ಸಲ್ಮಾನ್ ಖಾನ್ ರ ರಾಧೆ ಚಿತ್ರದ ಚಿತ್ರಿಕರಣ ಆರಂಭ
ನವದೆಹಲಿ, ಸೆಪ್ಟೆಂಬರ್.30: ಬಾಲಿವುಡ್ನ ಸ್ಟಾರ್ ನಟ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ‘ರಾಧೆ: ಯೋರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದ ಚಿತ್ರೀಕರಣ’ ಅಕ್ಟೋಬರ್ 2 ರಿಂದ ಪ್ರಾರಂಭಿಸಲಿದ್ದಾರೆ.
ಲಾಕ್ಡೌನ್ ಬಳಿಕ ಸಲ್ಮಾನ್ ಖಾನ್ ತಮ್ಮ ಮುಂಬರುವ ಚಿತ್ರ ರಾಧೆ: ಯೋರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದ ಶೂಟಿಂಗ್ ಪ್ರಾರಂಭಿಸಲಿದ್ದಾರೆ. ಸಲ್ಮಾನ್ ಈ ಚಿತ್ರದ ಚಿತ್ರೀಕರಣವನ್ನು ಅಕ್ಟೋಬರ್ 2 ರಂದು ಕಾರ್ಜತ್ನ ಎನ್ಡಿ ಸ್ಟುಡಿಯೋದಲ್ಲಿ ನಡೆಸಲಿದ್ದಾರೆ. ಹದಿನೈದು ದಿನಗಳ ಶೂಟಿಂಗ್ ನಂತರ, ಅಂತಿಮ ಕೆಲಸವನ್ನು ಮಾಡಲಿದ್ದಾರೆ.
ಮುಂಬೈ ಹೊರಗಿನ ಚಿತ್ರೀಕರಣದ ಸಮಯದಲ್ಲಿ ದೈನಂದಿನ ಪ್ರಯಾಣವನ್ನು ತಪ್ಪಿಸಲು, ನಿರ್ಮಾಣ ತಂಡವು ಎನ್ಡಿ ಸ್ಟುಡಿಯೋ ಬಳಿ ಹೋಟೆಲ್ ವ್ಯವಸ್ಥೆ ಮಾಡಿದ್ದು, ಅಲ್ಲಿ ಎಲ್ಲಾ ತಂತ್ರಜ್ಞರು ತಂಗಲಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ಹೊರಗಿನವರನ್ನು ಭೇಟಿ ಮಾಡಲು ಅವರಿಗೆ ಅವಕಾಶವಿರುವುದಿಲ್ಲ. ಇಡೀ ಸಿಬ್ಬಂದಿಯ ಕೊರೊನಾ ಪರೀಕ್ಷೆಯನ್ನು ಮಾಡಲಾಗಿದೆ, ಇದರಲ್ಲಿ ವರದಿಗಳು ಋಣಾತ್ಮಕವಾಗಿ ಬಂದಿದೆ. ಶೀಘ್ರದಲ್ಲೇ ಎರಡನೇ ಪರೀಕ್ಷೆ ನಡೆಸಲಾಗುವುದು, ಇದರಲ್ಲಿ ನಟರು ಮತ್ತು ಪ್ರಮುಖ ತಂಡವನ್ನು ಒಳಗೊಂಡಿರುತ್ತದೆ.
ಸೆಟ್ನಲ್ಲಿ ವೈದ್ಯರು, ಆಂಬುಲೆನ್ಸ್ಗಳ ಜೊತೆಗೆ ಸುರಕ್ಷತೆ ಮತ್ತು ಆರೋಗ್ಯ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಪ್ರತಿದಿನ ಸ್ವಚ್ಛತಾ ಕಾರ್ಯ ಮಾಡಲಾಗುವುದು. ತಂಡವನ್ನು ವಿವಿಧ ಭಾಗಗಳಾಗಿ ವಿಂಗಡಿಸಲು ಮತ್ತು ಅವುಗಳನ್ನು ಗುರುತಿಸಲು ಅವರಿಗೆ ಬಣ್ಣದ ಬ್ಯಾಂಡ್ಗಳನ್ನು ನೀಡಲಾಗುವುದು.