ರಾಣೆಬೆನ್ನೂರ

ಶಾಲೆಯ ಆಹಾರ ಪದಾರ್ಥ ಕಳ್ಳತನ; ಎರಡು ಪ್ರತ್ಯೇಕ ಪ್ರಕರಣ ದಾಖಲು

ಶಾಲೆಯ ಆಹಾರ ಪದಾರ್ಥ ಕಳ್ಳತನ; ಎರಡು ಪ್ರತ್ಯೇಕ ಪ್ರಕರಣ ದಾಖಲು

ರಾಣೆಬೆನ್ನೂರು06: ತಾಲ್ಲೂಕಿನ ಬೆನಕನಕೊಂಡ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಮುಂದಿನ ಗೇಟ ಕೀಲಿ ಮುರಿದು ಒಳಗೆ ನುಗ್ಗಿ ಮುಖ್ಯ ಶಿಕ್ಷಕರ ಕೊಠಡಿ ಬಾಗಿಲ ಕದ ಮುರಿದು ಅವರ ಕೊಠಡಿಯಲ್ಲಿದ್ದ ಲುಮಿನಸ್ ಕಂಪನಿಯ ಯುಪಿಎಸ್ ಬ್ಯಾಟರಿ (?.4 ಸಾವಿರ) ಹಾಗೂ ಅವರ ಕೊಠಡಿಯಲ್ಲಿದ್ದ ಅಡುಗೆ ಕೋಣೆ ಕೀಲಿತೆಗೆದುಕೊಂಡು ಅಡುಗೆ ಕೋಣೆಯಲ್ಲಿದ್ದ 50 ಕೆಜಿ ತೂಕದ 1 ತೊಗರಿಬೇಳೆ ಚೀಲ (?.700) ಮತ್ತು 6 ಕೆಜಿ ತೂಕದ ಹಾಲಿನ ಪುಡಿ ಪಾಕೀಟು (? .1740 ಸಾವಿರ ) ಸೇರಿದಂತೆ ಒಟ್ಟು ?.12740 ಕಿಮ್ಮತ್ತಿನ ವಸ್ತುಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿದ ಘಟನೆ ಡಿ.3 ರಂದು ನಡೆದಿದೆ. ಮುಖ್ಯ ಶಿಕ್ಷಕ ಎಚ್‌.ಎಚ್‌. ಜಾಡದ ಅವರು ದೂರು ಸಲ್ಲಿಸಿದ್ದಾರೆ. ಹಲಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ 


ಸುದ್ದಿ ಓದಿ