ಸಹಕಾರಿ ಸಂಘಟನೆಗಳು ಅಭಿವೃದ್ಧಿ ಕಾಣಬೇಕಾದರೆ ಸಕಾಲಕ್ಕೆ ಮರುಪಾವತಿ ಅಗತ್ಯ: ಹನುಮಂತಪ್ಪ
ರಾಣೇಬೆನ್ನೂರು:-ನಗರದ ಗುರು ಮಾರ್ಕಂಡೇಶ್ವರ ಪತ್ತಿನ ಸೌಹಾರ್ಥ ಸಹಕಾರಿ ನಿಯಮಿತ ಸಂಘದ 2022 ಮತ್ತು 23ನೇ ಸಾಲಿನ 7ನೇ ವಾರ್ಷಿಕೋತ್ಸವವು ಇತ್ತೀಚಿಗೆ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಹನುಮಂತಪ್ಪ ಟಿ ಮುತ್ತೇನಹಳ್ಳಿ ಅವರು ಮಾತನಾಡಿ, ಸಹಕಾರಿಗಳು ಸಹಕಾರ ನೀಡಿದರೆ ಸಹಕಾರಿ ತತ್ವ ಪರಿಪೂರ್ಣಗೊಳ್ಳಲು ಸಾಧ್ಯವಾಗುವುದು. ಸಾಲ ಪಡೆದವರು, ಕಾಲಕಾಲಕ್ಕೆ ವಿಳಂಬವಿಲ್ಲದೆ ನಿಗದಿತ ಅವಧಿಯಲ್ಲಿ ಪಾರ್ವತಿಸಿದರೆ ಸಹರಕಾರಿ ಸಂಘಟನೆಗಳು ಅಭಿವೃದ್ಧಿ ಕಾಣಲಿದೆ ಎಂದರು.
ತಮ್ಮ ಸಹಕಾರಿ ಸಂಘವು ಕೇವಲ ಏಳು ವರ್ಷಗಳ ಅವಧಿಯಲ್ಲಿ ಅನೇಕ ರೀತಿಯ ಯೋಜನೆಗಳನ್ನು ರೂಪಿಸುವುದರ ಮೂಲಕ ಪ್ರಗತಿ ಪದದತ್ತ ಸಾಗಿದೆ ಎಂದ ಅಧ್ಯಕ್ಷರು, ಸಂಘದ ಸದಸ್ಯರು ತಮ್ಮ ಪ್ರಾಂಜಲ ಮನಸ್ಸಿನಿಂದ ನೀಡಿದ ಸಂಪೂರ್ಣ ಸಹಕಾರದಿಂದ ಇಂದು ಪ್ರಗತಿಯೊಂದಿಗೆ ಮುನ್ನಡೆ ಸಾಧೀಸುವತ್ತ ಸಾಗಿದ್ದೇವೆ. ಸಂಘದ ಹಿರಿಯ ಸದಸ್ಯರಾದ, ನಾಗರಾಜ ಅಗಡಿ, ಲಕ್ಷ್ಮಣ್ ಕಡ್ಲಿಬಾಳ್, ಕರಬಸಪ್ಪ ಹಳ್ಳಳ್ಳಿ ಅವರು ಸಾಮೂಹಿಕವಾಗಿ ದೀಪ ಬೆಳಗಿಸುವುದರ ಮೂಲಕ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬ್ಯಾಂಕಿನ ನಿರ್ದೇಶಕ ಪ್ರೇಮನಾಥ, ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ಯಲ್ಲಪ್ಪ ಗುತ್ತಲ, ಪ್ರಕಾಶ ಅಗಡಿ, ಸೇರಿದಂತೆ ಮತ್ತಿತರೇ ಗಣ್ಯರು, ನಿರ್ದೇಶಕರು, ಸೇರುದಾರರು ಬ್ಯಾಂಕಿನ ಸರ್ವತೋಮುಖ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿ ಕುರಿತಂತೆ ತಮ್ಮ ಸಲಹೆ ಸೂಚನೆ ನೀಡಿದರು