸವ 200ನೇ ಸಂಭ್ರಮಾಚರಣೆ  


ಧಾರವಾಡ 22 ;  ಕರ್ನಾಟಕ ವಿದ್ಯಾವರ್ಧಕ ಸಂಘವು ಶಾಂತಾದೇವಿ ಮಾಳವಾಡ ದತ್ತಿ ಅಂಗವಾಗಿ ದಿ.23     ಬುಧವಾರ ಮುಂಜಾನೆ 10 ರಿಂದ ಸಂಘದ ನಾಡೋಜ ಡಾ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ  ‘ಕಿತ್ತೂರ ಚನ್ನಮ್ಮ ವಿಜಯೋತ್ಸವ 200ನೇ ವರ್ಷದ’ ಸಂಭ್ರಮಾಚರಣೆ ಏರಿ​‍್ಡಸಿದೆ.  

  

ಮುಂಜಾನೆ 10 ಗಂಟೆಗೆ ಕಿತ್ತೂರ ಚನ್ನಮ್ಮ ವಿಜಯೋತ್ಸವದ ಜ್ಯೋತಿ ಮೆರವಣಿಗೆಯ ಉದ್ಘಾಟನೆಯನ್ನು ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಜಿ.ಆರ್‌.ಜೆ., ಭಾ.ಆ.ಸೇ ಮಾಡುವರು. 

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ  ಬೆಲ್ಲದ ಅಧ್ಯಕ್ಷತೆ ವಹಿಸುವರು.  

ಮುಂಜಾನೆ 11-30 ಗಂಟೆ : 

ಸ್ವಾತಂತ್ರ್ಯದ ಅರಿವು  ಮಹಿಳಾ ಹೋರಾಟದ ಹೆಜ್ಜೆಗಳು ಕುರಿತು ವಿಚಾರ ಸಂಕಿರಣ ಆಯೋಜಿಸಿದೆ.  

ಧಾರವಾಡ  ವಿದ್ಯಾರಣ್ಯ ಪ. ಪೂ. ಕಾಲೇಜಿನ ಪ್ರಾಚಾರ್ಯೆ ಡಾ. ಶರಣಮ್ಮ ಗೋರೆಬಾಳ ವಿಷಯ ಮಂಡಿಸುವರು. 

ವಿಶ್ರಾಂತ ಪ್ರಾಧ್ಯಾಪಕಿ  ಡಾ. ಶಾಂತಾ ಇಮ್ರಾಪೂರ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸುವರು. 

ಮಧ್ಯಾಹ್ನ 3 ಗಂಟೆ :  

ಪದವಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ದೇಶ ಭಕ್ತಿಗೀತೆ ಮತ್ತು ಕೋಲಾಟ ಸ್ಪರ್ಧೆ ಜರುಗುವುದು. 

ಸಂಜೆ 5 ಗಂಟೆ : 

ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜರುಗುವುದು. 

ಹಂಪಿ ಕನ್ನಡ ವಿ.ವಿ. ಯ ವಿಶ್ರಾಂತ ಕುಲಪತಿ ಡಾ. ಮಲ್ಲಿಕಾ ಘಂಟಿ ಸಮಾರೋಪ ನುಡಿಗಳನ್ನಾಡುವರು. 

ಧಾರವಾಡ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು.  

ಸಾಹಿತಿಗಳು, ಕಲಾವಿದರು, ಚಿಂತಕರು, ವಿದ್ಯಾರ್ಥಿಗಳು, ಸಂಘದ ಆಜೀವ ಸದಸ್ಯರು, ಆಸಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ಕೋರಿದ್ದಾರೆ.                      

                                            

ಶ್ರೀಮತಿ ಶಾಂತಾದೇವಿ ಮಾಳವಾಡ 

1922 ರಲ್ಲಿ ಡಿಸೆಂಬರ 10 ರಂದು ಬೆಳಗಾವಿಯಲ್ಲಿ ಜನಿಸಿ 1937 ರಲ್ಲಿ ಪ್ರೊ. ಸ.ಸ.ಮಾಳವಾಡ ಅವರ ಧರ್ಮಪತ್ನಿಯಾಗಿ ಶಾಂತಾದೇವಿ ಮಾಳವಾಡ  ಪತಿಯ ಮಾರ್ಗದರ್ಶನದಲ್ಲಿ ಸುಮಾರು ಆರು ದಶಕಗಳ ಕಾಲ ಸಾಹಿತ್ಯ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಅನೇಕ ಕೃತಿ ರಚನೆ ಮಾಡಿ ಹಲವಾರು ಪ್ರತಿಷ್ಠಿತ ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿದ್ದ ಆದರಣೀಯ ಹಿರಿಯ ಲೇಖಕಿ. ಉತ್ತರ ಕರ್ನಾಟಕ ಲೇಖಕಿಯರ ಸಂಘದ ಸಂಸ್ಥಾಪಕ. ಹಿರಿಯ ಸದಸ್ಯರಲ್ಲಿ ಒಬ್ಬರು ಮತ್ತು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಆಜೀವ ಗೌರವ ಅಧ್ಯಕ್ಷರೂ ಆಗಿದ್ದರು.  

ಜಯದೇವಿ ತಾಯಿ ಲಿಗಾಡೆ ಮಂಡ್ಯದಲ್ಲಿ ಜರುಗಿದ 48 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲನೇ ಮಹಿಳಾ ಅಧ್ಯಕ್ಷರಾದರೆ 2000 ಜೂನ 24, 25, 26 ರಂದು ಬಾಗಲಕೋಟೆಯಲ್ಲಿ ಜರುಗಿದ 68 ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ 2 ನೇ ಮಹಿಳಾ ಅಧ್ಯಕ್ಷರಾಗಿದ್ದವರು ಶ್ರೀಮತಿ ಶಾಂತಾದೇವಿ ಮಾಳವಾಡರು.  

ಪ್ರತಿ ವರುಷ ಸಂಘದಲ್ಲಿ ಕಿತ್ತೂರ ಚನ್ನಮ್ಮನ ವಿಜಯೋತ್ಸವ ಕಾರ್ಯಕ್ರಮ ಜರುಗಬೇಕೆಂದು ಆಶಯ ವ್ಯಕ್ತಪಡಿಸಿ 1978 ರಲ್ಲಿ ದತ್ತಿ ನಿಧಿ ಸ್ಥಾಪಿಸಿ ಕಾರ‌್ಯಕ್ರಮ ಮಾಡಲು  ಸಂಘಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ದಿ: 7-8-2005 ರಂದು ನಮ್ಮನ್ನೆಲ್ಲ ಅಗಲಿದರು. ಬನ್ನಿ ಕಾರ‌್ಯಕ್ರಮದಲ್ಲಿ ಭಾಗವಹಿಸಿ. 


ಸುದ್ದಿ ಓದಿ