ತಾಲೂಕಿನಲ್ಲಿ 20ಕ್ಕೂ ಹೆಚ್ಚು ಸರಣಿ ಮನೆಗಳ್ಳತನ
ಪ್ರಕರಣ ಭೇದಿಸುವಲ್ಲಿ ಪೋಲಿಸ್ ಇಲಾಖೆ ವಿಫಲ| ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನ
ಅಥಣಿ 1: ತಾಲೂಕಿನ ಕಳೆದ ಮೂರು ತಿಂಗಳಿನಲ್ಲಿ ಸರಣಿ ಮನೆಗಳ್ಳತನ ನಡೆದು ಸುಮಾರು 20 ಹೆಚ್ಚು ಪ್ರಕರಣಗಳು ದಾಖಲಾಗಿವೆ. ಪೋಲೀಸ್ ಇಲಾಖೆ ಪ್ರಕರಣ ಭೇದಿಸಲು ವಿಫಲವಾಗಿದೆ ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅಥಣಿ ತಾಲೂಕಿನತ್ತ ಗಮನ ಹರಿಸಬೇಕೆಂದು ತಾಲೂಕಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಅಥಣಿ ತಾಲೂಕಿನ ಝುಂಜರವಾಡ, ಸುಟ್ಟಟ್ಟಿ, ಶಿರಹಟ್ಟಿ, ನಂದಗಾಂವ್, ಸತ್ತಿ, ಕೊಟ್ಟಲಗಿ, ತೆಲಸಂU\ಗ ಸೇರಿದಂತೆ ಇನ್ನೂ ಹಲವು ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಸರಣಿ ಮನೆಗಳ್ಳತನ ನಡೆದು ಗ್ರಾಮಸ್ಥರು ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳೆದುಕೊಂಡು ಪೋಲಿಸ್ ಇಲಾಖೆಯ ಮೇಲೆ ಮರಳಿ ಪಡೆಯುವ ಅಥವಾ ಪರಿಹಾರ ಪಡೆಯುವ ಹಲವಾರು ನೀರೀಕ್ಷೆ ಇಟ್ಟಿದ್ದು. ಸದ್ಯ ಪೋಲಿಸ್ ಇಲಾಖೆ ಅಸಹಾಯಕತೆ ಸ್ಥಿತಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ !
ಪೋಲಿಸ್ ಇಲಾಖೆಗೆ ಈ ಪ್ರಕರಣ ಕಬ್ಬಿನ ಕಡಲೆ: ಮಹಾರಾಷ್ಟ್ರ ರಾಜ್ಯದ ಗಡಿ ಹೊಂದಿರುವ ಅಥಣಿ ತಾಲೂಕಿನ ಗ್ರಾಮಗಳನ್ನು ಕಳ್ಳರು ಆಯ್ಕೆ ಮಾಡಿಕೊಂಡು. ರಾತ್ರಿ ಹೊತ್ತಿನಲ್ಲಿ ನಾಲ್ಕು ಅಥವಾ ಐದು, ಜನರ ತಂಡ ನಡುಗುತ್ತಲೇ ಸಮಯದಲ್ಲಿ ದೇವಸ್ಥಾನ, ಮನೆ, ಅಂಗಡಿ, ಸರಣಿ ಕಳ್ಳತನ ಮಾಡಿಕೊಂಡು ತಿರುಗಿ ಮಹಾರಾಷ್ಟ್ರಕ್ಕೆ ಹೋಗುವುದರಿಂದ ತನಿಖೆ ವಿಳಂಬ ವಾಗುತ್ತದೆ ಎಂದು ಪೋಲಿಸ್ ಮೂಲಗಳು ಮಾಹಿತಿ ನೀಡುತ್ತಿವೆ. ಹಾಗೂ ದರೋಡೆಕೋರರು ಕಳ್ಳತನಕ್ಕೆ ಬಂದಾಗ ಮೋಬೈಲ್ ಬಳಕೆ ಮಾಡುತ್ತಿಲ್ಲ, ಮತ್ತು ಸಿಸಿ ಕ್ಯಾಮರಾದಲ್ಲಿ ಸರಿಯಾಗಿ ಚಹರೆ ಸಿಗುತ್ತಿಲ್ಲ ಎಂಬ ಮಾತುಗಳನ್ನು ಪೋಲಿಸ್ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಕಳ್ಳತನ ಪ್ರಕರಣ ಭೇದಿಸಲು ಸಿಬ್ಬಂದಿ ಕೊರತೆ ಪ್ರಮುಖ ಕಾರಣ: ಬೆಳಗಾವಿ ಜಿಲ್ಲೆಯಲ್ಲಿ ಅತಿ ವಿಸ್ತಾರವಾದ ಅಥಣಿ ತಾಲೂಕು 70 ಹೆಚ್ಚು ಗ್ರಾಮಗಳನ್ನು ಹೊಂದಿರುವ ತಾಲೂಕಿಗೆ ಎರಡು ಹೋಬಳಿ ಕೇಂದ್ರಗಳು, 46 ಗ್ರಾಮ ಪಂಚಾಯಿತಿ ಹೊಂದಿರುವ ತಾಲೂಕಿಗೆ ಪಟ್ಟಣದ ಸೇರಿದಂತೆ 2ಪೋಲಿಸ್ ಠಾಣೆ ಇರುವುದುಂಟು, ಅದರಲ್ಲೂ ಪೋಲಿಸ್ ಸಿಬ್ಬಂದಿಯ ಕೊರತೆ ಇದಕ್ಕೆ ಪೂರಕವಾಗಿದೆ. ಅಥಣಿ ಪಟ್ಟಣಕ್ಕೆ ಹಾಗೂ ಗ್ರಾಮೀಣ ಭಾಗಕ್ಕೆ ಪ್ರತ್ಯೇಕ ಎರಡು ಪೋಲಿಸ್ ಠಾಣೆ ನೀಡುವಂತೆ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸ್ಥಳಿಯ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಾಗಿ ಈ ಭಾಗದಲ್ಲಿ ಹೆಚ್ಚುವರಿ ಪೋಲಿಸ್ ಠಾಣೆ ಸ್ಥಾಪನೆ ಆಗುತ್ತಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಕಳೆದುಕೊಂಡ ಸಂತ್ರಸ್ತರಿಗೆ ಪೋಲಿಸ್ ಇಲಾಖೆಯ ಮೇಲಿನ ನಂಬಿಕೆ ಕಳೆದುಕೊಳ್ಳುವ ಮೊದಲು ಬೆಳಗಾವಿ ಜಿಲ್ಲಾ ಪೋಲಿಸ್ ಯಾವರೀತಿ ಈ ಕಳ್ಳತನ ಪ್ರಕರಣ ಭೇದಿಸಲು ಕಾರ್ಯ ನಿರ್ವಹಿಸುತ್ತಾರೆ ಎಂಬುದು ಯಕ್ಷಪ್ರಶ್ನೆಯಾಗಿದೆ !
ನಮ್ಮು ಊರಾಗಿನ ಮನಿ, ದೇವಸ್ಥಾನಾಗಿನ ಬಂಗಾರ, ಬೆಳ್ಳಿ, ರೊಕ್ಕ ತೊಗೊಂಡು ಮೂರ ತಿಂಗಳಾದರೂ ಕಳ್ಳರ ಸಿಕ್ಕಿಲ್ಲ, ಪೋಲಿಸ್ ಎನ್ ಮಾಡಲತ್ಯಾರ ಅಂತ ಗೋತ್ತಿಲ್ಲ ನೋಡ್ರಿ- ಅಣ್ಣಸಾಬ ಸಂಕೋನಟ್ಟಿ,
(ಝುಂಜರವಾಡ ಗ್ರಾಮಸ್ಥ).
ಸರಣಿ ಕಳ್ಳತನ ಅಥಣಿ ತಾಲೂಕಿನಲ್ಲಿ ನಡೆದಿದ್ದು ಕೂಡಲೇ ಈ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು ಕಳ್ಳರ ತಂಡವನ್ನು ಆದಷ್ಟು ಬೇಗನೆ ಬಂಧಿಸುತ್ತೇವೆ.- ಶಂಕರಗೌಡ ಬಸವನಗೌಡರ.
ಸಿಪಿಐ ಅಥಣಿ