ರಾಣೆಬೆನ್ನೂರ

ಇಂದು ವಿಶ್ವ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ದಿನಾಚರಣೆ

ಇಂದು ವಿಶ್ವ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ದಿನಾಚರಣೆ

ರಾಣೇಬೆನ್ನೂರು : ಇಲ್ಲಿನ ಮಾರುತಿ ನಗರದ ಮರುಳಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಸೆ. 27ರಂದು ಬುಧವಾರ ಸಂಜೆ 4:30 ಗಂಟೆಗೆ ವಿಶ್ವ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳ ದಿನಾಚರಣೆ ಸಮಾರಂಭವು ನಡೆಯಲಿದೆ ಎಂದು ಶ್ರೀ ರೇಣುಕಾ ಎಲ್ಲಮ್ಮ ಕಿವುಡ ಹಾಗೂ ಮೂಕ ಮಕ್ಕಳ, ಸೇವಾ ಅಂದರ ಸಂಸ್ಥೆಯು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.         

 ಅಂದು ಮುಂಜಾನೆ 10.30 ಗಂಟೆಗೆ ನಿನ್ನೆ ನಾ ಪ್ರಧಾನ ಅಂಚೆ ಕಚೇರಿ ಬಾಪೂಜೆ ವೃತ್ತದಲ್ಲಿ ದಿನಾಚರಣೆ ನಿಮಿತ್ತ ಮೆರವಣಿಗೆ ಆಯೋಜಿಸಿದ್ದು ತಾಲೂಕ ಕಾ. ನಿ. ಪ ಸಂಘದ ಅಧ್ಯಕ್ಷ ಎಸ್‌. ಟಿ. ವೇದಮೂರ್ತಿ, ಅವರು ಉದ್ಘಾಟಿಸಿ ಚಾಲನೆ ನೀಡುವರು. ಲಯನ್ಸ್‌ ಅಧ್ಯಕ್ಷ ಪ್ರಭುಲಿಂಗಪ್ಪ ಹಲಗೇರಿ, ಉಪಸ್ಥಿತರಿರುವರು. ಸಂಜೆ ನಡೆಯುವ ಸಭಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಂದಿಗುಡಿ ಬ್ರಹನ್ಮಠದ ಜಗದ್ಗುರು ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮಿಗಳು ವಹಿಸುವರು. ಕರ್ನಾಟಕ ಸರ್ಕಾರದ ಉಪ ಸಭಾಪತಿ ರುದ್ರ​‍್ಪ ಲಮಾಣಿ ಅವರು ಸಮಾರಂಭ ಉದ್ಘಾಟಿಸುವರು. ಸೇವಾ ಅಂದರೆ ಸಂಸ್ಥೆಯ ಕಾರ್ಯದರ್ಶಿ ರೇಣುಕಾ ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಶಾಸಕ ಪ್ರಕಾಶ್ ಕೋಳಿವಾಡ, ಮಾಜಿ ಶಾಸಕ ಅರುಣ್ ಕುಮಾರ್ ಪೂಜಾರ್, ಬಿಇಓ ಎಂ.ಎಸ್‌. ಪಾಟೀಲ್, ಜಿಲ್ಲಾ ಕಲ್ಯಾಣ ಅಧಿಕಾರಿ ಶ್ರೀನಿವಾಸ ಆಲದರ್ತಿ, ಜಿಲ್ಲಾ ಸಂಘದ ಅಧ್ಯಕ್ಷ ಪುಟ್ಟಪ್ಪ ಜಲದಿ, ನಗರಸಭಾ ಸದಸ್ಯರಾದ ಶೇಖಣ್ಣ ಹೊಸಗೌಡ್ರ, ಪ್ರಕಾಶ ಬುರುಡಿಕಟ್ಟಿ ಡಾ: ಶಂಕರ್ ಎಸ್ ಕೆ. ಸೇರಿದಂತೆ ಮತ್ತಿತರ ಗಣ್ಯರು ಉಪಸ್ಥಿತರಿರುವರು.ಸಮಾರಂಭದ ನಂತರ ಶ್ರವಣ ನೋನ್ಯತೆಯುಳ್ಳ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. 


ಮಧ್ಯಾಹ್ನದ ಬಿಸಿ ಊಟ ವಿಶೇಷ ಉಪಹಾರ ಶೈಕ್ಷಣಿಕ ಪ್ರಗತಿಗೆ ಸಹಕಾರಿ: ಎಂ.ಹೆಚ್‌. ಪಾಟೀಲ್  

 ರಾಣೇಬೆನ್ನೂರು 26: ಪ್ರಾಥಮಿಕ ಶಿಕ್ಷಣವನ್ನು ಮಕ್ಕಳು ಪ್ರತಿಯೊಂದು ಹಂತದಲ್ಲಿ ಅತ್ಯುತ್ತಮವಾಗಿ ಪರಿಪೂರ್ಣ ಆಹಾರದೊಂದಿಗೆ ಕಲಿಯಬೇಕು, ಕಲಿಕೆಯ ಜೊತೆಗೆ ದಷ್ಟ ಪುಷ್ಟವಾಗಿ ಬೆಳೆಯಬೇಕು ಜೊತೆಗೆ, ಶೈಕ್ಷಣಿಕ ಪ್ರಗತಿ ಸಾಧಿಸಬೇಕು ಎನ್ನುವ ದೂರ ದೃಷ್ಟಿಯಿಂದಾಗಿ ಸರ್ಕಾರ ಮಧ್ಯಾಹ್ನದ ಬಿಸಿ ಊಟ, ಮತ್ತು ವಾರಕ್ಕೊಂದು ಬಾರಿ ವಿಶೇಷವಾದಂತಹ  ಉಪಹಾರವನ್ನು ನೀಡುತ್ತಲಿದೆ.ಮಕ್ಕಳುಇದನ್ನು ಸಮರ​‍್ಕವಾಗಿ ಉಪಯೋಗಿಸಿಕೊಂಡು, ಶಿಕ್ಷಣ ಪ್ರಗತಿ ಸಾಧಿಸಬೇಕು ಎಂದು ಕ್ಷೇತ್ರ  ಶಿಕ್ಷಣಾಧಿಕಾರಿ ಎಂ.ಹೆಚ್‌.ಪಾಟೀಲ್ ಹೇಳಿದರು.  

ಸಿದ್ದೇಶ್ವರ ನಗರದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ನಂಬರ್ 4ರಲ್ಲಿ ಆಯೋಜಿಸಲಾಗಿದ್ದ, ವಾರದ  ವಿಶೇಷ ಇಡ್ಲಿ, ಸಾಂಬಾರ್, ಚಟ್ನಿ ಉಪಹಾರ ವಿತರಣೆಗೆ ಚಾಲನೆ ನೀಡಿ ಮಾತನಾಡಿದರು.       

      ಸಮಾಜದಲ್ಲಿ ಇದ್ದವರು ಇದ್ದಾರೆ ಇಲ್ಲದವರು ಇದ್ದಾರೆ, ಶಾಲೆಗೆ ಬರುವಾಗ  ಎಲ್ಲರೂ ಪರಿಪೂರ್ಣ ಉಪಹಾರ ಸೇವಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಮಕ್ಕಳು ಸಹ ಆಕಸ್ಮಿಕವಾದರೂ ವಿಶೇಷ ಉಪಹಾರವನ್ನು ಸೇವಿಸಿ ಮಾನಸಿಕ ತೃಪ್ತಿ ಕಾಣಬೇಕಾಗಿದೆ ಈ ನಿಟ್ಟಿನಲ್ಲಿ, ಶಿಕ್ಷಣ ಇಲಾಖೆ ಜಾರಿಗೆ ತಂದಿರುವ ಈ ಯೋಜನೆ ಮಕ್ಕಳಿಗೆ ಸಹಕಾರಿಯಾಗಿದೆ ಎಂದರು. ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ವೈ. ಐ. ಹರಗೊಲ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಶಾಲೆಯ ಎಲ್ಲಾ ಶಿಕ್ಷಕ ಶಿಕ್ಷಕರು, ಸಿಬ್ಬಂದಿ ಹಾಗೂ ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಪದಾಧಿಕಾರಿಗಳು, ಶಿಕ್ಷಣ ಪ್ರೇಮಿಗಳು  ಉಪಸ್ಥಿತರಿದ್ದರು. 



ಸುದ್ದಿ ಓದಿ