ರಾಣೆಬೆನ್ನೂರ

ಅರಮನೆಯಲ್ಲಿ ತಿರುಪತಿ ಶೈಲಿಯ ಗಣೇಶ: ಸಾರ್ವಜನಿಕರು ಸಂಸ್ಕೃತಿಯ ಭಾಗವಾಗಬೇಕು

ಅರಮನೆಯಲ್ಲಿ ತಿರುಪತಿ ಶೈಲಿಯ ಗಣೇಶ: ಸಾರ್ವಜನಿಕರು ಸಂಸ್ಕೃತಿಯ ಭಾಗವಾಗಬೇಕು

ರಾಣೇಬೆನ್ನೂರು 29:  ನಗರದ ಕಾಕಿ ಕಲ್ಯಾಣ ಮಂಟಪದಲ್ಲಿ ತಿರುಪತಿ ಶೈಲಿಯ ಗಣೇಶನನ್ನು ನೋಡಿ ತುಂಬಾ ಸಂತೋಷವಾಯಿತು. ಉತ್ತರ ಭಾರತೀಯ ಶೈಲಿಯಲ್ಲಿರುವ ಗಣೇಶ 21ಅಡಿ ಎತ್ತರದಲ್ಲಿರುವ ಗಣೇಶನ ಅದ್ಭುತವಾಗಿ ಕಲಾ ಕೃತಿಯನ್ನು ಕಲಾಭಿಮಾನಿಗಳು ಮಾಡಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ  ಸಾರ್ವಜನಿಕರು ಬಂದು ವಿಘ್ನೇಶ್ವರನ ಆಶೀರ್ವಾದ ಪಡೆಯಲು ಮುಂದಾಗಬೇಕು ಎಂದು ನಗರದ ಶನೇಶ್ವರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು.ತಾಲೂಕ ಆಡಳಿತ ಭವನದ ಬಳಿ ಇರುವ ಕಾಕಿ ಜನ ಸೇವಾ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ತಿರುಪತಿ ಶೈಲಿಯ ಗಣೇಶೋತ್ಸವ ಮೂರ್ತಿಗೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು ನಗರದಲ್ಲಿ ಅರಮನೆಯಲ್ಲಿ ಮಹಾರಾಜನಂತೆ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ.  

ಕಾಕಿ ಸಂಸ್ಥೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅದ್ಭುತವಾಗಿವೆ. ಹಾಗೂ ಬಂದಂತ ಭಕ್ತರಿಗೆ ಜನ ಸೇವಾ ಸಂಸ್ಥೆಯಿಂದ ಲಕ್ಕಿ ಡ್ರಾ ಮೂಲಕ ಕೋಪನ್ ಗಳನ್ನು ಮಾಡಿದ್ದಾರೆ. ಕೆಲವು ಜನರು ತಿರುಪತಿಗೆ ಹೋಗದೆ ಇದ್ದವರು ಅದೇ ರೂಪದ ಇಲ್ಲಿ ಗಣೇಶನನ್ನು ನೋಡಿ ಖುಷಿಪಡುವುದು ತಾಲೂಕಿನ ಜನರು ಈ ಗಣೇಶನ ದರ್ಶನ ಪಡೆಯುತ್ತಿವುದು ಅದೃಷ್ಟವಂತರು ಎಂದರು.ಕಾಕಿ ಜನ ಸೇವಾ ಸಂಸ್ಥೆಯ ಅಧ್ಯಕ್ಷರಾದ ಶ್ರೀನಿವಾಸ್ ಕಾಕಿ ಮಾತನಾಡಿ ಇಂದಿನಿಂದ 11 ದಿನಗಳ ಕಾಲ ಮಹಾರಾಜ್ ವಿಘ್ನೇಶ್ವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಬಂದಂತ ಭಕ್ತಾದಿಗಳಿಗೆ ಪ್ರತಿನಿತ್ಯ ಅನ್ನಸಾರೆ​‍್ಣಯನ್ನು ಆಯೋಜಿಸಲಾಗಿದೆ. ಇದರ ಉಪಯೋಗವನ್ನು ತಾಲೂಕಿನ ಜನರು ಪಡೆದುಕಳ್ಳಬೇಕು. ಸಂಸ್ಥೆಯಿಂದ ಲಕ್ಕಿ ಡ್ರಾ 50 ರೂ ಕೋಪನಗಳನ್ನು ಮಾಡಲಾಗಿದೆ. ಗಣೇಶನ ಹಬ್ಬದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿಜೇತರಿಗೆ ಸೂಕ್ತ ಬಹುಮಾನವನ್ನು ನೀಡಲಾಗುವುದು. ಸಾರ್ವಜನಿಕರ ಮಧ್ಯ ಲಕ್ಕಿ ಡ್ರಾವನ್ನು ಎತ್ತಲಾಗುವುದು ಎಂದರು. ಕಲಾವಿದ ಪ್ರಕಾಶ್ ಗಚ್ಚಿನಮಠ ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ಶಿವಾನಂದ ದೇವರಗುಡ್ಡ ನಿರೂಪಿಸಿದರು.ಇದೇ ಸಂದರ್ಭದಲ್ಲಿ ನಗರದ ಲೈನ್ಸ್‌ ಕ್ಲಬ್ ನ ಅಧ್ಯಕ್ಷರಾದ ಪ್ರಭುಲಿಂಗಪ್ಪ ಹಲಗೇರಿ, ತಾಲೂಕ ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಪಿ.ವಿ ಮಠದ, ಶಿವಾನಂದ ಸಾಲಗೇರಿ, ಶಿವಾನಂದ ಬಾಗಾದಿ,ಆರ್ ಎಸ್ ಪಾಟೀಲ್ ಹಿರಿಯ ಮುಖಂಡರು ಸಮಾಜದ ಬಂಧುಗಳು ಪಾಲ್ಗೊಂಡಿದ್ದರು. 


ಸುದ್ದಿ ಓದಿ