ಯರಗಟ್ಟಿ

ಕಳ್ಳತನ ಪ್ರಕರಣ: ಮುರಗೋಡ ಪೊಲೀಸರಿಂದ ಅಂತರಾಜ್ಯ ಕಳ್ಳನ ಬಂಧನ

ಕಳ್ಳತನ ಪ್ರಕರಣ: ಮುರಗೋಡ ಪೊಲೀಸರಿಂದ ಅಂತರಾಜ್ಯ ಕಳ್ಳನ ಬಂಧನ

ಲೋಕದರ್ಶನ ವರದಿ 


ಯರಗಟ್ಟಿ 27: ಇತ್ತಿಚಿಗೆ ಯರಗಟ್ಟಿ ಪಟ್ಟಣದಲ್ಲಿ ಕಿರಾಣಿ ಅಂಗಡಿ ಮತ್ತು ಖಾಸಗಿ ಆಝಾದ ಬ್ಯಾಂಕ ಹಾಗೂ ಬೆನಕಟ್ಟಿ ಗ್ರಾಮದ ಎಮ್‌ಎಸ್‌ಐಎಲ್ ಬಾರ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಒಬ್ಬ ಅಂತರಾಜ್ಯ ಕುಖ್ಯಾತ ಕಳ್ಳನನ್ನು ಮುರಗೋಡ ಪೊಲೀಸರು ಬಂಧಿಸಿ ಒಟ್ಟು 04 ಪ್ರಕರಣಗಳನ್ನು ಭೇದಿಸಿ ಕಳ್ಳತನಕ್ಕೆ ಸಂಬಂಧಿಸಿದಂತೆ 48,000 ರೂ. ಕಿಮ್ಮತ್ತಿನ 10 ಗ್ರಾಂ, ತೂಕದ ಬಂಗಾರದ ಆಭರಣಗಳನ್ನು, 70,000 ರೂ. ಕಿಮ್ಮತ್ತಿನ 01 ಕೆ.ಜಿ 10 ಗ್ರಾಂ, ತೂಕದ 101 ಬೆಳ್ಳಿಯ ನಾಣ್ಯಗಳನ್ನು ಮತ್ತು 2000 ರೂಪಾಯಿ ನಗದು ಚಿಲ್ಲರೆ ಹಣ ಹಾಗೂ ಒಂದು ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿರುತ್ತಾರೆ. 


ಇವನೊಂದಿಗೆ ಕಳ್ಳತನ ಮಾಡಿದ ಇನ್ನಿಬ್ಬರು ಆರೋಪಿತರು ತಲೆಮರೆಸಿಕೊಂಡಿದ್ದಾರೆ. ಆರೋಪಿತರು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪೂರ ಜಿಲ್ಲೆಯವರು ಅಂತ ತಿಳಿದು ಬಂದಿದೆ.  


ರಾಮದುರ್ಗ ಉಪ ವಿಭಾಗ ಡಿಎಸ್‌ಪಿ ರಾಮನಗೌಡ ಹಟ್ಟಿ ಅವರ ಮಾರ್ಗದರ್ಶನದಲ್ಲಿ ಮುರಗೋಡ ಪೊಲೀಸ್ ಇನ್ಸಪೆಕ್ಟರ ಮೌನೇಶ್ವರ ಮಾಲಿ ಪಾಟೀಲ ಇವರ ನೇತೃತ್ವದಲ್ಲಿ ಮುರಗೋಡ ಪೊಲೀಸ್ ಠಾಣೆಯ ಪ್ರೋ. ಪಿಎಸ್‌ಐ ಬಸಗೌಡ ನೇರ್ಲಿ, ಲಕ್ಷ್ಮಿ ಬಿರಾದಾರ ಹಾಗೂ ಸಿಬ್ಬಂದಿಯಾದ ಕೆ. ಬಿ.ಅಲಗರಾವುತ, ವಿ.ಡಿ ಸಕ್ರಿ, ಎಮ್‌. ಬಿ. ಸಣ್ಣನಾಯ್ಕ, ಎ. ವಿ. ಜೊತೆನ್ನವರ, ಬಿ. ಎಸ್‌. ಅಂತರಗಟ್ಟ, ಐ. ಎಸ್‌. ವಕ್ಕುಂದ, ಸುರೇಶ ಹುಂಬಿ, ರಮೇಶ ಸಸಾಲಟ್ಟಿ, ಮತ್ತು ಎಚ್‌.ಆರ್ ನ್ಯಾಮಗೌಡ್ರ, ಎಚ್‌. ವಾಯ್‌. ಮೇಟಿ ಇವರ ತಂಡ ಈ 04 ಪ್ರಕರಣಗಳನ್ನು ಪತ್ತೆ ಮಾಡಿದ್ದು ಈ ತಂಡದಲ್ಲಿ ಇರುವ ಅಧಿಕಾರಿಗಳಿಗೆ ಹಾಗೂ ಎಲ್ಲ ಸಿಬ್ಬಂದಿ ಜನರಿಗೆ ಎಸ್‌.ಪಿ ಬೆಳಗಾವಿ ಜಿಲ್ಲೆ ಮತ್ತು ಹೆಚ್ಚುವರಿ ಎಸ್‌.ಪಿ ಬೆಳಗಾವಿ ಜಿಲ್ಲೆ ಅವರು ಅವರ ಕಾರ್ಯವೈಖರಿ ಬಗ್ಗೆ ಪ್ರಶಂಸೆ ಮಾಡಿದ್ದಾರೆ. 


ಸುದ್ದಿ ಓದಿ