ಮನರಂಜನೆ

ಬಂಧಿಸ್ತಾರೆ ಅಂತ ಗೊತ್ತಾದ್ರೆ ಕೊರೋನಾ ನಾಟಕವಾಡ್ತಾರೆ: ಪ್ರಶಾಂತ್ ಸಂಬರಗಿ

ಬಂಧಿಸ್ತಾರೆ ಅಂತ ಗೊತ್ತಾದ್ರೆ ಕೊರೋನಾ ನಾಟಕವಾಡ್ತಾರೆ: ಪ್ರಶಾಂತ್ ಸಂಬರಗಿ

ಬೆಂಗಳೂರು, ಅಕ್ಟೋಬರ್ 03: ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸುತ್ತಿದ್ದಾರೆ.  ಈ ನಡುವೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ,        ಪ್ರಕರಣಕ್ಕೆ ಸಂಬಂಧಿಸಿದ ನಟಿಯೊಬ್ಬರು ‘ಕೊರೋನಾ ನಾಟಕವಾಡ್ತಾರೆ’ ಎಂದು ಟಾಂಗ್ ನೀಡಿದ್ದಾರೆ.

ಈ ಮೊದಲು ಬಹುತೇಕ ರಾಜಕಾರಣಿಗಳು ಯಾವುದಾದರೂ ಪ್ರಕರಣದಲ್ಲಿ ಭಾಗಿಯಾದರೆ ‘ಎದೆನೋವಿನ ನೆಪವೊಡ್ಡಿ’ ಬಂಧನವಾಗುವುದನ್ನು ಒಂದಷ್ಟು ಕಾಲ ಮುಂದೂಡುತ್ತಿದ್ದರು.

ಅದೇ ರೀತಿ ನಾಟಕದ ರಾಣಿಯೊಬ್ಬರು ಅರ್ಥಾತ್ ನಟಿಯೊಬ್ಬರು ಆರೋಪದಲ್ಲಿ ಸಿಲುಕಿ ಬಂಧಿತರಾಗುವುದನ್ನು ತಪ್ಪಿಸಲು ಕೊರೋನಾ ಇದೆ ಹತ್ತಿರ ಬರಬೇಡಿ ಎಂಬ ನಾಟಕವಾಡುವ ಸುಳಿವು ದೊರಕಿದೆ.  ಆದರೆ ಆಕೆಯಯ  ಆ ನಾಟಕ ಹೆಚ್ಚು ದಿನ ನಡೆಯುವುದಿಲ್ಲ.  ಉಪ್ಪು ತಿಂದವರು ನೀರು ಕುಡಿಯಲೇಬೇಕಾಗುತ್ತದೆ ಎಂದಿದ್ದಾರೆ. 

ಆ ನಟಿ ಯಾರು ಎಂಬುದನ್ನು ಪ್ರಶಾಂತ್ ಸಂಬರಗಿ ತಿಳಿಸಿಲ್ಲವಾದರೂ, ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಈಗಾಗಲೇ ಆಕೆಯ ಹೆಸರು ಕೇಳಿಬಂದಿದೆ ಎಂದಷ್ಟೇ ಹೇಳಿದ್ದಾರೆ.         

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಅವರು ಮಾಡಿರುವ ಪೋಸ್ಟ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸುದ್ದಿ ಓದಿ