ಜನರ ಕಾಳಜಿ ಮರೆತು ಸದನದ ಬಾವಿಗಿಳಿದಿದ್ದಾರೆ : ಬಾಬರ ಬೊವಾಜಿ
ಶಿಗ್ಗಾವಿ 19 : ರಾಜ್ಯಾದ್ಯಂತ ಬಹಳಷ್ಟು ಜಿಲ್ಲೆಗಳಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ, ಮನೆ, ರಸ್ತೆಗಳು, ಕೃಷಿಭೂಮಿ ಜಲಾವೃತವಾಗಿದೆ. ಜನರು ಕಾಂಗ್ರೆಸ್ ಸರ್ಕಾರದ ಸಹಾಯದ ನೀರೀಕ್ಷೆಯಲ್ಲಿದ್ದಾರೆ, ಎಲ್ಲಾ ಶಾಸಕರು ತಮ್ಮ ಕ್ಷೇತ್ರದ ಜನರ ಕಷ್ಟ ನಷ್ಟಗಳನ್ನು ಸದನದ ಗಮನಕ್ಕೆ ತಂದು ನೆರವು ಪಡೆಯುವ ತುರ್ತು ಸಂದರ್ಭವಾಗಿದೆ.
ಮಳೆಪೀಡಿತ ಪ್ರದೇಶಗಳ ಜನರ ಸಮಸ್ಯೆಗಳನ್ನು ಚರ್ಚಿಸಲು ಸದನದಲ್ಲಿ ಅವಕಾಶ ನೀಡಿದರೆ ಪ್ರತಿಪಕ್ಷ ನಾಯಕರು ಜನರ ಕಾಳಜಿ ಮರೆತು ಸ್ವಾರ್ಥಕ್ಕಾಗಿ ಸದನದ ಬಾವಿಗಿಳಿದು ನಾಟಕ ಆರಂಭಿಸಿದ್ದಾರೆ. ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಬೇರೇನಿದೆ? ಎಂದು ಶಿಗ್ಗಾವಿ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ತಾಲೂಕ ಅಧ್ಯಕ್ಷ ಬಾಬರ ಬೊವಾಜಿ ಪ್ರಶ್ನಿಸಿದ್ದಾರೆ.