ಶಿಗ್ಗಾವ್

ಕ್ಷೇತ್ರದ ಅಭಿವೃದ್ಧಿ ಕನಸು ನನಸಾಗುವ ಕಾಲ ಬಂದಿದೆ: ಸಿಎಂ ಬೊಮ್ಮಾಯಿ

ಕ್ಷೇತ್ರದ ಅಭಿವೃದ್ಧಿ ಕನಸು ನನಸಾಗುವ ಕಾಲ ಬಂದಿದೆ: ಸಿಎಂ ಬೊಮ್ಮಾಯಿ

ಲೋಕದರ್ಶನ ವರದಿ

ಶಿಗ್ಗಾವಿ 25: ಕ್ಷೇತ್ರದ ಅಭಿವೃದ್ಧಿಗೆ ಕಂಡ ಕನಸುಗಳನ್ನು ಪೂರ್ತಿ  ಮಾಡುವ ದಿನಗಳು ಬಂದಿವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು. 

ಪಟ್ಟಣದ ಸಂತೆ ಮೈದಾನದಲ್ಲಿ ನಡೆದ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತಿಭಾ ಪುರಸ್ಕಾರ ಹಾಗೂ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು

ಕೆಲಸವೇ ಮಾತನಾಡಲಿದೆ : ಈ ಕ್ಷೇತ್ರಕ್ಕೆ ಮೂಲಭೂತ ಸೌಕರ್ಯ, ಕುಡಿಯುವ ನೀರು, ವಿದ್ಯುತ್, ಮನೆಗಳು ಜೊತೆಗೆ ಕೈಗಾರಿಕೆ, ದುಡಿಯುವ . ಕೈಗಳಿಗೆ ಉದ್ಯೋಗ ನೀಡುವ ದಿನಗಳು ಬಂದಿವೆ. ಬರುವ ದಿನಗಳಲ್ಲಿ ತಾವು ಇದರ ಲಾಭ ಪಡೆಯುವಿರಿ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಿಮ್ಮ ಮತದಲ್ಲಿ ಎಷ್ಟೊಂದು ಶಕ್ತಿ ಇದೆಯೆಂದರೆ, ಆ ಮೂಲಕ ಶಾಸಕ, ಸಚಿವ ಹಾಗೂ ಮುಖ್ಯಮಂತ್ರಿ ಹುದ್ದೆ ದೊರೆತಿದೆ. ಈ ಶಕ್ತಿಯ ಲಾಭ ತಾಲೂಕಿಗೆ ಆಗಬೇಕಾಗಿದೆ. ಈ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದ್ದು, ದೊಡ್ಡ ಪ್ರಮಾಣದ ಬದಲಾವಣೆ ತಾಲ್ಲೂಕಿನಲ್ಲಿ ಆಗಲಿದೆ. ನಾನು ಮಾತನಾಡುವುದಿಲ್ಲ. ನನ್ನ ಕೆಲಸಗಳು ಮಾತನಾಡುತ್ತವೆ  ಮುಂದಿನ ದಿನಗಳಲ್ಲಿ ಇನ್ನಷ್ಟು ಕೆಲಸ ಕಾರ್ಯಗಳು ನಡೆಯಲಿದ್ದು ರಾಗ ದ್ವೇಷ, ಬಡವ ಬಲ್ಲಿದ ಎನ್ನದೆ ತಾವು ಕಾರ್ಯ ನಿರ್ವಹಿಸುತ್ತಿರುವುದಾಗಿ ತಿಳಿಸಿದರು. 

ಮಹಿಳೆಯರಿಗೆ ಆರ್ಥಿಕ  ಸ್ವಾವಲಂಬನೆ : ಎಸ್ ಸಿ ಎಸ್ ಟಿ ಮಹಿಳೆಯರು ಮತ್ತು ಯುವಕರಿಗಾಗಿ ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇವರಿಗೆ ಶಿಕ್ಷಣ, ಉದ್ಯೋಗ, ಕೃಷಿ, ನೀರಾವರಿ ಇವುಗಳು ಪ್ರಮುಖವಾಗಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ.  ನಿಮ್ಮ ಪ್ರೀತಿ ವಿಶ್ವಾಸ ಸದಾ ಕಾಲ ಇರಬೇಕು. ಹೆಣ್ಣುಮಕ್ಕಳಿಗೆ ವಿಶೇಷ ಸ್ಕಿಂಳನ್ನು ಡಿಸೆಂಬರ್ ಮಾಹೆಯಲ್ಲಿ ಪ್ರಾರಂಭಿಸಲಾಗುವುದು. ಮಹಿಳೆಯರಿಗೆ ಉದ್ಯೋಗ ನೀಡಿ, ಆರ್ಥಿಕ  ಸ್ವಾವಲಂಬನೆಗೆ ದಾರಿ ಮಾಡಲಾಗುವುದು, ರೈತ ಮಕ್ಕಳಿಗೆ ವಿದ್ಯಾನಿಧಿ ನೀಡಲಾಗುತ್ತಿದೆ ಎಂದರು.

ರಾಜ್ಯದ ಪ್ರಗತಿಗಾಗಿ ಇನ್ನೂ ಹೆಚ್ಚು ದುಡಿಯಲು ಪ್ರೇರಣೆ ದೊರೆತಿದೆ

ಬ್ರಿಟೀಷ್ ಸೈನ್ಯವನ್ನು ಸೋಲಿಸಿ ಥ್ಯಾಕರೆಯನ್ನು ಕೊಂದಂತಹ ದಿನ. ಇಂದು ಕಿತ್ತೂರು ರಾಣಿ ಚೆನ್ನಮ್ಮನಿಗೆ ಗೌರವ ಸಲ್ಲಿಸುವ ದಿನ. ಚೆನ್ನಮ್ಮನ ಶೌರ್ಯವನ್ನು ರಾಜ್ಯದ ಪ್ರಗತಿಯಲ್ಲಿ ತೋರಬೇಕಿದೆ. ಬ್ರಿಟೀಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆಯಾಗಿದ್ದಾರೆ. ಇಂತಹ ಪವಿತ್ರ ನಾಡಿನಲ್ಲಿ ನಾವಿದ್ದೇವೆ.  ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳನ್ನು ಮುಖ್ಯಮಂತ್ರಿಗಳು ಅಭಿನಂದಿಸಿದರು. ಈ ಕಾರ್ಯಕ್ರಮದಿಂದ ಅದಮ್ಯವಾದ ಶಕ್ತಿ ನನಗೆ ದೊರೆತಿದೆ. ಮೊದಲು 14  15 ಗಂಟೆಗಳು ಕೆಲಸ ಮಾಡುತ್ತಿದ್ದು, ರಾಜ್ಯದ ಪ್ರಗತಿಗಾಗಿ  ಇನ್ನೂ ಹೆಚ್ಚು ದುಡಿಯಲು ಹೆಚ್ಚಿನ ಪ್ರೇರಣೆ ದೊರೆತಿದೆ ಎಂದರು. 

 * ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ತಾಲೂಕಿನ 45 ಪ್ರೌಡಶಾಲೆಯಲ್ಲಿ ಎಸ್.ಎಸ್.ಎಲ್.ಸಿ 151, ಪಿ.ಯು.ಸಿಯಲ್ಲಿ 36 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

-ಎಂ.ಬಿ.ಅಂಬಿಗೇರ

ಕ್ಷೇತ್ರ ಶಿಕ್ಷಣಾಧಿಕಾರಿ  


 ಕರ್ನಾಟಕ ದ ರಾಕ ಸ್ಟಾರ ಗುರುಕಿರಣ, ಪುರಸಭೆ ಅಧ್ಯಕ್ಷೆ ರೂಪಾ ಬನ್ನಿಕೊಪ್ಪ, ವಿರೇಶ ಆಜೂರ, ಶಿವಾನಂದ ಮ್ಯಾಗೇರಿ, ನರಹರಿ ಕಟ್ಟಿ, ಪುರಸಭೆ ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಸೇರಿದಂತೆ ಶ್ರೀಮತಿ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ನ ಸದಸ್ಯರು ಉಪಸ್ಥಿತರಿದ್ದರು. ಸಮಾಜಸೇವಕ ನವೀನ ಸವಣೂರ ಕಾರ್ಯಕ್ರಮ ನಿರ್ವಹಿಸಿದರು 

ಸುದ್ದಿ ಓದಿ