ಸಾಮೂಹಿಕ ವಿವಾಹ, ವಿಷೇಷ ಚೇತನರಿಗೆ ಕಿಟ್ ವಿತರಣೆ

ಬಿ ಡಿ ಗಂಗಣ್ಣ ಜನ್ಮ ದಿನಾಚರಣೆ ನಿಮಿತ್ತ 

ಹಗರಿಬೊಮ್ಮನಹಳ್ಳಿ ಜೂ 01 : ಪಟ್ಟಣದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಹಾಗೂ ಪುರಸಭೆ ಸದಸ್ಯ ಬಿ ಡಿ ಗಂಗಣ್ಣ ಅವರ 50ನೇ ವರ್ಷದ ಹುಟ್ಟು ಹಬ್ಬದ ನಿಮಿತ್ತಾ ಸಾಮೂಹಿಕ ವಿವಾಹ ಹಾಗೂ ವಿಶೇಷ ಚೇತನರಿಗೆ ಪತ್ರಿ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಿಯಮ್ಮನಹಳ್ಳಿ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಜನ್ಮ ದಿನಗಳು ದೀಪ ಹಚ್ಚುವುದರ ಮುಖಾಂತರ ಆಚರಿಸಬೇಕು ಪ್ರಸ್ತುತ ದಿನಗಳಲ್ಲಿ ದೀಪ ಆರಿಸುವುದರ ಮೂಲಕ ಆಚರಿಸುತ್ತಿರುವುದು ದುಖಃಕರ ಸಂಗತಿಯಾಗಿದೆ, ಪ್ರತಿಯೊಬ್ಬರೂ ತಮ್ಮ ಜೀವಿತ ಕಾಲದಲ್ಲಿ ನೂರ ವರ್ಷಗಳ ಕಾಲ ಜೀವಿಸುತ್ತಾರೆ ಆದರೆ ತಮ್ಮ ಹುಟ್ಟು ಹಬ್ಬದ ದಿನ ಸಾಮಾಜಿಕ ಕಾರ್ಯ ಮಾಡುವುದು ತುಂಬಾ ವಿರಳ ಪಟ್ಟಣದ ಗಂಗಣ್ಣ ಅವರ ಕುಟುಂಬ ಸದಾ ಕಾಲ ಎಲ್ಲರ ಒಳಿತನ್ನು ಬಯಸುತ್ತಾ ಕೈಲಾದ ಸಹಾಯ ಮಾಡುವಲ್ಲಿ ಸದಾ ಮೂಂಚೂಣಿಯಲ್ಲಿರುತ್ತಾರೆ. ಅವರ ಈ ಸಾಮಾಜಿಕ ಕಾರ್ಯಗಳನ್ನು ಕಂಡ ಬಿಡಿ ಗ್ರೋಪ್ ಅಭಿಮಾನಿ ಬಳಗವು ಸಾಮೂಹಿಕ ವಿವಾಹ ವಿಶೇಷ ಚೇತನರಿಗೆ ಕಿಟ್ ವಿತರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ, ಕೌರವರು ನೂರು ಇದ್ದರು ಧರ್ಮ ಪರಿಪಾಲನೆಯಾಗಲಿಲ್ಲ ಅದೇ ಪಾಂಡವರು ಕೇವಲ 5ಜನ ಇದ್ದರೂ ಧರ್ಮದ ಏಳಗೆಗಾಗಿ ಅವಿರತ ಶ್ರಮ ಕಾಣಬಹುದಾಗಿದೆ ಹಾಗೆ ಧರ್ಮ ಪರಿಪಾಲಾಲನೆಯಲ್ಲಿ ಬಿ ಡಿ ಗಂಗಣ್ಣ ಅವರು ಸೇರುತ್ತಾರೆ ಎಂದು ಆಶಿರ್ವಚನ ನೀಡಿ ಗಂಗಣ್ಣ ಅವರಿಗೆ ಹರಸಿದರು. 

ನಂದೀಪುರು ಮಠದ ಡಾ ಮಹೇಶ್ವರ ಸ್ವಾಮಿ ಮಾತನಾಡಿ ಬಿ ಡಿ ಗಂಗಣ್ಣ ಅವರು ಅನೇಕ ವರ್ಷಗಳಿಂದ ಎಲ್ಲಿಯೇ ಧಾರ್ಮಿಕ ಕಾರ್ಯಗಳು ನಡೆಯಲಿ ಸಹಾಯ ಮಾಡುವಲ್ಲಿ ಮುಂದಿರುತ್ತಾರೆ ಎಂದರು. 

ಸಾಮುಹಿಕ ವಿವಾಹದಲ್ಲಿ ಎರೆಡು ಜೊತೆ ನವ ವಿವಾಹಿತರು ದಾಂಪತ್ಯ ಜೀವನಕ್ಕೆ ಕಲಿಟ್ಟು ಆಶಿರ್ವಾ ಪಡೆದರು. ಪಿಎಲ್‌ಡಿ ಬ್ಯಾಂಕ್‌ನ ಕಾರ್ಯನಿರ್ವಹಣಾಧಿಕಾರಿ ತಿಪ್ಪೇಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಬೆಣ್ಣಿಹಳ್ಳಿ ಹಿರೇ ಮಠದ ಪಂಚಾಕ್ಷರಿ ಶಿವಾಚಾರ್ಯ ಮಾಹಾಸ್ವಾಮಿಗಳು, ಚಂದ್ರಶೇಖರ್ ಸ್ವಾಮಿ, ಶಿವಲಿಂಗರುದ್ರಮುನಿ ಸ್ವಾಮಿ, ಹಾಲಸ್ವಾಮಿ ಮಠದ ಹಾಲಸಿದ್ದೇಶ್ವರ ಸ್ವಾಮಿ ಆಶಿರ್ವಚನ ನೀಡಿದರು, ಶಾಸಕ ನೇಮಿರಾಜ್ ನಾಯ್ಕ್‌ ಇದ್ದರು. ಶ್ರೀಧರ ಹಿರೇಮಠ್ ಸ್ವಾಗತಿಸಿದರು, ಕರಿಬಸಯ್ಯ ನಿರೂಪಿಸಿ ಪ್ರಾರ್ಥಿಸಿದರು.