ಶಿಗ್ಗಾವ್

ಡಾ.ಟಿ.ಬಿ.ಸೊಲಭಕ್ಕನವರ ತೃತೀಯ ಪುಣ್ಯಸ್ಮರಣೆ

ಡಾ.ಟಿ.ಬಿ.ಸೊಲಭಕ್ಕನವರ ತೃತೀಯ ಪುಣ್ಯಸ್ಮರಣೆ

ಶಿಗ್ಗಾವಿ 18: ಶಿಲ್ಪಕಲಾ ಕುಟೀರ ಹಾಗೂ ಕರ್ನಾಟಕ ದೊಡ್ಡಾಟ (ಬಯಲಾಟ) ಟ್ರಸ್ಟರೂವಾರಿ ದಿವಂಗತ ಡಾ.ಟಿ.ಬಿ. ಸೊಲಭಕ್ಕನವರ ತೃತೀಯ ಪುಣ್ಯಸ್ಮರಣೆ ಹಾಗೂ ಕಲಾಯಾನ ಉದ್ಘಾಟನಾ ಕಾರ್ಯಕ್ರಮ ನ 19 ರಂದು ಬೆಳಿಗ್ಗೆ 10 ಘಂಟೆಗೆ ಗೋಟಗೋಡಿಯ ಶಿಲ್ಪ ಕಲಾ ಕುಟೀರ ಆವರಣದಲ್ಲಿ ಜರುಗಲಿದೆ. ಹುಬ್ಬಳ್ಳಿಯ ಕಲ್ಯಾಣ ನಗರದ ರಾಮಕೃಷ್ಣಾಶ್ರಮದ ರಘುವೀರಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು,  ಹಿರಿಯ ಕಲಾವಿದರಾದ ಮಹಾಲಿಂಗಪ್ಪ ಉದ್ಘಾಟಿಸುವರು, ಕರಿಯಪ್ಪ ಹಂಚಿನಮನಿ ಅಧ್ಯಕ್ಷತೆ ವಹಿಸುವರು. 

ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ ಕುಲಕರ್ಣಿ ಮತ್ತು ಪ್ರತಿಭಾವಂತ ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಗುವುದು. ಹಾಗೂ ಚಿಕ್ಕಮಣ ಕಟ್ಟಿಯ ಜೋಡಿ ಬಸವೇಶ್ವರ ಜಾನಪದ ಕಲಾವಿದರಿಂದ ಕಲಾ ಗಾನ ಹಾಗೂ ದೊಡ್ಡಾಟ ಕಲಾ ಪ್ರದರ್ಶನ ಜರುಗುವುದು, ರಾಜೋತ್ಸವ ಪ್ರಶಸ್ತಿ ಪುರಸ್ಕೃತರಾದಕೊಟ್ರೇಶ ಮಾಸ್ತರ ಬೆಳಗಲಿ, ಶ್ರೀಶೈಲ ಹುದ್ದಾರ,ಕಲಾವಿದ ಸಿ.ಎಲ್‌. ಚಂದ್ರದರ, ಸಾವಿತ್ರೆಮ್ಮ ಟಿ ಸೊಲಭಕ್ಕನವರ, ರಂಗಕರ್ಮಿ ಬಸವರಾಜ ಬೆಂಗೇರಿ, ಶಿಲ್ಪ ಕಲಾವಿದ  ಹರೀಶ ಮಾಳಪ್ಪನವರ, ಹಾಗೂ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ಪಕ್ಕಿರೇಶ ಕೊಂಡಾಯಿ, ನೇಪಥ್ಯಕಲಾವಿದ ಶಂಕರ ಅರ್ಕಸಾಲಿ, ಜಾನಪದ ಅಕಾಡೆಮಿ ಸದಸ್ಯ ಬಸವರಾಜ ಶಿಗ್ಗಾಂವ,  ಶಿಲ್ಪ ಕಲಾ ಕುಟೀರದ ಕಲಾವಿದರು ಹಾಗೂ ನಾಡಿನ ಹೆಸರಾಂತ ಕಲಾವಿದರು ಉಪಸ್ಥಿತರಿರುವುರೆಂದು ಕಲಾ ಕುಟೀರದ ವ್ಯವಸ್ಥಾಪಕ ಹರ್ಷ ಸೊಲಭಕ್ಕನವರ ಪ್ರಕಟಣೆಗೆ ಕೋರಿದ್ದಾರೆ. 


ಸುದ್ದಿ ಓದಿ