ಬ್ಯಾಡ್ಗಿ

ಬಸವಣ್ಣನವರ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಜಯಂತಿ ಆಚರಣೆಗೆೆ ಮಹತ್ವ: ಛತ್ರದ

ಬಸವಣ್ಣನವರ ಸಿದ್ದಾಂತಗಳನ್ನು ಅಳವಡಿಸಿಕೊಂಡಾಗ ಜಯಂತಿ ಆಚರಣೆಗೆೆ ಮಹತ್ವ: ಛತ್ರದ

ಬ್ಯಾಡಗಿ 04: ಕಾಯಕಯೋಗಿ ವಿಶ್ವಗುರು ಬಸವಣ್ಣನವರ ತತ್ವದಾರ್ಶ ಸಿದ್ದಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡಾಗ ಮಾತ್ರ ಬಸವ ಜಯಂತಿಗೆ ಮಹತ್ವ ಬರಲು ಸಾಧ್ಯವೆಂದು ಉಪನ್ಯಾಸಕ ಜೀವರಾಜ್ ಛತ್ರದ ಹೇಳಿದರು.  

      ಮಂಗಳವಾರ ಅವರು ತಹಶೀಲದಾರರ ಕಾರ್ಯಾಲಯದಲ್ಲಿ ಜರುಗಿದ ಬಸವೇಶ್ವರ ಜಯಂತಿಯ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ಬಸವಣ್ಣನವರು 12ನೇ ಶತಮಾನದ ತತ್ವಜ್ಞಾನಿ. ಕಲಚೂರಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು.ಶಿವ ಕೇಂದ್ರಿಕೃತ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು. ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು. ಇಂತಹ ಮಹಾತ್ಮರ ಜೀವನವೇ ನಮ್ಮೆಲ್ಲರಿಗೂ ಆದರ್ಶವೆಂದರು.  

          ಜಿಲ್ಲಾ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷ ಎಸ್‌.ಎನ್‌.ಯಮನಕ್ಕನವರ ಮಾತನಾಡಿ 12ನೇ ಶತಮಾನದಲ್ಲಿ ಬ್ರಾಹ್ಮಣ ಸಮಾಜದಲ್ಲಿ ಜನಿಸಿದ ಬಸವಣ್ಣ ಪುರೋಹಿತಶಾಹಿಯ ವಿರುದ್ಧ ಬಂಡೆದ್ದರು. ಜಾತಿ ಮತ ಸಂಪ್ರದಾಯಗಳಿಗೆ ತಿಲಾಂಜಲಿ ನೀಡಿ ಕೂಡಲ ಸಂಗಮದಲ್ಲಿ ಅಧ್ಯಯನ ಮಾಡಿ ಕಲ್ಯಾಣವನ್ನು ಕ್ರಾಂತಿಯ ಕ್ಷೇತ್ರವನ್ನಾಗಿ ರೂಪಿಸಿ ಆ ಮೂಲಕ ಕಾರ್ಯ ಸಾಧನೆ ಮಾಡಿ ಕೂಡಲ ಸಂಗಮದಲ್ಲಿ ಲೀನವಾಗಿರುವುದು ಜೀವನದ ವಿಸ್ಮಯ ಸತ್ಯ ವೆಂದರು.  

     ಮಾಜಿ ಪುರಸಭಾ ಅಧ್ಯಕ್ಷ ಮುರಿಗೆಪ್ಪ ಶೆಟ್ಟರ್ ಮಾತನಾಡಿ ಭಕ್ತಿಯ ಮೂಲಕ ಬಸವಣ್ಣನವರು ಮನು ಕುಲದ ಉದ್ಧಾರ ಮಾಡಿದರು. ಪ್ರೀತಿ ಪ್ರೇಮದಿಂದ ಬದುಕುವ ಕಲೆಯನ್ನು ಮನುಜರು ಕಲಿಯುವುದು. ಸಾಮರಸ್ಯತೆಯೇ ಜೀವನ ಮಂತ್ರವಾಗಬೇಕು. ಸಾಮರಸ್ಯದಿಂದ ಗ್ರಾಮಗಳ ಉದ್ದಾರ ಸಾಧ್ಯವೆಂಬುದನ್ನು ತಮ್ಮ ವಚನಗಳ ಮೂಲಕ ತೋರಿದ್ದಾರೆಂದರು.  

      ಪ್ರಾಸ್ತಾವಿಕವಾಗಿ ತಹಶೀಲದಾರ ರವಿಕುಮಾರ ಕೊರವರ ಮಾತನಾಡಿದರು. ಪುರಸಭಾ  ಅಧ್ಯಕ್ಷೆ ಸರೋಜಮ್ಮ ಉಳ್ಳಾಗಡ್ಡಿ. ಕಾರ್ಯಕ್ರಮ ಉದ್ಘಾಟಿಸಿದರು. ಉಪಾಧ್ಯಕ್ಷೆ   ಗೀತಾ ರಾಯಕರ. ಮಾಜಿ ಜಿ.ಪಂ ಅಧ್ಯಕ್ಷ ಶಂಕ್ರಣ್ಣ ಮಾತನವರ. ಬಿಜೆಪಿ ತಾಲೂಕಾ ಅಧ್ಯಕ್ಷ ಜಾದವ. ಜಿತೇಂದ್ರ ಸುಣಗಾರ. ಡಿ.ಬಿ.ಬುಡ್ಡನಗೌಡ. ಮಲ್ಲೇಶಣ್ಣ ಚಿಕ್ಕಣ್ಣನವರ. ಪುರಸಭಾ  ಸದಸ್ಯರುಗಳಾದ ಬಸಣ್ಣ ಛತ್ರದ.ಕವಿತಾ ಸೊಪ್ಪಿನಮಠ. ಕಲಾವತಿ ಬಡಿಗೇರ. ಅಕ್ಕಮ್ಮ ಛಲವಾದಿ. ಸುಭಾಷ್ ಮಾಳಗಿ. ಶಶಿಧರ ಗೊಲ್ಲರಳ್ಳಿಮಠ ಸೇರಿದಂತೆ ಇನ್ನೀತರರಿದ್ದರು. 


ಸುದ್ದಿ ಓದಿ