ಇಂದಿನ ವಿದ್ಯಾರ್ಥಿಗಳು ಮೌಢ್ಯತೆಗೆ ಬಲಿಯಾಗದೆ ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು: ಡಾ.ಆರ್.ಎಂ.ಕುಬೇರಪ್ಪ
ರಾಣೇಬೆನ್ನೂರು 01: ಇಂದಿನ ವಿದ್ಯಾರ್ಥಿಗಳು, ಯಾವುದೇ ರೀತಿಯ ಮೌಢ್ಯತೆಗೆ ಬಲಿಯಾಗದೆ, ವೈಜ್ಞಾನಿಕ ಮನೋಭಾವನೆಯನ್ನು, ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ದೇಶದ ಪ್ರಗತಿಗೆ ಮುಂದಾಗಬೇಕು ಎಂದು ಬಿಎಜೆಎಸ್ಎಸ್ ಕಾಲೇಜ್ ಆಡಳಿತಾಧಿಕಾರಿ, ಡಾ: ಆರ್. ಎಂ.ಕುಬೇರ್ಪ ಕರೆ ನೀಡಿದರು. ಬಿ ಡಿ ಕಾಲೇಜಿನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಹಾಗೂ ಮಾತಾ ಗಾಯಿತ್ರಿ ಸ್ಪರ್ಧಾ ಚೇತನ ಸ್ಪರ್ಧಾತ್ಮಕ ವಿಭಾಗ ಉದ್ಘಾಟಿಸಿ ಮಾತನಾಡಿದರು.
ಭಾರತದ ಭವಿಷ್ಯ ಇಂದಿನ ವಿದ್ಯಾರ್ಥಿಗಳು, ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ಅವರ ವಿಕಾಸತೆ ಸಾಧ್ಯವಾಗುವುದು ಈ ನಿಟ್ಟಿನಲ್ಲಿ ಯುವ ಸಮುದಾಯ ಸಮಗ್ರ ಚಿಂತನೆ ನಡೆಸಬೇಕಾದ ಇಂದಿನ ಅಗತ್ಯವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ,ಡಾ. ಎಂ.ಎಂ.ಮೃತ್ಯುಂಜಯ ಅವರು ಮಾತನಾಡಿ “ವಿದ್ಯಾಥಿ9ಗಳಲ್ಲಿ ಮಾಟ ಮಂತ್ರಗಳಿಂದ ದೂರವಿದ್ದು ವಿಜ್ಞಾನದೆಡೆಗೆ ಬಂದು ವೈಚಾರಿಕ ಮನೋಭಾವನೆ ರೂಢಿಸಿಕೊಳ್ಳಬೇಕು.ವಿದ್ಯೆ ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎನ್ನುವ ವಿವೇಕವಾಣಿ ಪರಿಪೂರ್ಣಗೊಳಿಸುವಲ್ಲಿ ಮುಂದಾಗಬೇಕು ಎಂದರು. ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಪ್ರೊ.ಹೆಚ್.ಎ.ಭಿಕ್ಷಾವತಿ9ಮಠ, ಅವರು ಮಾತನಾಡುತ್ತಾ “ಪ್ರತಿಯೊಂದು ಧಮ9ದಲ್ಲಿಯೂ ಮೂಢನಂಬಿಕೆಗಳು ಇವೆ. ಅವುಗಳಿಂದ ದೂರವಿದ್ದು ಅದರಲ್ಲಿರುವ ವೈಚಾರಿಕ ಮತ್ತು ವೈಜ್ಞಾನಿಕ ಮೌಲ್ಯಗಳನ್ನು ಅಳವಡಿಸಿಕೊಂಡು ಸಾಗಬೇಕು ಎಂದು ಕರೆ ನೀಡಿದರು. ಜ್ಞಾನ ಮತ್ತು ವಿಜ್ಞಾನ ಮಾನವನ ಅವಿಭಾಜ್ಯ ಅಂಗವಾಗಬೇಕು ಎಂದು ಕರೆ ನೀಡಿದ, ಕಾಲೇಜು ಪ್ರಾಚಾರ್ಯ ಡಾ.ಕೊಟ್ರೇಶ ಬಸಾಪುರ ಅವರು ಸಾಧ್ಯಾಂತವಾಗಿ ಉಪನ್ಯಾಸ ನೀಡಿದರು.
ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದು ಹೇಗೆ? ವಿಷಯ ಕುರಿತು ಸಂಪನ್ಮೂಲ ವ್ಯಕ್ತಿ ಎಲ್.ರಾಮಚಂದ್ರರಾವ್ ಅವರು ಮಾತನಾಡಿದರು.ಕಾಯಕ್ರಮದ ಪ್ರಾಸ್ತಾವಿಕ ನುಡಿಯನ್ನು ಪ್ರೊ.ಪರಶುರಾಮ ಪವಾರ ಮಾತನಾಡಿದರು . ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾಥಿ9ಗಳಾದ ಕು.ಶೋಭಾ ಕುಂಚೂರ, ಹಷಿ9ತಾ ಹಾಗೂ ಚನ್ನವೀರಸ್ವಾಮಿ ಮತ್ತು ತಂಡದವರಿಂದ ಮೌಢ್ಯಗಳಿಂದ ದೂರವಿರಿ ಕಿರು ನಾಟಕವನ್ನು ಪ್ರದರ್ಶಿಸಿ ವಿದ್ಯಾರ್ಥಿಗಳ ಗಮನ ಸೆಳೆದರು. ವೇದಿಕೆಯಲ್ಲಿ ಕಾಲೇಜು ಉಪಪ್ರಾಚಾಯ9 ಶಿವಕುಮಾರ ಬಿಸಲಳ್ಳಿ, ಡಾ.ಹೆಚ್.ಐ.ಬ್ಯಾಡಗಿ, ವಂದನಾ ಟಿ.ಎನ್, ಮುತ್ತುರಾಜ ಸಿದ್ದಣ್ಣನವರ, ಶ್ರೀಮತಿ ವೀಣಾ ಮತ್ತು ಪ್ರಥಮ ಹಾಗೂ ದ್ವಿತೀಯ ವಷ9ದ ಪ್ರಶಿಕ್ಷಣಾಥಿ9ಗಳು ಉಪಸ್ಥಿತರಿದ್ದರು. ಕು.ಮೇಘನಾ ಮಾಕನೂರ, ಸ್ವಾಗತಿಸಿ, ಬಿ.ಬಿ.ಆಯೀಷಾ ನಿರೂಪಿಸಿ, ಕು. ಮೇಘಾ ವಂದಿಸಿದರು.