ಹಗರಿಬೊಮ್ಮನಹಳ್ಳಿ

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಮುದಾಯದ ಪಾತ್ರ ಪ್ರಮುಖ

ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಮುದಾಯದ ಪಾತ್ರ ಪ್ರಮುಖ

ಹಗರಿಬೊಮ್ಮನಹಳ್ಳಿ 09: ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಬಳ್ಳಾರಿ, ತಾಲೂಕು ಆಡಳಿತ, ತಾಲೂಕು ಪಂಚಾಯತಿ, ಮೋರಿಗೇರಿ ಗ್ರಾಮ ಪಂಚಾಯತಿ ಮತ್ತು ಕ್ರೀಮ್ ಯೋಜನೆ ಡಾನ್ ಬಾಸ್ಕೋ ಸಂಸ್ಥೆ, ಹೊಸಪೇಟೆ ಇವರ ಸಂಯುಕ್ತಶ್ರಯದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಸಮುದಾಯ ಸಹಭಾಗಿದಾರರ ಪಾತ್ರ ಕುರಿತು ಸಂವಾದ ಕಾರ್ಯಕ್ರಮ ಸೋಮವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ರಾಘವೇಂದ್ರರಾವ್ ಮಾತನಾಡಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ರಾಜ್ಯಮಟ್ಟದಿಂದ ಪಂಚಾಯತಿ ಮಟ್ಟದತನಕ ತನ್ನ ಕಾರ್ಯವನ್ನು ನಿರ್ವಹಿಸುತ್ತಿದೆ. ಮತ್ತು ಮಕ್ಕಳ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹರಿಸುವ ಮಹತ್ಕಾರ್ಯವನ್ನು ಮಾಡುತ್ತಾ ಬಂದಿದೆ. ಮತ್ತು ಸಮುದಾಯದವರಿಂದಲೂ ಮಕ್ಕಳ ಸಮಸ್ಯೆಗಳನ್ನು ಅಹವಾಲುಗಳನ್ನು ಸ್ವೀಕರಿಸಿ ಪರಿಹರಿಸುವ ಕಾರ್ಯವನ್ನು ಮಾಡುತ್ತಿದೆ. ಸಮಾಜವು ಹೆಣ್ಣು ಮತ್ತು ಗಂಡು ಸಮಾನವಾಗಿ ನೋಡಬೇಕು. ಲಿಂಗ ತಾರತಮ್ಯವನ್ನು ಮಾಡಬಾರದು. ಮಕ್ಕಳು ಮುಕ್ತವಾಗಿ ಮಾತನಾಡುವಂತಹ ಚೈತನ್ಯವನ್ನು ಬೆಳೆಸಿಕೊಳ್ಳಬೇಕು. ಸ್ಥಳೀಯ ಸರ್ಕಾರ ಮಕ್ಕಳ ಹಕ್ಕುಗಳ ರಕ್ಷಣೆಯನ್ನು ಮಾಡಲು ಮುಂದಾಗಬೇಕು ಎಂದು ಸಲಹೆಯನ್ನು ನೀಡಿದರು.À ಪ್ರಾಸ್ತಾವಿಕ ನುಡಿಯನ್ನು ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾದರ್ ಆನಂದ  ಮಾತನಾಡಿ ಈ ಕ್ರೀಮ್ ಯೋಜನೆ ಬೆಂಗಳೂರು ಬ್ರೆಡ್ಸ್ ಸಂಸ್ಥೆ, ಹೊಸಪೇಟೆ ಡಾನ್ ಬಾಸ್ಕೋ ಸಂಸ್ಥೆಯ ಸಹಯೋಗದಲ್ಲಿ ಕಳೆದ 06 ವರ್ಷಗಳಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಮಕ್ಕಳ ಹಕ್ಕುಗಳ ಕ್ಲಬ್‍ಗಳನ್ನು ಶಾಲೆಗಳಲ್ಲಿ ರಚಿಸುತ್ತಾ ಮಕ್ಕಳಿಗೆ ಮಕ್ಕಳ ಹಕ್ಕುಗಳ ಬಗ್ಗೆ ತರಬೇತಿಯನ್ನು ನೀಡುತ್ತಾ ಗ್ರಾಮ ಪಂಚಾಯತಿಗಳಲ್ಲಿ ಮಕ್ಕಳ ಕಾವಲು ಸಮಿತಿ ರಚಿಸುವುದರ ಜೊತೆಗೆ ಅವುಗಳನ್ನು ಸಬಲಗೊಳಿಸುವಂತಹ ಕೆಲಸವನ್ನು ಮಾಡುತ್ತಾ ಬಂದಿದೆ ಎಂದರು. 

ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಚಿಲುಗೋಡು ಶೇಖರಪ್ಪರವರು ವಹಿಸಿದ್ದರು. ಅತಿಥಿಗಳಾಗಿ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಾದ ಚಾಂದ್ ಬಾಷಾ, ತಾಲೂಕು ಪಂಚಾಯತಿಯಿಂದ ರವಿನಾಯ್ಕ ರವರು ಆಗಮಿಸಿದ್ದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನೀಲಮ್ಮ, ಡಾನ್ ಬಾಸ್ಕೋ ನಿರ್ದೇಶಕರಾದ ಫಾದರ್ ಆನಂದ್, ಗ್ರಾಮ ಪಂಚಾಯತಿ ಸದಸ್ಯರಾದ ಚಿಲುಗೋಡು ಉದಯಕುಮಾರ್, ವೀಣಾ, ತುಪ್ಪದ ಕವಿತ, ಕ್ಯಾದಿಗಿಹಳ್ಳಿ ವನ್ನತ್ತಮ್ಮ, ಪೂಜಾರ್ ಹನುಮೇಶ್, ಮಹೇಶ್ವರಗೌಡ್ರು, ಟಿ.ಜಿ.ಶ್ರೀಧರ, ಗುಂಟೂರು ನಾಗರಾಜ, ಶೈಲಜಾ.ಕೆ, ಅಂಜಿನಮ್ಮ, ಗಿರಿಜಮ್ಮ, ಇತತರು ಆಗಮಿಸಿದ್ದರು. 

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಯುನಿಸೆಪ್ ಸರ್ವ ಶಿಕ್ಷಣ ಇಲಾಖೆ, ಬೆಂಗಳೂರು ಬ್ರೆಡ್ಸ್, ಮತ್ತು ಡಾನ್ ಬಾಸ್ಕೋ ಸಂಸ್ಥೆ ಸಹಯೋಗದಲ್ಲಿ ಮಕ್ಕಳಿಗಾಗಿ ಇರುವ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮತ್ತು ಈ ಕಾರ್ಯಕ್ರಮದ ನಿರೂಪಣೆ ಶರಣಪ್ಪ, ಜಿಲ್ಲಾ ಸಂಯೋಜಕರು, ಕ್ರೀಮ್ ಯೋಜನೆ ನಡೆಸಿಕೊಟ್ಟರು. ಶಾಲಾ ಮುಖ್ಯೋಪಾಧ್ಯಾಯರು ಮತ್ತು ಸಹ ಶಿಕ್ಷಕರು, ಅಂಗನವಾಡಿ ಆಶಾ ಕಾರ್ಯಕರ್ತೆಯರು ಮತ್ತು ಸ್ವಸಹಾಯ ಸಂಘದ ಮಹಿಳೆಯರು, ಮಕ್ಕಳ ಪಾಲಕ ಪೋಷಕರು, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಸಮುದಾಯದ ಮುಖಂಡರು, ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳು, ಮಕ್ಕಳ ಸಹಾಯವಾಣಿಯ ಸಂಯೋಜಕರು ಮತ್ತು ಸಿಬ್ಬಂದಿಯವರು, ಕ್ರೀಮ್ ಯೋಜನೆಯ ಸಿಬ್ಬಂದಿಯವರು, ಗ್ರಾಮ ಪಂಚಾಯತಿಯ ಸಿಬ್ಬಂದಿಯವರು ಭಾಗವಹಿಸಿದ್ದರು.

ಸುದ್ದಿ ಓದಿ