ಇಂಡಿ

ಬಿಜೆಪಿ ಪಕ್ಷದ ಇಂಡಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ಬಿಜೆಪಿ ಪಕ್ಷದ ಇಂಡಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿ: ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಪಾಪು(ಶ್ರೀಶೈಲ) ಕಿತ್ತಲಿ, ಭೀಮನಗೌಡ ಪಾಟೀಲ್ ಬಿಜೆಪಿ ತೊರೆದು ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆಗೊ

ಇಂಡಿ: ಬಿಜೆಪಿ ಪಕ್ಷದ ಇಂಡಿ ಮತಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಪಾಪು (ಶ್ರೀಶೈಲ್) ಕಿತ್ತಲಿ ಅವರು ಶನಿವಾರರಂದು ಇಂಡಿ ಪಟ್ಟಣದಲ್ಲಿ ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಬಹಳ ವರ್ಷಗಳಿಂದ ಬಜರಂಗದಳ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಪ್ರತೀ ಗ್ರಾಮಕ್ಕೂ ಭೇಟಿ ನೀಡಿ ಸಂಘಟನೆ ಮಾಡಿದ್ದ ಕಿತ್ತಲಿ ಅವರು ಈ ಬಾರಿ ಯಾವುದೇ ಮುನ್ಸೂಚನೆ ಇಲ್ಲದೆ ಕಾಂಗ್ರೆಸ್ ಸೇರಿದ್ದು ಜನರಲ್ಲಿ ಅಚ್ಚರಿ ಮೂಡಿಸಿದೆ.

ಸ್ಥಳೀಯ ಶಾಸಕ ಯಶವಂತರಾಯಗೌಡ ಪಾಟೀಲ್ ಅವರ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಹಲವು ವರ್ಷಗಳ ಕಾಲ ಬಿಜೆಪಿಯಲ್ಲಿ ಪಕ್ಷ ಸಂಘಟನೆ ಮಾಡಿದರೂ ಪಕ್ಷದವರು ತಮಗೆ ಯಾವುದೇ ಹುದ್ದೆ ನೀಡದೆ ತಮ್ಮನ್ನು ಕಡೆಗಣಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮತಕ್ಷೇತ್ರದ ಪ್ರತಿ ಗ್ರಾಮಗಳಲ್ಲಿಯೂ ಕಿತ್ತಲಿ ಅವರ ವೈಯಕ್ತಿಕ ಬಳಗ ಹಾಗೂ ಅಭಿಮಾನಿಗಳು ಇದ್ದಾರೆ. ಹೀಗಾಗಿ ಕಿತ್ತಲಿ ಅವರ ಸೇರ್ಪಡೆಯಿಂದ ಯಶವಂತರಾಯಗೌಡರಿಗೆ ಬಹಳಷ್ಟು ಲಾಭವಾಗುತ್ತದೆ ಎನ್ನುವ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಪುರಸಭೆ ಹಾಲಿ ಸದಸ್ಯ ಕಾಂಗ್ರೇಸ್ ಸೇರ್ಪಡೆ.

ಪುರಸಭೆಯ ಬಿಜೆಪಿ ಸದಸ್ಯ ಭೀಮನಗೌಡ ದಾದಾಗೌಡ ಪಾಟೀಲ್ ಅವರು ಸಹ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೇಸ್ ಸೇರ್ಪಡೆಗೊಂಡಿದ್ದಾರೆ.

ಭೀಮನಗೌಡ ಪಾಟೀಲರು ಇಂಡಿಯ ದಾದಾಗೌಡ ಪಾಟೀಲರ ಸುಪುತ್ರ. ಇಂಡಿ ಎಂದರೆ ದಾದಾಗೌಡರು ಎನ್ನುವಷ್ಟು ಮಟ್ಟಿಗೆ ದಾದಾಗೌಡರ ಹೆಸರುವಾಸಿಯಾಗಿದೆ. ಅಂತಹ ಮನೆತನದ ಭೀಮನಗೌಡರು 5 ಬಾರಿ ಪುರಸಭೆಗೆ ಆಯ್ಕೆಯಾಗಿದ್ದು ಎರಡು ಬಾರಿ ಪುರಸಭೆ ಅಧ್ಯಕ್ಷರಾಗಿದ್ದಾರೆ. ಅಲ್ಲದೆ ಅವರು ಸೋಲಿಲ್ಲದ ಸರದಾರ ಎಂದು ಹೆಸರು ವಾಸಿಯಾಗಿದ್ದಾರೆ. ಇವರ ಸೇರ್ಪಡೆಯಿಂದಲೂ ಕಾಂಗ್ರೇಸ್ ಪಕ್ಷಕ್ಕೆ ಲಾಭವಾಗಬಹುದಾದ ಲೆಕ್ಕಾಚಾರವಿದೆ ಎಂಬ ಬಗ್ಗೆ ಚರ್ಚೆ  ನಡೆದಿದೆ.

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ.

ಜೆಡಿಎಸ್ ಪಕ್ಷದಲ್ಲಿ ಸಂಘಟನೆ ಮಾಡಿದ್ದ ಮಂಜುನಾಥ ಕಾಮಗೊಂಡ ಕಾಂಗ್ರೇಸ್ ಸೇರ್ಪಡೆಗೊಂಡಿದ್ದಾರೆ. ಹಿರೇಬೇವನೂರ ಜಿ.ಪಂ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ಇವರು ಈಗಾಗಲೆ ಆ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.

12 ಇಂಡಿ 1:


ಸುದ್ದಿ ಓದಿ