ಕಾಗವಾಡ

ವಿಕೆಂಡ್ ಕರ್ಫ್ಯೂ ಕಾಗವಾಡ ತಾಲೂಕಿನಲ್ಲಿ ಸಂಪೂರ್ಣ ಯಶಸ್ವಿ

ವಿಕೆಂಡ್ ಕರ್ಫ್ಯೂ ಕಾಗವಾಡ ತಾಲೂಕಿನಲ್ಲಿ ಸಂಪೂರ್ಣ ಯಶಸ್ವಿ
ಕಾಗವಾಡ ಪಟ್ಟಣದಲ್ಲಿ ಶನಿವಾರದಂದು ವಿಕೇಂಡ್ ಕರ್ಫ್ಯೂ ಸಮಯದಲ್ಲಿ ಜನ ಹಾಗೂ ವಾಹನ ಸಂಚಾರವಿಲ್ಲದೇ ಬೀಕೋ ಎನ್ನುತ್ತಿರುವ ಬಸ

ಶೇಡಬಾಳ 24: ರಾಜ್ಯದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 9 ಗಂಟೆಯಿಂದ ಸೋಮವಾರ ಮುಂಜಾನೆ 6 ಗಂಟೆಯವರೆಗೆ ಜಾರಿಯಲ್ಲಿರುವ ವಿಕೇಂಡ್ ಕರ್ಫ್ಯೂ ಕಾಗವಾಡ ತಾಲೂಕಿನಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. 

ಶುಕ್ರವಾರ ರಾತ್ರಿ 9 ಗಂಟೆಯಿಂದಲೇ ಕಾಗವಾಡ ತಾಲೂಕಿನ ಶೇಡಬಾಳ, ಶಿರಗುಪ್ಪಿ, ಉಗಾರ ಬುದ್ರುಕ, ಉಗಾರ ಖುರ್ದ, ಮಂಗಸೂಳಿ ಸೇರಿದಂತೆ ಎಲ್ಲ ಗ್ರಾಮಗಳ ವ್ಯಾಪಾರಸ್ಥರು, ಸಾರ್ವಜನಿಕರು ಸ್ವಯಂ ಪ್ರೇರೀತರಾಗಿ ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್ ಮಾಡಿ ಮಿನಿ ಲಾಕ್‌ಡೌನ್‌ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ. 

ಸದಾ ಜನ ಜಂಗುಳಿಯಿಂದ ಕೂಡಿರುತ್ತಿದ್ದ ಕಾಗವಾಡ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಇದ್ದರೂ ಕೂಡ ಪ್ರಯಾಣಿಕರೇ ಇಲ್ಲದೇ ಬಣಗುಡುತ್ತಿರುವ ದೃಶ್ಯ ಕಂಡು ಬಂತು. ಇಲ್ಲಿನ ಚೆನ್ನಮ್ಮ ಸರ್ಕಲ್, ಮುಖ್ಯ ರಸ್ತೆ ಸೇರಿದಂತೆ ಪಟ್ಟಣದ ಪ್ರತಿ ರಸ್ತೆಗಳು ಜನ ಸಂಚಾರವಿಲ್ಲದೇ ನಿರ್ಜನವಾಗಿದ್ದವು.   

ಕಾಗವಾಡ ದಂಡಾಧಿಕಾರಿ ಪ್ರಮೀಳಾ ದೇಶಪಾಂಡೆ ಮತ್ತು ಕಾಗವಾಡ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಧರ್ಮಟ್ಟಿಯವರು ಹಾಗೂ ಸಿಬ್ಬಂದಿ ವರ್ಗದವರು ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಕೈಗೊಂಡಿದ್ದರು. 

  

ಸುದ್ದಿ ಓದಿ