ಶಿಗ್ಗಾವ್

ಮಹಾತ್ಮರ ಕುರಿತು ಚಿಂತನೆ ಮಾಡುವುದು ಅಗತ್ಯವಾಗಿದೆ: ಕುಲಸಚಿವ ಪ್ರೊ. ಬಾಗಲಕೋಟಿ

ಮಹಾತ್ಮರ ಕುರಿತು ಚಿಂತನೆ ಮಾಡುವುದು ಅಗತ್ಯವಾಗಿದೆ: ಕುಲಸಚಿವ ಪ್ರೊ. ಬಾಗಲಕೋಟಿ

ಶಿಗ್ಗಾವಿ 25: ಮಹಾತ್ಮರ ಚಿಂತನೆಗಳು ಬದುಕಿಗೆ ದಾರಿ ತೋರುತ್ತಿದ್ದು, ಅವುಗಳನ್ನು ಬದುಕಿಗೆ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಈ ಕುರಿತು ಚಿಂತನೆ ಮಾಡುವುದು ಅಗತ್ಯವಾಗಿದೆ ಎಂದು ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್‌.ಬಿ.ಬಾಗಲಕೋಟಿ ಹೇಳಿದರು. 

ಪಟ್ಟಣದ ಗೌರಮ್ಮಾ ಅಂಕಲಕೋಟಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ದಾಸಶ್ರೇಷ್ಟ ಕನಕದಾಸ ಸೇವಾ ಸಮಿತಿ ವತಿಯಿಂದ ನಡೆದ ಕನಕದಾಸರ ಜಯಂತ್ಯೋತ್ಸವ ಅಂಗವಾಗಿ ರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ  ಮಾತನಾಡಿದ ಅವರು ಯಾರು ಮೇಲು, ಕೀಳು ಎಂಬ ಭಾವನೆ ಬಿಟ್ಟು ಸಮಾನರಾಗಿ ನೋಡುವವರು ಶ್ರೇಷ್ಟರು. ದ್ವೇಷದಿಂದ ಸಮಸ್ಯೆ, ಸವಾಲುಗಳನ್ನು ಎದುರಿಸಲು ಸಾಧ್ಯವಿಲ್ಲ. ಮಹಾತ್ಮರ ಸಂದೇಶಗಳಿಂದ ಪರಿವರ್ತನೆ ಸಾಧ್ಯವಿದೆ ಎಂದರು. 

ಉಪನ್ಯಾಸಕ ರಂಜಾನ ಕಿಲ್ಲೇದಾರ "ಕನಕದಾಸರ ಸಾಮಾಜಿಕ ಚಿಂತನೆಗಳು" ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. 

ದಾಸಶ್ರೇಷ್ಟ ಕನಕದಾಸ ಸೇವಾ ಸಮಿತಿ ಅಧ್ಯಕ್ಷ ಮಲ್ಲಪ್ಪ ರಾಮಗೇರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶಿಕ್ಷಣ ಶಕ್ತಿಯಾಗಿದ್ದು ಹಿರಿಯರ ಮಾರ್ಗದರ್ಶನದಲ್ಲಿ ಕೆಎಎಸ್, ಐಎಎಸ್, ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಪಡೆಯಿರಿ. ಸಿಕ್ಕಿರುವ ಅವಕಾಶಗಳ ಸದುಪಯೋಗ ಪಡೆಯಬೇಕು ಎಂದರು. 

ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕನಕ ಅಧ್ಯಯನ ಪೀಠದ ಸಂಯೋಜಕ ಡಾ.ಹನುಮಗೌಡ ಸಿ, ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಸ್‌. ಕುಮ್ಮೂರ ಮಾತನಾಡಿದರು. 

ತಾಲೂಕ ಕುರುಬರ ಸಮಾಜದ ಅಧ್ಯಕ್ಷ ಫಕ್ಕೀರ​‍್ಪ ಕುಂದೂರ, ರಂಭಾಪುರಿ ಕಾಲೇಜಿನ ಪ್ರಾಚಾರ್ಯ ಪ್ರೊ.ಬಾಲಚಂದ್ರ ತೊಂಡಿಹಾಳ, ನಿವೃತ್ತ ಪ್ರಾಚಾರ್ಯ ಡಾ.ಡಿ.ಎ.ಗೊಬ್ಬರಗುಂಪಿ, ಭೂದಾನಿ ಈರಣ್ಣ ಅಂಕಲಕೋಟಿ,  ಬಾಡದ ಪ್ರಾಧಿಕಾರದ ಅಧಿಕಾರಿ ಕವಿತಾ ಚವ್ಹಾಣ, ಪ್ರಭು ಶಿವಪುರ, ಪ್ರಕಾಶ ಓಂದಕರ, ಸುರೇಶ ಬಿಸನಳ್ಳಿ, ಗಂಗಪ್ಪ ಪಾಣಿಗಟ್ಟಿ, ಮಲ್ಲಪ್ಪ ದುಂಡಪ್ಪನವರ, ಪ್ರೊ.ಆನಂದ ಇಂದೂರ, ಪ್ರೊ.ಗಂಗಾಧರ ಗೌಡರ ಸೇರಿದಂತೆ ಕಾಲೇಜಿನ ಸಿಬ್ಬಂದಿ, ಸಮಿತಿ ಸದಸ್ಯರು ಇದ್ದರು. 


ಸುದ್ದಿ ಓದಿ