ಕಾಗವಾಡ

ಕೊರೊನಾ ಮಹಾಮಾರಿ ಎದುರಿಸಲು ರಾಜ್ಯ ಸರಕಾರ ಸಿದ್ಧ

ಕೊರೊನಾ ಮಹಾಮಾರಿ ಎದುರಿಸಲು ರಾಜ್ಯ ಸರಕಾರ  ಸಿದ್ಧ
ಶಿರಗುಪ್ಪಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾಂಜಲಿ ಚೌಗುಲೆ ಮತ್ತಿತರರು ಹ್ಯಾಂಡ್ ಸ್ಯಾನಿಟೈಸರ್ ವಿತರಿಸುವಾಗ.

ಕಾಗವಾಡ 14:ಕೊರೊನಾ ಮಹಾಮಾರಿ ಧಿಟ್ಟಾಗಿ ಎದುರಿಸಲು ರಾಜ್ಯ ಸರಕಾರ ಎಲ್ಲ ರೀತಿ ಸಿದ್ಧತೆ ಮಾಡಿಕೊಂಡಿದೆ. ನಮ್ಮ ಕ್ಷೇತ್ರ ಶಾಸಕರು ಹಾಗೂ ಸಚಿವರಾದ ಶ್ರೀಮಂತ ಪಾಟೀಲ ಇವರು ಕೋವಿಡ್ ಸೆಂಟರ್ಗಳು ಪ್ರಾರಂಭಿಸುವದೊಂದಿಗೆ ಗ್ರಾಮಗಳಲ್ಲಿ ಕೊರೊನಾ ಹರಡದಂತೆ ನೋಡಿಕೊಳ್ಳಲು ಎಲ್ಲ ವ್ಯವಸ್ಥೆ ಮಾಡಿದ್ದಾರೆ. ಈಗ ಗ್ರಾಮದ ಪ್ರಮುಖ ಕಚೇರಿಗಳಲ್ಲಿ ಸ್ಯಾನಿಟೈಸರ್ ಸಿಂಪಡಿಸಲು ಪಂಚಾಯತಿಗೆ ಸ್ಯಾನಿಟೈಸರ್ ವಿತರಣೆ ಮಾಡಿದ್ದಾರೆಯೆಂದು ಶಿರಗುಪ್ಪಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗೀತಾಂಜಲಿ ಚೌಗುಲೆ ಹೇಳಿದರು.

ಶುಕ್ರವಾರ ರಂದು ಕಾಗವಾಡ ತಾಲ್ಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯತಿಗಾಗಿ ಸಚಿವ ಶ್ರೀಮಂತ ಪಾಟೀಲ ಇವರಿಂದ ಸ್ಯಾನಿಟೈಸರ್ ವಿತರಿಸಲಾಯಿತು. ಇದನ್ನು ಸ್ವೀಕರಿಸಿ ಗೀತಾಂಜಲಿ ಚೌಗುಲೆ ಸಚಿವರ ಸೇವೆ ಶ್ಲಾಘೀಸಿ ಮಾತನಾಡಿದರು.

ಶಿರಗುಪ್ಪಿ ಗ್ರಾಮದಲ್ಲಿ ಕೋವಿಡ್ ತಡೆಗಟ್ಟಲು ಸ್ವಯಂ ಘೋಷಿತವಾಗಿ ಗ್ರಾಮದ ಎಲ್ಲ ದಿನನಿತ್ಯದ ವ್ಯವಹಾರಗಳು ಸ್ಥಗೀತಗೊಳಿಸಿ ಜನರು ಸಹಕಾರ ನೀಡಿದ್ದಾರೆ. ಗ್ರಾಮದ ಹಿರಿಯರು ಒಂದುಗೂಡಿ ಜನರಲ್ಲಿ ಅರಿವು ಮೂಡಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಯೊಬ್ಬರಿಗೆ ಕಡ್ಡಾಯವಾಗಿ ಮಾಸ್ಕ್ ಧರಿಸಲು ಜಾಗೃತಿ ಮೂಡಿಸುತ್ತಿದ್ದಾರೆ. ಈ ಗ್ರಾಮದ ಪ್ರತಿಯೊಂದು ಓಣಿಗಳಲ್ಲಿ ಧ್ವನಿಕ್ಷೇಪಣೆ ಮುಖಾಂತರ ದಿನನಿತ್ಯದ ಎಲ್ಲ ಸೂಚನೆಗಳು ನೀಡಲಾಗುತ್ತಿದೆ. ಇದ್ದರಿಂದ ಕೋವಿಡ್ ಹರಡದಂತೆ ನಿಯಂತ್ರಣ ಪಡೆದಿದ್ದೇವೆ. ಜನರು ಇದೇ ರೀತಿ ಸಹಕಾರ ನೀಡಬೇಕೆಂದರು.

ಈ ವೇಳೆ ನ್ಯಾಯವಾದಿಗಳಾದ ಅಭಯಕುಮಾರ ಅಕಿವಾಟೆ, ರಾಮಗೌಡ ಪಾಟೀಲ, ಭಮ್ಮಣ್ಣ ಚೌಗುಲೆ, ಮಹಾವೀರ ಕಾತ್ರಾಳೆ, ಅಭಿಷೇಕ ಚೌಗುಲೆ, ರಮೇಶ ಕಾಂಬಳೆ, ಸಚೀನ ಕಾಂಬಳೆ ಉಪಸ್ಥಿತರಿದ್ದರು.

ಸುದ್ದಿ ಓದಿ