ಕಲಾವಿದರ ಸಹಾಯಾರ್ಥ ನಾಟಕ ಪ್ರದರ್ಶನ
ಗುಳೇದಗುಡ್ಡ16: ಶ್ರೀಗುರು ಪುಟ್ಟರಾಜ ನಾಟಕ ಮತ್ತು ಸಾಂಸ್ಕೃತಿಕ ಸಂಘದ ಆಶ್ರಯದಲ್ಲಿ ರಂಗ ಕಲಾವಿದರ ಸಹಾಯಾರ್ಥವಾಗಿ ಪ್ರೇಮಾ ಬಾದಾಮಿ ವಿರಚಿತ ಚಿರಸ್ಥಾಯಿ ಶ್ರೀಗುರು ಪುಟ್ಟರಾಜ ಎಂಬ ನಾಟಕವನ್ನು ಬಸವಲಿಂಗಯ್ಯ ಹಿರೇಮಠ ಅವರ ನಿರ್ದೇಶನದಲ್ಲಿ ಪಟ್ಟಣದ ಕರನಂದಿಯವರ ರಂಗಮಂದಿರದಲ್ಲಿ ನ.18 ರಂದು ಸಂಜೆ 6-30 ಕ್ಕೆ ಪ್ರದರ್ಶನ ನಡೆಸಲಾಗುವುದು ಎಂದು ರಂಗಭೂಮಿ ಕಲಾವಿದೆ ಗೀತಾ ಗುಳೇದಗುಡ್ಡ ಹೇಳಿದರು.
ಸೋಮವಾರ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋವಿಡ್ ಲಾಕ್ಡೌನ್ದಿಂದ ಕಳೆದ ಎರಡು ವರ್ಷಗಳಿಂದ ರಂಗಭೂಮಿ ಚಟುವಟಿಕೆಗಳು ನಿಂತು ಹೋಗಿವೆ. ರಂಗಭೂಮಿಯನ್ನೇ ನಂಬಿ ಬದುಕುತ್ತಿರುವ ಕಲಾವಿದರ ಬದುಕು ಈಗ ಸಂಕಷ್ಟದಲ್ಲಿದೆ. ಇಂತಹ ಬಡ ಕಲಾವಿದರ ನೆರವಿಗಾಗಿ ಪಟ್ಟಣದಲ್ಲಿ ಕೇವಲ ಒಂದು ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಕಲಾಭಿಮಾನಿಗಳು ಆಗಮಿಸಿ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.
ನಾಟಕ ಪ್ರದರ್ಶನವನ್ನು ಮಾಜಿ ಮುಖ್ಯಮಂತ್ರಿ ಶಾಸಕ ಸಿದ್ಧರಾಮಯ್ಯ ಉದ್ಘಾಟಿಸುವರು. ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಜೆಡಿಎಸ್ ಜಿಲ್ಲಾಧ್ಯಕ್ಷ ಹಣಮಂತ ಮಾವಿನಮರದ, ಕಾಂಗ್ರೇಸ್ ಮುಖಂಡ ಹೊಳೆಬಸು ಶೆಟ್ಟರ್, ಪ್ರಥಮದರ್ಜೆ ಗುತ್ತಿಗೆದಾರ ಬೋಜು ರಾಠೋಡ, ಗ್ರಾ.ಪಂ. ಅಧ್ಯಕ್ಷ ಲಿಂಗಬಸು ಅಂಗಡಿ, ಶ್ರೀಶೈಲ್ ಶಿಕ್ಕೇರಿ, ಪರ್ಪ ಜಂಗಣ್ಣವರ್, ಗ್ರಾ.ಪಂ.ಸದಸ್ಯ ನಿಂಗನಗೌಡ ಪಾಟೀಲ, ಪ್ರವೀಣ ಪತ್ರಿ, ರಾಜು ಹಂಗರಗಿ, ಪಿಎಸ್ಐ ಸಿ.ಬಿ.ಕಿರಶ್ಯಾಳ ಉದ್ಘಾಟನೆಯಲ್ಲಿ ಭಾಗವಹಿಸುವರು ಎಂದು ಹೇಳಿದರು.
ಸಂಘದ ಕಾರ್ಯದರ್ಶಿ ಶಬ್ಬೀರ ನಾಯಕ, ಕಲಾವಿದೆ ಶಶಿ ಮಲ್ಕಲ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.