ಕರಾಟೆಯನ್ನು ಬೆಳೆಸಿರುವ ಕಾರ್ಯ ಶ್ಲಾಘನೀಯವಾಗಿದೆ : ಶಿವಾನಂದ ಹಳಿಗೌಡರ
ಕಾಗವಾಡ 20: ಗಡಿಯ ಗ್ರಾಮೀಣ ಭಾಗದಲ್ಲಿ ಜಿಲ್ಲಾ ರಾಣಿ ಚೆನ್ನಮ್ಮಾ ಸೇಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋರ್ಟ್ಸ ಅಸೋಶಿಯೇಶನ್ ಸ್ಥಾಪಿಸಿ, ಕರಾಟೆ ಕ್ರೀಡೆಯನ್ನು ಬೆಳೆಸಿ, ಬೆಳಗಾವಿ ಜಿಲ್ಲೆಯಲ್ಲಿಯೇ ಅತೀ ಹೆಚ್ಚು ಕರಾಟೆ ಪಟುಗಳನ್ನು ತಯಾರುಸುತ್ತಿರುವ ರಾಜು ಪಾಟೀಲ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ ಎಂದು ತಾಲೂಕಾ ದೈಹಿಕ ಪರೀವಿಕ್ಷಕರಾದ ಶಿವಾನಂದ ಹಳಿಗೌಡರ ಅಭಿಪ್ರಯಾ ಪಟ್ಟಿದ್ದಾರೆ.
ಅವರು, ಶುಕ್ರವಾರ ದಿ. 20 ರಂದು ತಾಲೂಕಿನ ಜುಗೂಳ ಕೆಎಸ್ಎಸ್ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಉಪನಿರ್ದೇಶಕರ ಕಾರ್ಯಾಲಯ ಚಿಕ್ಕೋಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಾಗವಾಡ, ಕರ್ನಾಟಕ ಶಿಕ್ಷಣ ಸಮಿತಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಜಿಲ್ಲಾ ರಾಣಿ ಚೆನ್ನಮ್ಮಾ ಸೇಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋರ್ಟ್ಸ ಅಸೋಶಿಯೇಶನ್ ಇವರ ಸಹಯೋಗದೊಂದಿಗೆ 2025-25 ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳ ಚಿಕ್ಕೋಡಿ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಗಳಿಗೆ ಚಾಲನೆ ನೀಡಿ, ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮೊದಲಿಗೆ ಕುಮಾರಿ ವೈಷ್ಣವಿ ಪಾಟೀಲ ಇವಳಿಂದ ಈಶಸ್ತವನ, 7ನೇ ತರಗತಿ ವಿದ್ಯಾರ್ಥಿನಿಯರ ಸ್ವಾಗತ ಗೀತೆಯೊಂದಿಗೆ ಆಗಮಿಸಿದ್ದ ಎಲ್ಲ ಗಣ್ಯರು ದೀಪ ಬೆಳಗಿಸಿ, ಚಾಲನೆ ನೀಡಿದರು. ಬಳಿಕ ಆಗಮಿಸಿದ್ದ ಎಲ್ಲ ಗಣ್ಯರನ್ನು ಜೊತೆಗೆ ಗ್ರಾಮದ ಸಿದ್ಧಿ ಪೌಂಡೇಶನ್ನ ಸಾಮಾಜಿಕ ಕಾರ್ಯಕ್ಕೆ ಅದರ ಉಪಾಧ್ಯಕ್ಷ ಪ್ರಶಾಂತ ಸಾವಂತ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕೆಎಸ್ಎಸ್ ಪ್ರೌಡ ಶಾಲೆಯ ಮುಖ್ಯಾದ್ಯಾಪಕ ಎಂ.ಸಿ. ಹೂಗಾರ ಮಾತನಾಡಿ, ಕರಾಟೆ ಕ್ರೀಡೆಯಲ್ಲಿ ಎಲ್ಲ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಆಡಿ, ಸೋಲು-ಗೆಲವು ಮುಖ್ಯವಲ್ಲ. ನಿರ್ಣಾಯಕರ ತೀರ್ಿಗೆ ಗೌರವ ನೀಡಿ ಎಂದು ಸಲಹೆ ನೀಡಿದರು.
ಈ ಸಮಯದಲ್ಲಿ ಕೆಎಸ್ಎಸ್ ಆಡಳಿತ ಮಂಡಳಿಯ ಅಧ್ಯಕ್ಷರಾದ ವ್ಹಿ.ಎಂ. ಕಡೋಲೆ, ಸದಸ್ಯರಾದ ಭೀಮಗೌಡಾ ಪಾಟೀಲ, ವಿಜಯ ಪಾಟೀಲ, ಮುಖ್ಯೋದ್ಯಾಪಕರಾದ ಎಂ.ಸಿ. ಹೂಗಾರ, ಕಾಗವಾಡ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಎಂ. ಸಂತೋಶ, ಗೌರವಾಧ್ಯಕ್ಷ ಸಂಭೋಜಿ, ಅಥಣಿ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಜೆ.ಎಂ. ಅತ್ತಾರ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಕಾರ್ಯದರ್ಶಿ ಬಸಗೌಡರ, ಸಂಸ್ಕಾರ ಯೋಗ ತರಬೇತಿ ಸಂಸ್ಥೆಯ ಸಂಸ್ಥಾಪಕರ ಮೋಹನ ಜಾಧವ, ಸಿದ್ದಿ ಹೂಮ್ಯಾನಿಟಿ ಫೌಂಡೇಶನ್ನ ಉಪಾಧ್ಯಕ್ಷ ಪ್ರಶಾಂತ ಸಾವಂತ, ಗುರು ಮುಡಶಿಂಗೆ, ಜಿಲ್ಲಾ ರಾಣಿ ಚೆನ್ನಮ್ಮಾ ಸೇಲ್ಫ್ ಡಿಫೆನ್ಸ್ ಮತ್ತು ಕರಾಟೆ ಸ್ಪೋರ್ಟ್ಸ ಅಸೋಶಿಯೇಶನ್ ಸಂಸ್ಥಾಪಕ ರಾಜು ಪಾಟೀಲ ಸೇರಿದಂತೆ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ಎಲ್ಲ ಶಾಲೆಗಳ ಕರಾಟೆ ಪಟುಗಳು, ನಿರ್ಣಾಯಕರು ಮತ್ತು ಪಾಲಕರು ಉಪಸ್ಥಿತರಿದ್ದರು.