ಪ್ರಗತಿ ಪರ ಶಿಕ್ಷಕರ ವೇದಿಕೆ ವತಿಯಿಂದ ಪ್ರತಿಭಾ ಪುರಸ್ಕಾರ

ಹಗರಿಬೊಮ್ಮನಹಳ್ಳಿ 01 : ಪಟ್ಟಣದ ಗುರುಭವನದಲ್ಲಿ ಪ್ರಗತಿ ಪರ ಶಿಕ್ಷಕರ ವೇದಿಕೆಯ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವೇದಿಕೆಯ ಮುಖಂಡರಿಗೆ ಪದಗ್ರಹಣ ಕಾರ್ಯಕ್ರಮ ನಡೆಯಿತು. 

ತಾಲೂಕಿನ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಚಂದನ ಪ್ರಥಮ, ವರಲಹಳ್ಳಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಎ.ಎಂ. ಅಕ್ಷತಾ ದ್ವಿತೀಯ, ಪ್ರಸಿಧ್ಧಿ ಆಂಗ್ರ ಮಾಧ್ಯಮ ಪ್ರೌಢಶಾಲೆಯ ಕೆ. ಲಕ್ಷ್ಮೀ ತೃತೀಯ ಸ್ಥಾನ ಗಳಿಸಿದ್ದು ಪ್ರಗತಿ ಪರ ವೇದಿಕೆಯಿಂದ ಸನ್ಮಾನಿಸಲಾಯಿತು. 

ವೇದಿಕೆಯ ಬಿ.ಕೊಟ್ರ​‍್ಪ ಮಾತನಾಡಿ ಮಕ್ಕಳ ಮುಕ್ಯ ಘಟ್ಟ ಎನಿಸಿಕೊಂಡಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಸಾಧನೆಗೈದ ವಿದ್ಯರ್ಥಿಗಳಿಗೆ ನಮ್ಮ ವೇದಿಕೆಯ ಪರವಾಗಿ ಸನ್ಮಾನಿಸಿ ಇವರ ಪ್ರತಿಭೆಗೆ ಪುರಸ್ಕರ ನೀಡಲಾಗಿದೆ, ಇನ್ನು ಹೆಚ್ಚಿನ ಉನ್ನತ ವ್ಯಾಸಂಗಕ್ಕೆ ಇಂತಹ ವೇದಿಕೆಗಳು ದಾರಿ ದೀಪವಾಗಲಿವೆ, ಇದರಿಂದ ಅವರ ಪೋಷಕರಿಗೆ, ಶಾಲೆಗೆ, ತಾಲೂಕಿಗೆ ಜಿಲ್ಲೆಗೆ ಕೀರ್ತಿ ತರುವಂತಾಗಲಿ ಎಂದು ಹರಿಸಿದರು. 

ಹೆಚ್ ಸುರೇಶ್ ಮಾತನಾಡಿ ಪ್ರತಿಭೆಗಳ ಅನಾವರಣದಿಂದ ಮತ್ತಷ್ಟು ಆತ್ಮ ವಿಶ್ವಸದ ಜೊತೆ ಸಾಧನೆಗೆ ಮನೋಬಲ ದ್ವಿಗುಣಗೊಳಿಸಿದಂತಾಗುತ್ತದೆ, ವಿದ್ಯಾರ್ಥಿಗಳು ವಿದ್ಯಾಭ್ಯಸದ ಕಡೆ ಹೆಚ್ಚಿನ ಗಮನ ನೀಡಬೇಕು, ತದೇಕ ಚಿತ್ತದಿಂದ ಒದುವುದರಲ್ಲಿ ಮಗ್ನನಾಗಬೇಕು ವಿದ್ಯ ಯಾರ​‍್ಪನ ಸ್ವತ್ತಲ್ಲ ಅದು ಸಾಧಕರ ಸ್ವತ್ತಾಗಿದೆ ಸಾಧನೆಗೆ ಅಛಲ ನಂಬಿಕೆ ಎಕಾಗ್ರತೆ ಸಧೃಢ ಮನಸ್ಸಿದ್ದರೆ ಸಾಧನೆಯ ಮೆಟ್ಟಿಲು ಮೆಟ್ಟಿ ನಿಲ್ಲಬಹುದಾಗಿದೆ ಎಂದರು. 

ಬಿ.ಕೊಟ್ರ​‍್ಪ, ಸಿ.ವೈ ಮೂರ್ನಾಳು, ಶ್ರೀನಾಥ್ ಆಚಾರ್ ಮಾತನಾಡಿದರು. ಈ ಸಂಧರ್ಭದಲ್ಲಿ ವೇದಿಕೆಯ ದೇವಪ್ಪ, ಕೆ. ಮಲ್ಲಿಕಾರ್ಜುನ, ಮೈನಳ್ಳಿ ಮಂಜುನಾಥ್, ರಾಧಮ್ಮ, ಬಿ ಗೀತಾ, ವಾಣಿಶ್ರೀ, ಮಂಗಳಮ್ಮ, ಡಿ ಸುಧ , ಹನುಮಕ್ಕ, ಸಿದ್ದಲಿಂಗಯ್ಯ ಸ್ವಾಮಿ, ಎಲ್ ಕೊಟ್ರೇಶ್ ನಾಯ್ಕ್‌, ಹುಸೇನ್ ಸಾಹೇಬ್, ಎಮ್ ರಾಜು, ಮುನೀರ್ ಬಾಷಾ ಉಪಸ್ಥಿತರಿದ್ದರು.ಟಿ ಸೋಮಶೇಖರ್ ನೀರೂಪಿಸಿದರು, ಪೂಜಾ ಪ್ರಾರ್ಥಿಸಿ ಮುನೀರ್ ಬಾಷಾ ವಂದಿಸಿದರು.