ರಾಣೆಬೆನ್ನೂರ

ಡೆಂಗ್ಯೂ ಜ್ವರದಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಢಿಸುವಲ್ಲಿ ಎನ್‌ಎಸ್‌ಎಸ್ ನ ಕಾರ್ಯ ಅನನ್ಯ

ಡೆಂಗ್ಯೂ ಜ್ವರದಂತಹ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಢಿಸುವಲ್ಲಿ ಎನ್‌ಎಸ್‌ಎಸ್ ನ ಕಾರ್ಯ ಅನನ್ಯ

ರಾಣೇಬೆನ್ನೂರು, 02:  ಡೆಂಗ್ಯೂ ಜ್ವರವು ಸೊಳ್ಳೆಯಿಂದ ಹರಡುವ ಒಂದು ಸೋಂಕು, ಅಧಿಕ ಜ್ವರ , ತಲೆ ನೋವು, ಸ್ನಾಯು ಹಾಗೂ ಕೀಲುಗಳ ನೋವುಗಳ ಜೊತೆಗೆ ವಾಂತಿ ಮತ್ತು ಆಯಾಸವನ್ನು ಉಂಟುಮಾಡಿ ಮಾನಸಿಕ ದುರ್ಬಲತೆಗೆ ಕಾರಣವಾಗುವ ಈ ಡೆಂಗ್ಯೂ ಜ್ವರವನ್ನು ತಡೆಗಟ್ಟಲು ಸಾರ್ವಜನಿಕ ಸಹಕಾರ ಹಾಗೂ ಜಾಗೃತಿ ಅತೀ ಮುಖ್ಯವೆಂದು ರಾಣೇಬೆನ್ನೂರಿನ ಬಿ.ಎ.ಜೆ.ಎಸ್‌.ಎಸ್ ಬಿ.ಇಡಿ ಕಾಲೇಜಿನ ಪ್ರಾಚಾರ್ಯರಾದ ಡಾ. ಎಂ.ಎಂ.ಮೃತ್ಯುಂಜಯ ತಿಳಿಸಿದರು. ಅವರು ಇಂದು ಬಿ.ಎ.ಜೆ.ಎಸ್‌.ಎಸ್ ಕಾಲೇಜಿನ ಎನ್‌.ಎಸ್‌.ಎಸ್ ಘಟಕದ ವತಿಯಿಂದ ನೆಡೆದ ಡೆಂಗ್ಯೂ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಈ ಸಂದರ್ಭದಲ್ಲಿ ಎನ್‌.ಎಸ್‌.ಎಸ್ ಕಾರ್ಯಕ್ರಾಮಾಧಿಕಾರಿಗಳಾದ ಪರಶುರಾಮ ಪವಾರ ಮಾತನಾಡಿ ಡೆಂಗ್ಯೂ ತಡೆಗಟ್ಟುವಿಕೆಯ ಅಗತ್ಯ ಸಲಹೆಗಳನ್ನು ನೀಡುತ್ತಾ, ಹೆಚ್ಚು ನೀರು ನಿಲ್ಲದಂತೆ ನೋಡಿಕೊಳ್ಳುವುದು, ಸೊಳ್ಳೆಗಳನ್ನು ಹಿಮ್ಮೆಟ್ಟಿಸಲು ನೈಸರ್ಗಿಕ ಸೊಳ್ಳೆ ನಿವಾರಕಗಳನ್ನು ಬಳಸಲು ಹಾಗೂ ಸೂಕ್ತ ಉಡುಗೆಗಳನ್ನು ಧರಿಸಲು ಸಾರ್ವಜನಿಕರಿಗೂ ಹಾಗೂ ಸ್ವಯಂ ಸೇವಕರಿಗೆ ತಿಳಿಸಿದರು. 

ಈ ಸಂದರ್ಭದಲ್ಲಿ ಡೆಂಗ್ಯೂ ಜ್ವರದ ಅಪಾಯಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳನ್ನು ಹಾಗೂ ರೋಗ ಲಕ್ಷಣಗಳನ್ನು ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ , ಎನ್‌.ಜಿ.ಓಗಳನು, ಎನ್‌.ಎಸ್‌.ಎಸ್ ಸ್ವಯಂ ಸೇವಕರು ಮುಖ್ಯ ಎಂದರು. 

ಈ ಸಂದರ್ಭದಲ್ಲಿ ಎನ್‌.ಎಸ್‌.ಎಸ್ ಸ್ವಯಂ ಸೇವಕರು ಜಾಥಾ ಕೈಗೊಂಡು ರಾಣೇಬೆನ್ನೂರು ನಗರದ ಕೊಳಚೆ ಪ್ರದೇಶಗಳಿಗೆ ವಿಶೇಷವಾಗಿ ಭೇಟಿ ನೀಡಿ ಡೆಂಗ್ಯೂ ಜಾಗೃತಿಯನ್ನು ಘೋಷವಾಕ್ಯಗಳ ಫಲಕಗಳೊಂದಿಗೆ ಸುಮಾರು ಎರದು ತಾಸುಗಳ ಕಾಲ ಜಾಗೃತಿಯನ್ನು ಮೂಢಿಸಿದರು. 

ಈ ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಶಿವಕುಮಾರ ಬಿಸಲಳ್ಳಿ ಉಪನ್ಯಾಸಕರುಗಳಾದ ಎ. ಶಂಕರನಾಯ್ಕ, ಶ್ರೀಕಾಂತ ಗೌಡಶಿವಣ್ಣನವರ, ರಾಜೀವ್ ಕೆ ಎಂ,  ಪ್ರಿಯಾಂಕ ಮಲ್ಲಾಡದ, ಶ್ರೀಮತಿ ವಂದನಾ ಪಿ ಎನ್, ಮುತ್ತುರಾಜ ಸಿದ್ದಣ್ಣನವರ, ಚಂದನ ಕಿಚಡಿ ಹಾಗೂ ಎಲ್ಲಾ ಸ್ವಯಂ ಸೇವಕರು ಇದ್ದರು. 


ಸುದ್ದಿ ಓದಿ