ಕಾಗವಾಡ

ಕಾಗವಾಡ ಶಿಕ್ಷಕರ ಸಂಘದ ಕಾರ್ಯ ರಾಜ್ಯದಲ್ಲಿಯೇ ಮಾದರಿ: ಚಂದ್ರಶೇಖರ ನುಗ್ಗಲಿ

ಕಾಗವಾಡ ಶಿಕ್ಷಕರ ಸಂಘದ ಕಾರ್ಯ ರಾಜ್ಯದಲ್ಲಿಯೇ ಮಾದರಿ: ಚಂದ್ರಶೇಖರ ನುಗ್ಗಲಿ

ತಾಲೂಕಾ ಶಿಕ್ಷಕರ ಸಂಘದ ಸದಸ್ಯರಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯ ಡಿಜಿಟಲ್ ಕಾರ್ಡ ವಿತರಣೆ; ..! 

ಕಾಗವಾಡ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾಗವಾಡ ತಾಲೂಕ ಘಟಕ ಅತ್ಯಂತ ಚಿಕ್ಕ ತಾಲೂಕಾ ಘಟಕವಾಗಿದ್ದರೂ, ಅವರ ಕಾರ್ಯ ಮಾತ್ರ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯದಲ್ಲಿಯೇ ಚಿಕ್ಕೋಡಿ ಜಿಲ್ಲೆಯ ಸಂಘಟನೆ ಅದರಲ್ಲೂ ವಿಷೇಶವಾಗಿ ಕಾಗವಾಡ ತಾಲೂಕಾ ಸಂಘಟನೆ ಪದಾಧಿಕಾರಿಗಳ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಅಭಿಪ್ರಾಯ ಪಟ್ಟಿದ್ದಾರೆ. 

ಅವರು ಬುಧವಾರ ದಿ. 02 ರಂದು ತಾಲೂಕಿನ ಉಗಾರ ಖುರ್ದ ಪಟ್ಟಣದ ಮಹಾದೇವ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾಗವಾಡ ತಾಲೂಕಾ ಘಟಕದ ಸದಸ್ಯರಿಗೆ ಜ್ಯೋತಿ ಸಂಜೀವಿನಿ ಆರೋಗ್ಯ ಭಾಗ್ಯ ಡಿಜಿಟಲ್ ಕಾರ್ಡ ವಿತರಣೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ರಾಜ್ಯದಲ್ಲಿ ಸುಮಾರು 53 ವರ್ಷಗಳ ಹಿಂದೆ ದಲಿತ ಶಿಕ್ಷಕ ಜಯಶಂಕರ ಇವರ ನೇತೃತ್ವದಲ್ಲಿ ಸ್ಥಾಪಿಸಿದ ರಾಜ್ಯ ಶಿಕ್ಷಕರ ಸಂಘಟನೆ ಈ ವರೆಗೆಯೂ ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯಲ್ಲಿ 46 ಸಾವಿರ ಸರಕಾರಿ ಕನ್ನಡ ಶಾಲೆಗಳಿಂದ 52 ಲಕ್ಷ ವಿದ್ಯಾರ್ಥಿಗಳಿಗೆ ಶಿಕ್ಷಕರು ಭೋದನೆ ಮಾಡುತ್ತಿದ್ದಾರೆ. ಈ ಎಲ್ಲ ಶಿಕ್ಷಕರ ಆರೋಗ್ಯ ಕಾಪಾಡಲು ಶಿಕ್ಷಕರ ಸಂಘಟನೆಯ ವತಿಯಿಂದ ಜ್ಯೋತಿ ಸಂಜಿವಿನಿ ಆರೋಗ್ಯ ಭಾಗ್ಯ ಡಿಜಿಟಲ್ ಕಾರ್ಡ ವಿತರಿಸಲಾಗುತ್ತಿದೆ ಎಂದರು. 

ವಿದ್ಯಾದೇವಿ ಸರಸ್ವತಿ ದೇವಿಯ ಭಾವಚಿತ್ರದ ಪೂಜೆಯೊಂದಿಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಸಾಧನೆ ಮಾಡಿದ ಎಲ್ಲ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು. ಚಿಕ್ಕೋಡಿ ಜಿಲ್ಲಾಧ್ಯಕ್ಷ ಎಸ್‌.ಎಂ. ಲೋಕನ್ನವರ ಮಾತನಾಡಿ, ಕಾಗವಾಡ ಶಿಕ್ಷಕರ ಸಂಘಟನೆ ಕಾರ್ಯವನ್ನು ಮುಕ್ತ ಕಂಠದಿಂದ ಹೊಗಳಿದರು. 

 ಶಿಕ್ಷಕರ ಸಂಘಟನೆಯ ಜಿಲ್ಲಾ ಪದಾಧೀಕಾರಿಗಳಾದ ಡಿ.ಜೆ. ಕಲಾರಕೊಪ್ಪ, ಕಾಗವಾಡ ತಾಲೂಕಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ಸಂಕಪಾಳ, ಜಿಲ್ಲಾ ಗೌರವಾಧ್ಯಕ್ಷ ಜಿ.ಎಂ. ಹಿರೇಮಠ, ತಾಲೂಕಾ ಉಪಾಧ್ಯಕ್ಷ ಐ.ಐ. ಕಾಂಬಳೆ, ತಾಲೂಕಾ ಸಹ ಕಾರ್ಯದರ್ಶಿ ಆರ್‌. ಎಂ. ತೆವರಟ್ಟಿ, ಕಾರ್ಯದರ್ಶಿ ಕೆ.ಎನ್‌. ಗಾಣಿಗೇರ, ಆರ್‌.ಎ. ನಾಂದಣಿ, ಎ.ಟಿ. ಮೇತ್ರೆ, ಗುಲಾಬ ಮಾಂಜರೆ, ಕೆ.ಎಸ್‌. ಪಾವಲಿ, ಎಲ್‌.ಕೆ. ಅರವಾಡೆ ಸೇರಿದಂತೆ ತಾಲೂಕಾ ಶಿಕ್ಷಕ ಸಂಘದ ಎಲ್ಲ ಪದಾಧೀಕಾರಿಗಳು, ಕಾಗವಾಡ ವಲಯದ ಎಲ್ಲ ಗುರುಗಳು, ಗುರುಮಾತೆಯರು ಉಪಸ್ಥಿತರಿದ್ದರು. ಶಿಕ್ಷಕರಾದ ಎಸ್‌.ಎಸ್‌. ಬಾವಿ, ಡಿ.ಕೆ. ಹಿರೇಮಠ ನಿರೂಪಿಸಿದರು. 


ಸುದ್ದಿ ಓದಿ