ಅಥಣಿ

ಚುನಾವಣೆ ಅಭ್ಯರ್ಥಿಗಳಿಂದ ವಿಜಯೋತ್ಸವ

ಚುನಾವಣೆ ಅಭ್ಯರ್ಥಿಗಳಿಂದ ವಿಜಯೋತ್ಸವ

ಅಥಣಿ:  ಅಥಣಿ ತಾಲೂಕಾ ಪ್ರಾಥಮಿಕ ಶಿಕ್ಷಕರ ಪತ್ತು ಬೆಳಯಿಸುವ ಸಹಕಾರಿ ಸಂಘದಲ್ಲಿ ಖಾಲಿಯಾಗಿರುವ ಎರಡು ಆಡಳಿತ ಮಂಡಳಿಯ ಸದಸ್ಯರ ಕ್ಷೇತ್ರಗಳಿಗೆ ಗುರುವಾರ ಬೆಳಿಗ್ಗೆ ಸಂಘದ ಕಾರ್ಯಾಲಯದಲ್ಲಿ ಚುನಾವಣೆ ತುರಿಸಿನಿಂದ ನಡೆಯಿತು.ಒಟ್ಟು ಏಳು ಜನ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸಿದ್ದು, ಏಳು ಅಭ್ಯರ್ಥಿಗಳಲ್ಲಿ ಚನ್ನಬಸು ಈರಪ್ಪಾ ಮಗದುಮ್ಮ 353 , ಮಹಾಂತೇಶ ಶಂಕರ ಘೂಳಪ್ಪನ್ನವರ್ 338 ಮತಗಳನ್ನು ಪಡೆಯುವದರ ಮೂಲಕ ಸಾಮಾನ್ಯ ಕ್ಷೇತ್ರಕ್ಕೆ ಆಯ್ಕೆಗೊಂಡಿದ್ದಾರೆಂದು ಚುನಾವಣಾ ಅಧಿಕಾರಿಯಾದ ಎಸ್ ಎಮ್ ತೊಲಗಿ ತಿಳಿಸಿದ್ದಾರೆ.ಚುನಾವಣೆ ಜಯಬೇರಿ ನಂತರ ಮಾತನಾಡಿದ ಶಿಕ್ಷಕ ಚನ್ನಬಸು ಈರಪ್ಪಾ ಮಗದುಮ್ಮ ಅವರು ಗುರು ಸೇವಾ ಬಳಗದ ವತಿಯಿಂದ ಖಾಲಿಯಾದ ಎರಡು ಸ್ಥಾನಕ್ಕೆ ಸ್ಪರ್ಧೆ ಮಾಡಲು ಹಾಗೂ ಈ ನನ್ನ ಗೆಲುವಿಗೆ ಸಹಕಾರವನ್ನು ನೀಡಿದ ಎಲ್ಲಾ ಶಿಕ್ಷಕರಿಗೆ ಧನ್ಯವಾದಗಳನ್ನು ಅರ್ಪಿಸಿದರು.ಈ ವೇಳೆ ಸಂಗಮೇಶ ಹಚಡದ, ಅಣ್ಣಪ್ಪಾ ಸವದಿ, ಎ ವೈ ಹೈಬತ್ತಿ, ಎಸ್ ಸಿ ನಾವಿ, ಆನಂದ ಕನಕನ್ನವರ್, ಶಿವಾನಂದ ಮೆಲಗಡೆ, ಬಿ ಎ ಮೋಪಗಾರ, ಎ ಎ ದೇಶಮುಖ , ಎ ಟಿ ಗೌಡರ್, ಸುನಿಲ ಸನದಿ , ಪ್ರಶಾಂತ ಸನದಿ , ಎಸ್ ಎನ್ ಶಿರೊಳ, ಬಿ ಬಿ ಮಗದುಮ್, ಆರತಿ ಖೋತ ಸೇರಿದಂತೆ ಇತರರು ಉಪಸ್ಥಿತರಿದ್ದರು.


ಸುದ್ದಿ ಓದಿ