ಕಳಪೆ ಬಿತ್ತನೆ ಬೀಜ ಮಾರಾಟ ಕಂಡು ಬಂದರೆ ಕ್ರಿಮಿನಲ್ ಕೇಸ್ : ನೇಮಿರಾಜ್ ನಾಯ್ಕ್

ಲೊಕದರ್ಶನ ವರದಿ

ಹಗರಿಬೊಮ್ಮನಹಳ್ಳಿ.ಜೂ.03: ಕಳಪೆ ಬಿತ್ತನೆ ಬೀಜ ಮಾರಾಟ ಕಂಡು ಬಂದರೆ ಕಾನೂನು ಕ್ರಮ ವಹಿಸಿ ಕ್ರಿಮಿನಲ್ ಕೇಸ್ ದಾಖಲು ಮಾಡುವುದರ ಜೊತೆ ಬಿತ್ತನೆ ಬೀಜ ಮಾರಾಟ ಕಂಪನಿಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸಲಾಗುವುದು ಎಂದು ಶಾಸಕ ಕೆ. ನೆಮಿರಾಜ್ ನಾಯ್ಕ್ ಹೇಳಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಕೃಷಿ ಇಲಾಖೆಯಿಂದ ಶುಕ್ರವಾರ ಆಯೋಜಿಸಿದ್ದ ರೀಯಾಯತಿ ದರದ ಬಿತ್ತನೆ ಬೀಜ ವಿತರಣಾ ಕೇಂದ್ರಕ್ಕೆ ಚಾಲನೆ ಅವರು ಮಾತನಾಡಿ ಕಳಪೆ ಬಿತ್ತನೆ ಬೀಜ ಮಾರಾಟಕ್ಕೆ ಬ್ರೇಕ್ ಹಾಕುವಂತೆ ಇಗಾಗಲೇ ಅಧಿಕಾರಿಗಳಿ ತಿಳಿಸಲಾಗಿದೆ, ತಾಲೂಕಿನೆಲ್ಲೆಡೆ ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಕೃಷಿ ಚಟುವಟಿಕೆಗೆ ಇಲಾಖೆಯಿಂದ ನೀಡುವ ಸೌಲಭ್ಯಗಳಲ್ಲಿ ಯಾವುದೇ ಕೊರತೆಯಾಗದಂತೆ ನಿಗಾವಹಿಸಲು ತಿಳಿಸಲಾಗಿದೆ, ಇನ್ನು ಹೆಚ್ಚಿನ ಸಬ್ಸಿಡಿಗಳನ್ನು ಕೃಷಿಕರಿಗೆ ನೀಡುವಂತೆ ಸರಕಾರಕ್ಕೆ ಮನವಿ ಜೊತೆ ಆಗ್ರಹಿಸುವೆ, ಹೊಬಳಿ ಸೇರಿದಂತೆ ಒಟ್ಟು 6 ವಿತರಣಾ ಕೇಂದ್ರಗಳನ್ನು ನಿರ್ಮಿಸಲಾಗಿದೆ, ನಾನು ರೈತನ ಮಗನಾಗಿದ್ದೆನೆ ರೈತರ ಕಷ್ಟ ಎನಿದೆ ಎಂದು ನನಗೆ ತಿಳಿದಿದೆ ಯಾವುದೋ ಪೇಪರ್ ನೋಡ್ಕೊಂಡು ಒದ್ಕೊಂಡು ಈ ಮಾತು ಹೇಳುತ್ತಿಲ್ಲ,  ಮಳೆ ಕೈ ಹಿಡಿದು ಬೆಳೆ ಬಂದರೆ ರೈತ ಸುಖದಲ್ಲಿರುತ್ತಾನೆ ಅದೇ ಮಳೆ ಕೈ ಕೊಟ್ಟರೆ ರೈತರ ಸ್ಥಿತಿ ಚಿಂತಾಜನಕವಾಗಿರುತ್ತದೆ ಸಾಲ ಮಾಡಿ ಕೃಷಿಯಲ್ಲಿ ತೊಡಗಿರುತ್ತಾರೆ ಅವರ ಗತಿ ಎನಾಗುತ್ತದೆ ಹಿಗಾಗಿ ರೈತರಿಗೆ ಹೆಚ್ಚಿ ಸಬ್ಸಿಡಿಗಳನ್ನು ಸರಕಾರ ನೀಡಬೇಕು, ಕಾಂಗ್ರೇಸ್ ಪಕ್ಷ ಪ್ರಣಾಳಿಕೆಯಲ್ಲಿ ನೀಡಿದ ಹೇಳಿಕೆಗಳನ್ನು ಚಾಚು ತಪ್ಪದೆ ಪಾಲಿಸಬೇಕಿದೆ ಇದಕ್ಕೆ ಕಾದು ನೋಡಬೇಕಿದೆ ಇಲ್ಲವಾದರೆ ನಾವು ಜನರ ಜೊತೆ ಹೋರಾಟಕ್ಕೆ ಬೀದಿಗಿಳಿಯಬೇಕಾಗುತ್ತದೆ ಎಂದರು.

ತಾಲೂಕಿನಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಕಂಡು ಬಂದರೆ ಅಂತಹ ಕಂಪನಿಯನ್ನು ಬ್ಲಾಕ್ ಲಿಸ್ಟ್ಗೆ ಸೇರಿಸುವುದರ ಜೊತೆ ದಂಡವನ್ನು ಹಾಕಿ ಕ್ರಿಮಿನಲ್ ಕೇಸ್ ಹಾಕಲಾಗುವುದು, ಕಳಪೆ ಬಿತ್ತನೆ ಬೀಜ ಮಾರಾಟಗಾರರ ರಕ್ಷಣೆಗೆ ಎಂತಹ ಪ್ರಭಾವಿ ವ್ಯೆಕ್ತಿ ಮಧ್ಯ ಪ್ರವೇಶಿಸಿದರು ನೋ ಕಾಂಪ್ರೋಮೈಸ್ ಎಂದು ಶಾಸಕ ಕೆ ನೆಮಿರಾಜ್ ನಾಯ್ಕ್ ಹೇಳಿದರು.

 ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸುನೀಲ್ ನಾಯ್ಕ್, ಕೃಷಿ ಅಧಿಕಾರಿಗಳಾದ ನಾಗರಾಜ್, ನಾಗಾರ್ಜುನ, ಕೃಷಿ ತಾಂತ್ರಿಕ ಅಧಿಕಾರಿ ಹಿರೇಮಠ್, ಶಶಿಕುಮಾರ, ಚಂದ್ರಶೇಖರ್, ಭೋಜಾನಾಯ್ಕ್, ಮುಖಂಡರಾದ ಬಾದಾಮಿ ಮುತ್ತಣ್ಣ, ಚಿತವಾಡ್ಗಿ ಪ್ರಕಾಶ್, ನಿಯಾಜ್ ಖಾನ್,ಸರ್ದಾರ ಯಮನೂರ್, ಸಂಪತ್ಕುಮರ್ ನಾಯ್ಕ್, ಲಕ್ಷಣ ಕಲಾಲ್, ನಾಗರಾಜ ಜನ್ನು, ಹೆಚ್ ಎಂ ವಿಜಯಕುಮಾರ್, ಬನ್ನಿಗೋಳ್ ವೆಂಕಣ್ಣ ಸೇರಿದಂತೆ ಇನ್ನಿತರರು ಇದ್ದರು