ಐನಾಪುರದಲ್ಲಿ 13 ಮನೆಗಳ ಬೀಗ ಮುರಿದು ಸರಣಿ ಕಳ್ಳತನ
ಲೋಕದರ್ಶನ ವರದಿ
ಕಾಗವಾಡ 15: ಐನಾಪುರ ಪಟ್ಟಣದಲ್ಲಿ ಹೃದಯಭಾಗದಲ್ಲಿರುವ 13 ಮನೆಗಳ ಬೀಗ ಮುರಿದು ಎಕ ಕಾಲಕ್ಕೆ ಸರಣಿ ಕಳ್ಳತನ ಮಾಡಿ ಮನೆಯಲ್ಲಿಯ ಚಿನ್ನಾಭರಣ, ಬೆಳ್ಳಿ, ನಗದು ಹಣ ಹೀಗೆ ಲಕ್ಷಾಂತರ ರೂ. ಮೌಲ್ಯದಬೆಲೆ ಬಾಳುವಾಭರಣ ಹಾಗೂ ನಗದು ಕಳ್ಳತನ ನಡೆದಿದೆ.
ಕಳೆದ ಅನೇಕ ವರ್ಷಗಳ ಬಳಿಕ ಏಕ ಕಾಲಕ್ಕೆ ಸರಣಿ ಕಳ್ಳತನ ನಡೆದಿರುವ ಈ ಘಟನೆಯಿಂದ ಇಲ್ಲಿಯ ಜನರು ಭಯಭೀತಗೊಂಡಿದ್ದಾರೆ.
ಸಿದ್ದು ದಶರಥ ಜಾಧವ ಇತನ ಮನೆಯಲ್ಲಿ 7 ತೊಲೆ ಚಿನ್ನಾಭರಣ, 10 ತೊಲಿ ಬೆಳ್ಳಿಯ ಆಭರಣ ಮತ್ತು 20 ಸಾವಿರ ನಗದು ಮತ್ತು ಬಸಪ್ಪ ವಡಿಯರ ಇವರ ಮನೆಯಿಂದ 12 ತೊಲೆ ಚಿನ್ನಾಭರಣ, 10 ತೊಲಿ ಬೆಳ್ಳಿಯ ಆಭರಣ 10 ಸಾವಿರ ನಗದು ಸೇರಿದಂತೆ 13 ಮನೆಗಳ ಬೀಗ ಮುರಿದು ಕಳ್ಳತನ ನಡೆದಿದೆ.
ಇದು ಕಾಗವಾಡ ಪೊಲೀಸ್ ಅಧಿಕಾರಿಗಳಿಗೆ ತಲೆನೋವಾಗಿದ್ದು, ಕೂಡಲೇ ಸಿ.ಪಿ.ಐ ಶಂಕರಗೌಡ ಬಸಗೌಡರ, ಪಿ.ಎಸ್.ಐ ಬಿ.ಎಂ.ರಬಕವಿ ಸ್ವಥಳಕ್ಕೆ ಧಾವಿಸಿ ಬೆಳಗಾವಿಯಿಂದ ಶ್ವಾನದಳ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಐನಾಪುರ ಪಟ್ಟಣದ ಮುಖ್ಯ ಭಾಗಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿದ್ದು, ಕ್ಯಾಮೆರಾ ದೃಶ್ಯಾವಳಿಗಳನ್ನು ಪೊಲೀಸರು ಪರೀಶೀಲನೆ ಮಾಡುತ್ತಿದ್ದಾರೆ.
ಐನಾಪುರದಲ್ಲಿ ಏಕ ಕಾಲಕ್ಕೆ ನಡೆದಿರುವ ಈ ಸರಣಿ ಕಳ್ಳತನದಿಂದ ಐನಾಪುರ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಕಾಗವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ಕಾರ್ಯ ನಡೆದಿದೆ.