ಶಿಕ್ಷಣ ವ್ಯವಸ್ಥೆ ಗಟ್ಟಿಗೊಳಿಸಿ: ಸಿಎಂ ಬಂಡಗರ
ಇಂಡಿ 01: ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಿಕೊಳ್ಳುವ ಉದ್ದೆ?ಶದಿಂದ ಜಾರಿಯಾಗಿರುವ ವಿಶೇಷ ಮಕ್ಕಳ ದಾಖಲಾತಿ ಆಂದೋಲನ ತಾಲೂಕಿನಾದ್ಯಂತ ಆರಂಭಿಸಿದ್ದು,ಇದು ಗ್ರಾಮೀಣ ಭಾಗದ ಬಡ ಮಕ್ಕಳು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕೆಂಬ ಉದ್ದೆ?ಶವನ್ನು ಹೊಂದಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಿ ಎಂ ಬಂಡಗರ ಹೇಳಿದರು
ತಾಲೂಕಿನ ಹಿರೇರೂಗಿ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ,ಹೆಣ್ಣು ಮಕ್ಕಳ ಹಾಗೂ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ಶಾಲಾ ಪ್ರಾರಂಭೋತ್ಸವ ಮತ್ತು ಮಕ್ಕಳ ದಾಖಲಾತಿ ಆಂದೋಲನವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣವು ಸಂವಿಧಾನಬದ್ಧ ಮೂಲಭೂತ ಹಕ್ಕಾಗಿದ್ದು,ಈ ಹಕ್ಕನ್ನು ಯಾವುದೇ ತಾರತಮ್ಯ ಅಸಮಾನತೆ ಮತ್ತು ಪ್ರತ್ಯೇಕತೆಯಿಲ್ಲದೆ ಎಲ್ಲಾ ಮಕ್ಕಳಿಗೂ ಸಮಾನತೆ ನೆಲೆಯಲ್ಲಿ ಸಮಾನ ಅವಕಾಶಗಳ ಮೂಲಕ ಸಾಕಾರಗೊಳಿಸುವ ಶಾಲಾ ಶಿಕ್ಷಣ ವ್ಯವಸ್ಥೆ ಕಟ್ಟಿ ಕೊಡಬೇಕು ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಬಿ ಆರ್ ಪಿ ಅಧಿಕಾರಿ ಆಯ್ ಜಿ ಆಲೂರ ಮಾತನಾಡುತ್ತಾ ಸರ್ಕಾರದ ಜೊತೆಗೆ ಬೆಂಬಲವಾಗಿ ಕೈ ಜೋಡಿಸುವುದು ಸಮುದಾಯದ ಹೊಣೆಯಾಗಿದೆ. ಸರ್ಕಾರ ಮತ್ತು ಸಮುದಾಯ ಒಗ್ಗೂಡಿ ಕೆಲಸ ನಿರ್ವಹಿಸಿದ್ದಲ್ಲಿ ಪ್ರತಿಯೊಂದು ಸರ್ಕಾರಿ ಶಾಲೆಯನ್ನು ಸಮಾನ ಗುಣಾತ್ಮಕ ಕೇಂದ್ರವನ್ನಾಗಿ ಪರಿವರ್ತಿಸಬಹುದು ಎಂದು ಹೇಳಿದರು. ಇಂಗ್ಲೀಷ ಶಿಕ್ಷಕ ಸಂತೋಷ ಬಂಡೆ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಶಿಕ್ಷಣವು ಮಾನವನ ಪ್ರಗತಿಗೆ ಆಧಾರವಾಗಿದೆ.ಇದು ಸಮಾಜದ ಹಾಗೂ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.ಶಿಕ್ಷಣವು ದೇಶಭಕ್ತಿಯ ಶಿಸ್ತಿನ ಮತ್ತು ಉತ್ಪಾದಕ ಮಾನವಶಕ್ತಿಯನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಈ ಆಂದೋಲನದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಹುಣಸಗಿ, ಎಸ್ ಡಿ ಎಂ ಸಿ ಅಧ್ಯಕ್ಷ ನಿಂಗಪ್ಪ ಡಂಗಿ,ಗದಿಗೆಪ್ಪ ಪೂಜಾರಿ,ಭಾಷಾಸಾಬ ಬಳಮ್,ರಾಜಶೇಖರ ಡಂಗಿ ಮುಂತಾದವರು ಭಾಗವಹಿಸಿದ್ದರು. ಗ್ರಾಮದ ಬೀದಿ ಬೀದಿಗಳಲ್ಲಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಸಂಚರಿಸಿ,ಮನೆ ಮನೆಗೆ ಭೇಟಿ ನೀಡಿ ಮಕ್ಕಳ ಶೈಕ್ಷಣಿಕ ಕಲಿಕಾ ಪ್ರಕ್ರಿಯೆಯ ಕುರಿತಾಗಿ ಜಾಗೃತಿ ಮೂಡಿಸಿದರು.
ಮುಖ್ಯ ಗುರು ಎಂ ಎಸ್ ಸಾಲೂಟಗಿ,ಎಸ್ ಎಸ್ ಅಂಕಲಗಿ,ಎ ಎಂ ಬೆದ್ರೇಕರ ಹಾಗೂ ಶಿಕ್ಷಕ ಅನಿಲ ಪತಂಗಿ, ಎಸ್ ಎಂ ಪಂಚಮುಖಿ, ಶಕೀಲ್ ಅಹ್ಮದ್ ಅರಬ,ಸುರೇಶ ದೋಡ್ಯಾಳಕರ, ಜೆ ಎಂ ಪತಂಗಿ,ಎಸ್ ಡಿ ಬಿರಾದಾರ,ಎಸ್ ಎಚ್ ಮೈದರಗಿ ಮುಂತಾದವರು ಭಾಗವಹಿಸಿದ್ದರು. ಎಸ್ ಆರ್ ಚಾಳೇಕಾರ ಸ್ವಾಗತಿಸಿದರು, ಬಸವರಾಜ ಕರಜಗಿ ನಿರೂಪಿಸಿದರು, ಎಸ್ ಡಿ ಕುಲಕರ್ಣಿ ವಂದಿಸಿದರು.