ರಾಣೆಬೆನ್ನೂರ

ಕರ್ಕಶವಾದ ಸೌಂಡ್ ಮಾಡುವ ಬೈಕ್‌ಗಳ ಸೈಲೆನ್ಸರ್ ಕಿತ್ತು ಕೇಸ್ ಜಡಿಯುತ್ತಿರುವ ಸಂಚಾರಿ ಪೊಲೀಸರು

ಕರ್ಕಶವಾದ ಸೌಂಡ್ ಮಾಡುವ ಬೈಕ್‌ಗಳ ಸೈಲೆನ್ಸರ್ ಕಿತ್ತು ಕೇಸ್ ಜಡಿಯುತ್ತಿರುವ ಸಂಚಾರಿ ಪೊಲೀಸರು

ರಾಣೇಬೆನ್ನೂರು 15: ದಿನದಿಂದ ದಿನಕ್ಕೆ ಬೆಳೆಯುತ್ತಿರುವ ವಾಣಿಜ್ಯ ನಗರಿ ರಾಣೇಬೆನ್ನೂರು ನಗರದಲ್ಲಿ ಕೆಲವು ಕಿಡಿಗೇಡಿಗಳು ತಮ್ಮ ಬೈಕಿನ ಸೈಲೆನ್ಸ್‌ರ್ ಪೈಪ್ ಕಿತ್ತು ಕರ್ಕಶವಾದ ಭಾರಿ ಸೌಂಡ್ ಮಾಡುತ್ತ ಆಸ್ಪತ್ರೆ, ದೇವಸ್ಥಾನ ಮಸೀದಿ, ಮಂದಿರ, ಶಾಲಾ, ಕಾಲೇಜುಗಳ ಹತ್ತಿರ ಹೋಗಿ ಬಹಳಷ್ಟು ಕಿರಿಕಿರಿ ಮಾಡುತ್ತಾ ಸಾರ್ವಜನಿಕರ ನೆಮ್ಮದಿ ಕೆಡುಸುತ್ತಿದ್ದ ಕೆಲವು ಅನಾಗರಿಕರ ವರ್ತನೆ ಖಂಡಿಸಿ ಇತ್ತೀಚೆಗೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ. ಗೋಪಾರವರಿಗೆ ನಾಗರಿಕರ ಪರವಾಗಿ ಮನವಿ ಅರ​‍್ಿಸಿ ಬೈಕ್ ಸೈಲೆನ್ಸರ್ ತೆಗೆದು ವಿಪರೀತ ಸೌಂಡ್ ಮಾಡುತ್ತ ಜನರ ನೆಮ್ಮದಿಗೆ ಭಂಗ ತರುವ ಕಿಡಿಗೇಡಿಗಳಿಗೆ ಕಾನೂನಿನ ಬಿಸಿ ಮುಟ್ಟಿಸಬೇಕೆಂದು ಮನವಿ ಅರ​‍್ಿಸಿದ್ದರು. ಹೆಚ್ಚುವರಿ ಎಸ್‌.ಪಿ., ಸಿ. ಗೋವೀಲ್‌ರವರು ಅಂಥಾ ಬೈಕ್‌ಗಳನ್ನು ಚೇಸ್ ಮಾಡಿ ಕಾನೂನಿನ ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸಂಚಾರಿ ಪೊಲೀಸರಿಗೆ ಸೂಚಿಸಿದ್ದರು. ಅಂದಿನಿಂದ ಕಾರ್ಯಚರಣೆಗೆ ಇಳಿದ ಸಂಚಾರಿ ಠಾಣಾ ಪಿ.ಎಸ್‌.ಐ. ಪ್ರವೀತಾ ರವರು ಅಂಥಾ ಕಿಡಿಗೇಡಿಗಳ ತಮ್ಮ ತಂಡದೊಂದಿಗೆ ಅಂಥಾ ಕಿಡಿಗೇಡಿಗಳ ಚೇಸ್ ಮಾಡಿಸಿ ಸೈಲೆನ್ಸರ್ ಪೈಪ್ ಕಿತ್ತು ಠಾಣೆಯಲ್ಲಿಟ್ಟು ಪ್ರಕರಣ ದಾಖಲಿಸುತ್ತಿದ್ದಾರೆ. ನಿನ್ನೆ ಅಂದರೆ ದಿನಾಂಕ: 13-07-2024 ರಂದು ದೂರುದಾರರಾದ ರೈತ ಮುಖಂಡರಾದ ರವೀಂದ್ರಗೌಡ ಎಫ್‌. ಪಾಟೀಲ ಮತ್ತು ಅವರ ಸಂಗಡಿಗರನ್ನು ಠಾಣೆಗೆ ಕರೆಯಿಸಿ ಮಾಹಿತಿ ನೀಡಿದರು.  

ಈ ಸಂದರ್ಭದಲ್ಲಿ ಮಾತನಾಡಿದ ತಮ್ಮ ಕಾರ್ಯಾಚರಣೆ ಹೀಗೆಯೇ ಮುಂದುವರಿಸಿರಿ ಒಂದು ವಾರ ಟೈಟ್ ಮಾಡುತ್ತಾರೆ, ಮತ್ತೆ ಲೂಸ್ ಬಿಡುತ್ತಾರೆ ಎನ್ನುವ ಭ್ರಮೆಯಲ್ಲಿ ಉಡಾಳರು ಇರುತ್ತಾರೆ, ಕಾರಣ ತಮ್ಮ ಕಾರ್ಯಾಚರಣೆ ನಿರಂತರವಾಗಿರಲೆಂದು ಮನವಿ ಮಾಡಿದರು.  

ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಣ್ಣ ಬೇಡರ, ಕೃಷ್ಣಮೂರ್ತಿ ಲಮಾಣಿ, ಹಾಲೇಶ್ ಕೆಂಚನಾಯ್ಕರ್, ಯಾದವ ಹದಡಿ, ಸಂಚಾರಿ ಠಾಣೆಯ ಸಿಬ್ಬಂದಿಗಳಾದ ಎ.ಎಸ್‌.ಐ., ಎಸ್‌.ಎ. ದೊಡಮನಿ, ಲಿಂಗರಾಜ ಕರಿಗಾರ, ವೆಂಕಟೇಶ ಹೂಲಿಹಳ್ಳಿ, ಅರುಣ್ ಹಾದಿಮನಿ, ಶ್ರೀಮತಿ ಪುಷ್ಪಾ ಪುಟ್ಟಪ್ಪಗೌಡ್ರ ಉಪಸ್ಥಿತರಿದ್ದರು. 


ಸುದ್ದಿ ಓದಿ