ಶನೈಶ್ವರ ಮಂದಿರದಲ್ಲಿ ಇಂದು ಸ್ವಾಮಿಯ ಉತ್ಸವ
ರಾಣೇಬೆನ್ನೂರ06: ರಾಷ್ಟ್ರದ ಎರಡನೇಯ ಹಾಗೂ ರಾಜ್ಯದ ಮೊದಲನೆಯದೆಂಬ ಖ್ಯಾತಿಗೆ ಪ್ರಸಿದ್ದವಾಗಿರುವ ನಗರದ ಹೊರವಲಯಲ್ಲಿರುವ ಹಿರೇಮಠ ಶನೈಶ್ವರಸ್ವಾಮಿಯ ಉತ್ಸವವು ಶ್ರೀಮಠದ ಶಿವಯೋಗಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಡಿ.7, 8 ಹಾಗೂ 9ರಂದು ಈ ವರ್ಷ ಬರ ಛಾಯೆ ನಿಮಿತ್ಯ ಸರಳ ಹಾಗೂ ಸಾಂಕೇತಿಕವಾಗಿ ಜರುಗಲಿದೆ.
ಡಿ.7ರಂದು ಬೆಳಗಿನ ಜಾವಕುದರಿಹಾಳ ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯಿಂದ ಪಾದಯಾತ್ರೆಯ ಮೂಲಕ ಗಂಗೆ ತರುವುದು ಹಾಗೂ ಕುಂಭೋತ್ಸವ ನಡೆಯಲಿದೆ. ಡಿ.8ರಂದು ಸಂಜೆ ಶ್ರೀಮಠದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ಹಾಗೂ ಭದ್ರಕಾಳಿ ಸಮೇತ ವೀರಭದ್ರಸ್ವಾಮಿ ಕಲ್ಯಾಣ ಮಹೋತ್ಸವ ನೆರವೇರಲಿದೆ.
ಡಿ.9ರಂದು ಮುಂಜಾನೆಯಿಂದ ಸಂಜೆವರೆಗೆ ಹೋಮ, ಹವನ, ಅಭಿಶೇಕ, ಪುಷ್ಪಾಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 7 ಘಂಟೆ 7 ನಿಮಿಷಕ್ಕೆ ದೀಪೋತ್ಸವವು ನೆರವೇರಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.