ಕಾಗವಾಡ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ಇನ್ನಿಲ್ಲ

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ಇನ್ನಿಲ್ಲ

ಲೋಕದರ್ಶನ ವರದಿ 


ಕಾಗವಾಡ 21: ಮಾಜಿ ಕೇಂದ್ರ ಸಚಿವ ದಿ. ಸುರೇಶ ಅಂಗಡಿಯವರ ಸಂಬಂಧಿ ಹಾಗೂ ಕಾಗವಾಡ ತಾಲೂಕಿನ ಮಂಗಾವತಿ ಗ್ರಾಮದ ಪ್ರಾಮಾಣಿಕ ಹಾಗೂ ದಿಟ್ಟ ಅಧಿಕಾರಿಯಾಗಿ ಸೇವೆ ಸಲ್ಲಿಸಿ ರಾಷ್ಟ್ರ ಪ್ರಶಸ್ತಿ ಪಡೆದಿರುವ  ರಾಯಗೌಡ ಶಟಗೌಡ ಪಾಟೀಲ(87) ಇವರು ಸೋಮವಾರ ಸಂಜೆ ವಿಧಿವಶರಾದರು. ಅವರ ಸಗ್ವಗ್ರಾಮವಾದ ಮಂಗಾವತಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ಅಂತ್ಯಕ್ರೀಯೇ ಜರುಗಿತು. 

ದಿವಂಗತ ರಾಯಗೌಡ ಪಾಟೀಲ ಇವರು ಪಿಎಸ್‌ಐ ಆಗಿ ಅಥಣಿ, ಕಾಗವಾಡ, ಸದಲಗಾ, ಚಿಕ್ಕೋಡಿ, ನಿಪ್ಪಾಣಿ, ಸಂಕೇಶ್ವರ ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿರುವಾಗ ಅವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ರಾಷ್ಟ್ರಪತಿ ಪ್ರಶಸ್ತಿ ನೀಡಿ ಗೌರವಿಸಿದ್ದರು.  

ನಿವೃತ್ತ ಮುಖ್ಯೋಪಾಧ್ಯಾಯ ಮಹಾದೇವ ಕೋರ್ಬು ಗ್ರಾಮದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿ ನಮ್ಮ ಗ್ರಾಮದ ಸುಪುತ್ರ ದಿಟ್ಟ ಅಧಿಕಾರಿ ಎಂದು ಖ್ಯಾತಿ ಪಡೆದಿರುವ ರಾಯಗೌಡ ಪಾಟೀಲ ಅವರು ಸರ್ಕಾರಿ ಸೇವೆಯ ಜೊತೆಗೆ ಈ ಭಾಗದಲ್ಲಿ ಹಲವಾರು ಜನಪರ ಕಾರ್ಯಗಳನ್ನು ಮಾಡಿದ್ದಾರೆ. ಅವರ ಅಗಲಿಕೆ ನಮಗೆಲ್ಲ ನೋವನ್ನುಂಟು ಮಾಡಿದೆ. ಭಗವಂತನು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು. 

ಅವರ ಸುಪುತ್ರ ಚಿಕ್ಕೋಡಿ ಜಿಲ್ಲಾ ಪಂಚಾಯತ್ ಅಭಿಯಂತರ ಶಿವಾನಂದ ಪಾಟೀಲ ಡಾ. ಬಾಬಾಸಾಬ ಪಾಟೀಲ, ಮೋಹನ ಅಂಗಡಿ, ಕಾಗವಾಡ ಪಿಎಸ್‌ಐ ಬಿ.ಎಂ ರಬಕವಿ ಶ್ರದ್ಧಾಂಜಲಿ ಅರ​‍್ಿಸಿದರು. 

ಸಭೆಯಲ್ಲಿ ಕೆ.ಆರ್‌.ಪಾಟೀಲ, ಬಿ.ಎಸ್‌.ಪಾಟೀಲ, ಈರಗೌಡ ಪಾಟೀಲ, ರಾಜಗೌಡ ಪಾಟೀಲ, ಜ್ಯೋತಗೌಡ ಪಾಟೀಲ, ಮೇಶಗೌಡ ಪಾಟೀಲ ಸೇರಿದಂತೆ ಅನೇಕರು ಇದ್ದರು. 


ಸುದ್ದಿ ಓದಿ