24ರಂದು ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನ
ಹೂವಿನ ಹಡಗಲಿ 19: ಬೆಂಗಳೂರಿನ ನಿರ್ದಿಗಂತ ರಂಗ ತಂಡದವರಿಂದ ಅಕ್ಟೋಬರ್ 24 ರಂದು "ತಿಂಡಿಗೆ ಬಂದ ತುಂಡೇರಾಯ" ನಾಟಕ ಪ್ರದರ್ಶನ ಹಾಗೂ ರಂಗ ಸಂವಾದ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ ಪಿ ಎಂ ಅಶೋಕ್ ತಿಳಿಸಿದ್ದಾರೆ.
ಪಟ್ಟಣದ ಜಿಬಿಆರ್ ಕಾಲೇಜಿನ ಬಯಲು ರಂಗ ವೇದಿಕೆಯಲ್ಲಿ ನಾಟಕ ಪ್ರದರ್ಶನ ನಡೆಯಲಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ರಂಗ ಒಕ್ಕಲು, ಹುಗಲೂರು ಸ್ವರದೇಸಿ, ಹೂವಿನಹಡಗಲಿ ಇವರ ಸಹಯೋಗದಲ್ಲಿ ಇದೇ ಅಕ್ಟೋಬರ್ 24 ರ ಗುರುವಾರ ಸಂಜೆ 5:30ಕ್ಕೆ ರಂಗ ಸಂವಾದ ಹಾಗೂ ಸಂಜೆ 6:30ಕ್ಕೆ *ತಿಂಡಿಗೆ ಬಂದ ತುಂಡೇರಾಯ* ನಾಟಕ ಆಯೋಜಿಸಲಾಗಿದೆ.ಧಾರವಾಡದ ರಂಗಕರ್ಮಿ ಮಹಾದೇವ ಹಡಪದ ಅವರು ಹೂವಿನಹಡಗಲಿ ಯುವ ರಂಗಕರ್ಮಿಗಳು ಹಾಗೂ ರಂಗಾಸಕ್ತರೊಂದಿಗೆ ರಂಗಭೂಮಿಗೆ ಸಂಬಂಧಿಸಿದಂತೆ ಸಂವಾದ ನಡೆಸಲಿದ್ದಾರೆ.ನಾಟಕ ಸಂಜೆ 6:30ರಿಂದ ಜರ್ಮನಿಯ ನಾಟಕಕಾರ ಬರ್ಟೋಲ್ಟ್ ಬ್ರೇಕ್ಟ್ ಅವರ ಖಿಜ ಖಣಛಟಜ ಖಜ ಠ ಂಡಿಣಣಡಿಠ ಗ ನಾಟಕವನ್ನು ನಿರ್ದೇಶಕ ಶಕೀಲ್ ಅಹ್ಮದ್ ಅವರು ಕನ್ನಡಕ್ಕೆ ತಂದಿದ್ದಾರೆ. ಬೆಂಗಳೂರಿನ ನಿರ್ದಿಗಂತ ತಂಡದ ಕಲಾವಿದರು ನಾಟಕ ಪ್ರಸ್ತುತ ಪಡಿಸಲಿದ್ದಾರೆ.ರಂಗಾಸಕ್ತರಿಗೆ ಪ್ರವೇಶ ಉಚಿತ.ಹೆಚ್ಚಿನ ಸಂಖ್ಯೆಯಲ್ಲಿ ರಂಗಪ್ರಿಯರು ಭಾಗವಹಿಸಲು ತಿಳಿಸಿದ್ದಾರೆ.