50 ಪಂಪ್ಸೆಟ್ಗಳ ಕೇಬಲ ಕಳ್ಳತನ: ಬಂಧನವಾಗದ ಕಳ್ಳರು ; ಪೊಲೀಸರ ವಿರುದ್ಧ ಗ್ರಹ ಸಚಿವರಿಗೆ ದೂರು
ಲೋಕದರ್ಶನ ವರದಿ
ಕಾಗವಾಡ 07: ಕಳೆದ ಮೂರು ತಿಂಗಳಗಳಿಂದ ಕೃಷ್ಣಾ ನದಿ ತೀರದಲ್ಲಿರುವ ಉಗಾರ, ಐನಾಪುರ್ ಗ್ರಾಮಗಳಲ್ಲಿಯ ರೈತರ ಸುಮಾರು 50 ಪಂಪ್ಸೆಟ್ಗಳ ಕೇಬಲ ಕಳ್ಳತನವಾಗಿದೆ. ಈಗಲೂ ತಪಾಸಣಾ ಕಾರ್ಯ ಕೈಗೊಂಡಿಲ್ಲ. ಇದರಿಂದ ರೊಚ್ಚಿಗೆದ್ದ ರೈತರು ರಾಜ್ಯದ ಗ್ರಹ ಸಚಿವ ಆರಗ ಜ್ಞಾನೇಂದ್ರ ಇವರನ್ನು ಉಗಾರ್ ಬುಧ್ರುಕ ಗ್ರಾಮದಲ್ಲಿ ತಡೆದು ತಮ್ಮ ಅಳಲನ್ನು ತೋಡಿಕೊಂಡರು.
ಬುಧವಾರ ದಿ. 6ರಂದು ಗ್ರಹ ಇಲಾಖೆಯ ಸಚಿವರು ಕುಡಚಿ ಪಟ್ಟಣದಲ್ಲಿ ಕಟ್ಟಿಸಿದ ನೂತನ ಪೊಲೀಸ್ ಠಾಣಾ ಕಚೇರಿ ಉದ್ಘಾಟನೆ ನಿಮಿತ್ಯ ಬೆಳಗಾವಿಂದ ಉಗಾರ್ ಮುಖಾಂತರ ತರಳುತ್ತಿರುವಾಗ ರೈತ ಮುಖಂಡರು ಮತ್ತು ಉಗಾರದ ಪಿಕೆಪಿಎಸ್ ಅಧ್ಯಕ್ಷರು ಶೀತಲ್ ಪಾಟೀಲ್ ಇವರ ನೇತೃತ್ವದಲ್ಲಿ ನೂರಾರು ರೈತರು ಒಂದುಗೂಡಿ ಗೃಹ ಸಚಿವರ ಮುಂದೆ ಸ್ಥಳೀಯ ಪೊಲೀಸ್ ಠಾಣೆ ಅಧಿಕಾರಿಗಳ ವಿರುದ್ಧ ಮಾಹಿತಿ ನೀಡಿ ತಮ್ಮ ಅಳಲನ್ನು ತೋಡಿಕೊಂಡರು.
ಶೀತಲ್ ಪಾಟೀಲ್ ಇವರು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡುವಾಗ ರೈತರು ಅನೇಕ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ, ಅವರಿಗೆ ಯಾವುದೇ ರೀತಿಯ ಸಹಕಾರ ಸಹಾಯ ಇಲ್ಲ ಅವರ ಬೆಳೆಗಳಿಗೆ ನೀರು ಪೂರೈಸಲು ನದಿ ತೀರದಲ್ಲಿ ಅಳವಡಿಸಿರುವ ಪಂಪ್ಸೆಟ್ಗಳ ಕೇಬಲ್ಗಳು ಕಳ್ಳತನ ಮಾಡುತ್ತಿದ್ದಾರೆ. ಈ ಬಗ್ಗೆ ಕಾಗವಾಡ ಠಾಣೆಗೆ ದೂರು ನೀಡಿ ಮೂರು ತಿಂಗಳು ಕಳೆದರೂ ಶೋಧ ಕಾರ್ಯವಾಗಿಲ್ಲ. ನಮಗೆ ನ್ಯಾಯ ನೀಡಿರಿ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು. ಇದನ್ನು ಆಲಿಸಿದ ಸಚಿವರು ಕೂಡಲೇ ಅಧಿಕಾರಿಗಳಿಗೆ ತಪಾಸನೆ ಕಾರ್ಯ ಶೀಘ್ರದಲ್ಲಿ ಪೂರ್ಣಗೊಳಿಸಿ, ಕಳ್ಳರನ್ನು ಬಂಧಿಸಿರಿ ಎಂದು ಹೇಳಿದರು.
ಸಚಿವರನ್ನು ಶೀತಲ್ ಪಾಟೀಲ್ ಹಾಗೂ ಇನ್ನುಳಿದ ರೈತರು ಸನ್ಮಾನಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಾಗೌಡ ಪಾಟೀಲ್, ಅಪ್ಪಾಸಾಹೇಬ ಚೌಗುಲೆ, ಪ್ರಮೋದ್ ಹೂಸುರೆ, ಅಣಾಸಾಹೇಬ ನಂದಗಾವೆ, ಸೇರಿದಂತೆ ಅನೇಕ ರೈತರು ಬಿಜೆಪಿ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.