ಮನುಕುಲದ ನಿಜವಾದ ಆಸ್ತಿ ಪರಿಸರ
ಗುಳೇದಗುಡ್ಡ1: ಮನುಕುಲದ ಜೀವ ರಕ್ಷಕ ಅಂದರೆ ಪರಿಸರ. ಸಸಿನೆಟ್ಟು ಅದನ್ನು ಸಂರಕ್ಷಿಸಿ ಜೀವ ಜಗತ್ತನ್ನು ಉಳಿಸಿ ಬೆಳೆಸೋಣವೆಂದು ತಹಸೀಲ್ದಾರ್ ಜಿ.ಎಂ.ಕುಲಕರ್ಣಿ ಹೇಳಿದರು.
ಅವರು ಗುರುವಾರ ತಾಲೂಕು ಕಂದಾಯ ಇಲಾಖಾ ಆವರಣದಲ್ಲಿ ಕಂದಾಯ ದಿನಾಚರಣೆ ನಿಮಿತ್ಯವಾಗಿ ಬೆಳಿಗ್ಗೆ ಹಮ್ಮಿಕೊಂಡಿದ್ದ ಹಸಿರೋತ್ಸವ ಸಸಿನೆಡುವ ಕಾರ್ಯಕ್ರಮದಲ್ಲಿ ಸಸಿನೆಟ್ಟು ಮಾತನಾಡಿದರು.
ಆವರಣದ ವಿವಿಧ ಕಡೆಗಳಲ್ಲಿ ಪುರಸಭೆ ಅಧ್ಯಕ್ಷೆ ಶಿಲ್ಪಾ ಹಳ್ಳಿ, ತಹಸೀಲ್ದಾರ್ ಜಿ.ಎಂ.ಕುಲಕರ್ಣಿ, ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಜಿಡಗಿ, ಪಿಎಸೈ ಪುಂಡಲೀಕ ಪಟಾತರ, ಮಾಧ್ಯಮ ಮಿತ್ರರು ಸಸಿಗಳನ್ನು ನೆಟ್ಟರು. ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಕೆ.ಟಿ.ಗಾಜಿ, ಶಿರಸ್ತೇದಾರ ಸುಭಾಸ ವಡವಡಗಿ, ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ, ಗ್ರಾಮಲೆಕ್ಕಾಧಿಕಾರಿಗಳು ಹಾಜರಿದ್ದರು.