ಶಿಗ್ಗಾವ್

ಯುವಕರು ದುಶ್ಚಟಗಳಿಗೆ ಬಲಿಯಾಗದೇ ಮಾದರಿ ಆಗಬೇಕು

ಯುವಕರು ದುಶ್ಚಟಗಳಿಗೆ ಬಲಿಯಾಗದೇ ಮಾದರಿ ಆಗಬೇಕು

ಶಿಗ್ಗಾವಿ 14:  ಯುವಕರು ದುಶ್ಚಟಗಳಿಗೆ ಬಲಿಯಾಗದೇ ನೀವು ಮಾದರಿ ವಿದ್ಯಾರ್ಥಿಗಳು ಆಗಬೇಕು ಅಲ್ಲದೇ ಯುವಕರು ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ ಎಂದು ಯೋಧ ಪರುಶರಾಮ ದಿವಾನರ ಹೇಳಿದರು. 

ಪಟ್ಟಣದ ಸಂತೆ ಮೈದಾನದಲ್ಲಿ ನಡೆದಯುವ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಕಣಾರ್ಜುನ ಚಲನಚಿತ್ರ ತಂಡದ ಸಂಯುಕ್ತಾಶ್ರಯದಲ್ಲಿ ಎಸ್‌.ಎಸ್‌.ಎಲ್‌.ಸಿ ಮತ್ತು ಪಿ.ಯು.ಸಿಶೇ 96 ಅ ಮೇಲ್ಪಟ್ಟ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಮತ್ತು ರಾಜೋತ್ಸವ ಪುರಸ್ಕೃತರಿಗೆ ಗೌರವ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಸಂಘಟನೆ ಮಾಡುವುದು ಬಹಳ ಕಷ್ಟ ಅದನ್ನು ನಾನು ಅರಿತಿದ್ದೇನೆ, ವಿಧ್ಯಾರ್ಥಿಗಳಿಗೆ ನಿಮ್ಮಗುರಿ ಮುಖ್ಯ ಗುರಿ ಜೊತೆಗೆ ಒಳ್ಳೆಯ ಗುರು ಬೇಕು ಬರುವ ದಿನಗಳಲ್ಲಿ ಭಾರತೀಯ ಸೇನಾದಲ್ಲಿ ನೀವು ಆಯ್ಕೆಯಾಗಬೇಕು ಎಂಬುದು ನನ್ನ ಆಶಯವಾಗಿದ ೆಎಂದರು. 

ಯುವ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ ಚಾಕಲಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿ   ತಾಲೂಕಿನ  ವಿಧ್ಯಾರ್ಥಿಗಳು ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಯುವ ಕರ್ನಾಟಕ ರಕ್ಷಣಾ ವೇದಿಕೆ ನಾಡು ನುಡಿಜಲಕ್ಕಾಗಿ ಅನೇಕ ಪ್ರಾಮಾಣಿಕ ಹೋರಾಟ ಮಾಡುತ್ತಾ ಬಂದಿದ್ದೇವೆಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು. 

ಸಮಾಜ ಸೇವಕ ಶಶಿಧರ ಯಲಿಗಾರ ಮಾತನಾಡಿ  ನಾಡಿನಲ್ಲಿ ಕನ್ನಡಾಭಿಮಾನ ಉಳಿಸಲು ಇಂತಹ ಸಂಘಟನೆಅವಶ್ಯ ಭಾಷೆಗಳು ದಿನದಿಂದ ದಿನಕ್ಕೆ ನಶಿಸಿ ಹೋಗುತ್ತಿದೆ. ಕರ್ನಾಟಕದಲ್ಲಿ ಕನ್ನಡ ಇದೆ ಎಂದರೆ ಅದಕ್ಕೆ ಸ್ಪೂರ್ತಿಕನ್ನಡ ಸಂಘಟನೆಗಳು ಎಂದು ಹೇಳಿದರು. ಪ್ರತಿವರ್ಷ 2 ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುಗಳು ಗುರುತಿಸಿ ಅವರನ್ನು ಉನ್ನತ ಶ್ರೇಣಿಯ ಸ್ಥಾನಮಾನವನ್ನು ಅಲಂಕರಿಸಲು ಪ್ರೋತ್ಸಾಹಿಸಬೇಕು ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು. 

ಶಿವಾನಂದ ಮ್ಯಾಗೇರಿ ಮಾತನಾಡಿ ಕರ್ನಾಟಕದಲ್ಲಿ  ಕನ್ನಡ ಪರ ಸಂಘಟನೆಗಳ ಮುಖಾಂತರ ಪ್ರತಿವರ್ಷ ಸಮಾಜಮುಖಿ ಕೆಲಸ ಮಾಡುವಗಣ್ಯರಿಗೆರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸುವಲ್ಲಿ ರಕ್ಷಣಾ ವೇದಿಕೆ ಪಾತ್ರಬಹಳ ಮಹತ್ವ ಪಡೆದಿದೆ ಆ ನಿಟ್ಟಿನಲ್ಲಿ ತಾಲೂಕಿನಲ್ಲಿ ಯುವಕರ್ನಾಟಕ ರಕ್ಷಣಾ ವೇದಿಕೆ ಗೌರವ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ ಎಂದರು.

ದಿವ್ಯ ಸಾನಿಧ್ಯ ವಹಿಸಿ ಸಂಗನಬಸವ ಶ್ರೀಗಳು ಆರ್ಶಿವದಿಸಿದರು. ರಾಜ್ಯಾದ್ಯಕ್ಷ ವಿಜಯ ಹರ್ಲಾಪೂರ, ಪರಮೇಶಿ ಲಮಾಣಿ,  ತಿಪ್ಪಣ್ಣಾ ಸಾತಣ್ಣವರ, ಬಸವರಾಜ ಕುರಗೋಡಿ, ಮುತ್ತಣ್ಣ ಗುಡಗೇರಿ, ಕಿರಣ ಅವರಾದಿ, ಮಾರುತಿ ಲಮಾಣಿ, ಗಣೇಶಗೌಡ, ಬಿ.ಆರ್‌.ಮಡಿವಾಳರ, ರಮೇಶ ಸಾತಣ್ಣವರ, ಕೊಟ್ರೇಶ ಮಾಸ್ತರ ಬೆಳಗಲಿ ಸೇರಿದಂತೆ ಯುವ ಕರವೇಯ ವಿವಿಧ ತಾಲೂಕಿನ ಪಧಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಮಕ್ಕಳು ಮತ್ತು ಪಾಲಕರು ಸಾರ್ವಜನಿಕರು ಉಪಸ್ಥಿತರಿದ್ದರು. ಮಹೇಶ ಕರ್ಜಗಿ ಸ್ವಾಗತಿಸಿದರು,  ನಾಗಪ್ಪ ಬೆಂತೂರ ಕಾರ್ಯಕ್ರಮ ನಿರ್ವಹಿಸಿದರು. 


ಸುದ್ದಿ ಓದಿ