“ಯುವರತ್ನ” ಚಿತ್ರೀಕರಣ ಮುಕ್ತಾಯ
ಬೆಂಗಳೂರು, ಅ 13 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಚಿತ್ರೀಕರಣ ಮುಗಿಸಿದೆ. ಲಾಕ್ಡೌನ್ನಿಂದ ಕೊನೆಯ ಹಂತದ ಶೂಟಿಂಗ್ ಸ್ಥಗಿತಗೊಳಿಸಿದ್ದ ಚಿತ್ರತಂಡ ಈಗ ಸಂಪೂರ್ಣವಾಗಿ ಮುಗಿಸಿದೆ. ಕೊನೆಯ ದಿನದ ಚಿತ್ರೀಕರಣದಲ್ಲಿ ನಟ ಪುನೀತ್ ರಾಜ್ ಕುಮಾರ್ ಮತ್ತು ನಾಯಕಿ ಸಯೇಶಾ ಸೈಗಲ್ ಭಾಗಿಯಾಗಿದ್ದರು.ಈ ವೇಳೆ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್, ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಸಹ ಪಾಲ್ಗೊಂಡಿದ್ದರು. ಈ ಸಂತಸವನ್ನು ನಿರ್ದೇಶಕ ಸಂತೋಷ್ ಆನಂದ್ರಾಮ್ ತಮ್ಮ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರೀಕರಣವನ್ನು ಯಶಸ್ವಿಯಾಗಿ ಮುಗಿಸಿಕೊಟ್ಟ ಪುನೀತ್ ಸರ್ ಗೆ, ವಿಜಯ್ ಸರ್ ಗೆ, ವೆಂಕಟ್ ಸರ್ ಗೆ, ಶಿವು ಸರ್ ಗೆ ನನ್ನ ಡೈರೆಕ್ಷನ್ ತಂಡಕ್ಕೆ ಹಾಗು ಹೊಂಬಾಳೆ ಕುಟುಂಬಕ್ಕೆ ನನ್ನ ಹೃದಯ ಪೂರ್ವಕ ಧನ್ಯವಾದಗಳು ನನ್ನ ತಂಡ ನನ್ನ ಶಕ್ತಿ'' ಎಂದು ಟ್ವೀಟ್ ಮಾಡಿದ್ದಾರೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾತ್ರ ಬಾಕಿಯಿದ್ದು, ಆದಷ್ಟು ಬೇಗ ಮುಗಿಸಿ ತೆರೆಗೆ ಬರಲು ಸಜ್ಜಾಗಲಿದೆ.