ರಾಣೆಬೆನ್ನೂರ

ಶುದ್ಧ ನೀರು ಕುಡಿಯುವ ಸರಬರಾಜು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ

ಶುದ್ಧ ನೀರು ಕುಡಿಯುವ ಸರಬರಾಜು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ

ರಾಣಿಬೆನ್ನೂರ 17: ತಾಲೂಕಿನ 108 ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿಯಲ್ಲಿ ತಾಲೂಕಿನ ಮಾಕನೂರ ಗ್ರಾಮದ ಕರಲಗೇರಿ ಬಳಿ ತುಂಗಭದ್ರ ನದಿಯಿಂದ ಶುದ್ಧ ಕುಡಿಯುವ ನೀರನ್ನು ಪೂರೈಸಿದ ಕೀರ್ತಿ ಮಾಜಿ ಅಧ್ಯಕ್ಷ ಹಾಗೂ ಗ್ರಾಮೀಣ ನೀರು ಸರಬರಾಜು ಮಾಜಿ ಸಚಿವ ಕೆ.ಬಿ. ಕೋಳಿವಾಡ ಅವರಿಗೆ ಸಲ್ಲತ್ತದೆ. ಆ ಯೋಜನೆಯಿಂದ ವಂಚಿತವಾಗಿದ್ದ 37 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ಸಾಬೀತಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.  

ಮಂಗಳವಾರ ತಾಲೂಕಿನ ಮಾಕನೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತಿ, ತಾಪಂ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಬಹುಗ್ರಾಮ ಯೋಜನೆಯಡಿಯಲ್ಲಿ 56 ಕೋಟಿ ರೂ. ಅನುದಾನದಲ್ಲಿ ಶುದ್ಧ ಕುಡಿಯುವ ನೀರು ಸರಬರಾಜು ಪುನಶ್ಚೇತನ ಕಾಮಗಾರಿ ಭೂಮಿ ಪೂಜೆ ಮತ್ತು ಸ್ವಚ್ಛ ಭಾರತ ಅಭಿಯಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

 ಮನುಷ್ಯನು ಆರೋಗ್ಯವಾಗಿ ಜೀವಿಸಲು ಗಾಳಿ, ನೀರು, ಪರಿಸರ  ಶುದ್ಧವಾಗಿರಬೇಕು ಎಂಬ ಕನಸು ಮಹಾತ್ಮ ಗಾಂಧೀಜಿಯವರದಾಗಿತ್ತು ಅವರ ಕನಸನ್ನು  ನನಸು ಮಾಡಲು ಕಾಂಗ್ರೇಸ್ ಸರ್ಕಾರ ಮುಂದಾಗಿದೆ. ಸರ್ಕಾರದ ಜೊತೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಕೈಜೋಡಿಸಬೇಕು. ವಾರದಲ್ಲಿ ಒಂದು ದಿನವಾವಾದರೂ ಗ್ರಾಮದ ಸ್ವಚ್ಛತೆ ಮೀಸಲಿಟ್ಟು ಶ್ರಮಿಸಬೇಕಿದೆ. ಅಂದಾಗ ಮಾತ್ರ ಮಹಾತ್ಮ ಗಾಂಧೀಜಿ ಅವರ ಕನಸು ನನಸಾಗಲು ಸಾಧ್ಯ ಎಂದರು.  

 ಗುತ್ತಗೆದಾರು 11 ತಿಂಗಳೊಗೆ ಕಾಮಗಾರಿ ಪೂರ್ಣಗೊಳಿಸಲಿದ್ದ ಹುಣಶಿಕಟ್ಟಿ, ರಾಹುತನಕಟ್ಟಿ, ಬಸಲಿಕಟ್ಟಿ, ಗಂಗಾಜಲ, ಸಿದ್ದಾಪುರ ಹಾಗೂ ಹುಣಸಿಕಟ್ಟಿ ತಾಂಡಾ,  ಮಾಕನೂರ, ನಾಗೇನಹಳ್ಳಿ ಸೇರಿದಂತೆ 37 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲಾಗುವುದು. ಇನ್ನು ಮುಂದೆ ತಾಲೂಕಿನ 108 ಗ್ರಾಮದ ಜನರಿಗೆ  ಶುದ್ಧ ನೀರು ದೊರೆಯಲಿದೆ ಎಂದರು.  

ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ದೇವೇಂದ್ರ​‍್ಪ ಯಲಜಿ, ತಾಪಂ ಮಾಜಿ ಅಧ್ಯಕ್ಷ ನೀಲಕಂಠಪ್ಪ ಕುಸಗೂರ, ಗ್ರಾಪಂ ಸದಸ್ಯ ಕೆಂಚನಗೌಡ ಮುದಿಗೌಡ್ರ, ರೈತ ಮುಖಂಡ ಈರಣ್ಣ ಹಲಗೇರಿ ಮಾತನಾಡಿದರು.  

 ಗ್ರಾಪಂ ಉಪಾಧ್ಯಕ್ಷೆ ದುರುಗವ್ವ ಬಡಣ್ಣನವರ, ಸದಸ್ಯರಾದ ಹನುಮಂತಗೌಡ ದೊಡ್ಡಗೌಡ್ರ, ಡಾಽ ಮಹಾಂತೇಶ ಹುಚ್ಚಣ್ಣನವರ, ಶಿವನಗೌಡ ನಂದಿಗಾವಿ, ಶೋಭಾ ಬಾರ್ಕಿ, ಬಸಮ್ಮ ಪೂಜಾರ, ನಾಗಮ್ಮ ಸಾರ್ಥಿ, ಸುಮಿತ್ರಾ ಚಿನ್ನಣ್ಣನವರ, ಮಲ್ಲೇಶಿ ಹಲಗೇರಿ, ಸೋಮಕ್ಕ ಹಲಗೇರಿ, ಪಿಡಿಓ ನಾಗರಾಜ ಕೆ.ಬಿ, ಮುಖಂಡರಾದ ಸಿದ್ಧಾರೂಢ ಕುಂಬಳೂರು, ಗಂಗಾಧರ  ಬಣಕಾರ, ಹನುಮಂತಪ್ಪ ಆರೇರ, ಗದಿಗಪ್ಪ ಸಾರ್ಥಿ, ಬಸನಗೌಡ ಭರಮಗೌಡ್ರ, ಬೀರ​‍್ಪ ಹುಚ್ಚಣ್ಣನವರ, ವಿರುಪಾಕ್ಷಿ ಕಾನಹಳ್ಳಿ, ನೀರು ಸರಬರಾಜು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ಜಯರಾಮ, ಸಹಾಯಕ ಅಭಿಯಂತರ ರಾಮಕೃಷ್ಣ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ