ಕಾಗವಾಡ

ಉಗಾರ ಖುರ್ದ: ಯಾವುದೇ ಸಾವು-ನೋವು ಉಂಟಾಗಿಲ್ಲಾ: ಲೋಕುರ

ಉಗಾರ ಖುರ್ದ: ಯಾವುದೇ ಸಾವು-ನೋವು ಉಂಟಾಗಿಲ್ಲಾ: ಲೋಕುರ

ಕಾಗವಾಡ19: ತಹಶೀಲ್ದಾರ ಕಚೇರಿ ವ್ಯಾಪ್ತಿಯ ಉಗಾರ ಖುರ್ದ ನಗರದಲ್ಲಿ ಪ್ರಾರಂಭಿಸಿದ್ದ ಕೋವಿಡ್ ಸೆಂಟರ್‍ದಲ್ಲಿ ಕಳೆದ 9 ದಿನಗಳಲ್ಲಿ ಯಾವುದೇ ಸಾವು-ನೋವು ಉಂಟಾಗಿಲ್ಲಾಯೆಂದು ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ವೀಣಾ ಲೋಕುರ ಮಾಹಿತಿ ನೀಡಿದ್ದಾರೆ.ಬುಧವಾರರಂದು ಕೋವಿಡ್ ಸೆಂಟರ್‍ದಲ್ಲಿ ಉಪಚಾರಿಸಿಕೊಳ್ಳುತ್ತಿರುವ ಸೋಂಕಿತರಿಗೆ ಉಪಚಾರಿಸುವ ಎಲ್ಲ ಸಿಬ್ಬಂದಿದವರು ಬಳಿಸುವ ಪಿಪಿಇ ಕೀಟ್‍ಗಳು ಶ್ರೀಮಂತ(ತಾತ್ಯಾ) ಪಾಟೀಲ ಫೌಂಡೇಶನ ಇವರ ವತಿಯಿಂದ ಆಪ್ತ ಸಹಾಯಕ ಪ್ರಶಾಂತ ಅಪರಾಜ ಇವರು ವಿತರಿಸಿದರು.

ಪಿಪಿಇ ಕೀಟ್ ಸ್ವೀಕರಿಸಿ ವೈದ್ಯಾಧಿಕಾರಿಗಳಾದ ಡಾ. ವೀಣಾ ಲೋಕುರ ಮಾಹಿತಿ ನೀಡುವಾಗ, ಕೋವಿಡ್ ಕೇಂದ್ರದಲ್ಲಿ ಆಕ್ಸಿಜನ್ ಸರಿಯಾಗಿ ಪೂರೈಕೆವಾಗುತ್ತಿದ್ದು, ಒಳ್ಳೆಯ ಉಪಚಾರ ನೀಡುತ್ತಿದ್ದರಿಂದ ಕಳೇದ 9 ದಿನಗಳಲ್ಲಿ ಸೆಂಟರ್‍ನಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲಾ. ಸಧ್ಯಕ್ಕೆ 11 ರೋಗಿಗಳು ಉಪಚಾರ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ಉಗಾರ ಬುದ್ರುಕ, ಫರೀದಖನವಾಡಿ ಗ್ರಾಮಗಳ ಸೋಂಕಿತರು ಹೆಚ್ಚಾಗಿದ್ದಾರೆ ಎಂದರು.ಈ ವೇಳೆ ಪುರಸಭೆ ಸದಸ್ಯ ಪ್ರಫೂಲ ಥೋರುಶೆ, ವಿಜಯ ಮಾಳಿ, ಶಿವರಾಜ ಭಾಸ್ಕರ್, ಇನ್ನೀತರರು ಇದ್ದರು. 19 ಕಾಗವಾಡ 3 ವೈದ್ಯಾಧಿಕಾರಿ ಡಾ. ವೀಣಾ ಲೋಕುರ ಇವರಿಗೆ ಪಿಪಿಇ ಕಿಟ್‍ಗಳು ಹಸ್ತಾಂತರಿಸುತ್ತಿರುವಾಗ ಪ್ರಶಾಂತ ಅಪರಾಜ, ಇನ್ನಿತರರು.

ಸುದ್ದಿ ಓದಿ