ಉನ್ನತ ಹುದ್ದೆಗೇರಿ ಬಡವರ ಸಹಾಯಕ್ಕೆ ಮುಂದಾಗಿ : ವಚನಾನಂದ ಮಹಾಸ್ವಾಮಿ

ಲೋಕದರ್ಶನ ವರದಿ

ಹಗರಿಬೊಮ್ಮನಹಳ್ಳಿ 29 : ಸರಕಾರವು ಘೋಷಣೆ ಮಾಡಿರುವ ಗ್ಯಾರಂಟಿಗಳು ಜಾರಿಯಾಗಲಿ ಆಗದಿರಲಿ ಅವುಗಳನ್ನು ಆಶಿಸದೇ ನಾವು ಮುಖ್ಯವಾಗಿ ಭೂತಾಯಿಯನ್ನು ನಂಬಬೇಕು ಕಷ್ಟಪಟ್ಟು ಸುರಿಸುವ ಬೇವರು ಹನಿಗಳೇ ನಮಗೆ  ಗ್ಯಾರಂಟಿ ಎಂದು ಪಂಚಮಸಾಲಿ ಸಮಾಜದ ಶ್ರೀ ಶ್ರೀ ಶ್ರೀ ವಚನಾನಂದ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಪಂಚಮಸಾಲಿ ಭವನದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಪ್ರತಿಭಾಪುರಸ್ಕರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವನ್ನು ವಹಿಸಿ ಅವರು ಮಾತನಾಡಿದರು. ಐಎಎಸ್ ಐಪಿಎಸ್ ಸೇರಿದಂತೆ ಉನ್ನತ ಹುದ್ದೆಗಳನ್ನು ಅಲಂಕರಿಸಿದರೆ ಹೆಚ್ಚೆಚ್ಚು ಸಹಕರಗಳನ್ನು ಬಡವರಿಗೆ ಮಾಡಬಹುದಾಗಿದೆ, ಸಮಾಜದ ಬಡ ಮಕ್ಕಳು ಉನ್ನತ ಹುದೆಗಳನ್ನು ಪಡೆಯಲು ಕೋಚಿಂಗ್ ಸೆಂಟರ್ಗಳ ಅವಶ್ಯಕತೆ ಇದ್ದರೆ ಅವರನ್ನು ಕೋಚಿಂಗ್ ಕಳುಹಿಸುವ ವ್ಯೆವಸ್ಥೆಯನ್ನು ಮಾಡಲಾಗುವುದು ನಿಮ್ಮ ಜೊತೆ ನಾವಿದ್ದೆವೆ, ನಿಮ್ಮಗಳ ಪರಿಶ್ರಮದಿಂದ ಇಂದು ಪ್ರತಿಭಾ ಪುರಸ್ಕಾರಕ್ಕೆ ಅರ್ಹತೆ ಪಡೆದುಕೊಂಡಿದ್ದೀರಿ ಮುಮದಿನ ದಿನಗಳಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ನಾವು ಸಹಾಹ ಮಾಡಲು ಸಿಧ್ದರಿದ್ದು ಆಸಕ್ತರು ಪೀಠಕ್ಕೆ ಬಂದು ಚರ್ಚಿಸುವಂತೆ ತಿಳಿಸಿದರು.

ಶಾಸಕ ನೇಮಿರಾಜ್ ನಾಯ್ಕ್ ಮಾತನಾಡಿ ಪ್ರತಿಭಾ ಪುರಸ್ಕಾರಗಳು ಮಕ್ಕಳಿಗೆ ಶೈಕ್ಷಣಿಕವಾಗಿ ಇಂಬು ನೀಡುತ್ತೆವೆ ಮತ್ತಷ್ಟು ಹೆಚ್ಚಿನ ಶಿಕ್ಷಣಕ್ಕೆ ದಾರಿಯಾಗುತ್ತವೆ, ಪಾಲಕ ಪೋಷಕರು ಮಕ್ಕಳಿಗೆ ಅನುಕರಣಿಯ ರೀತಿಯಲ್ಲಿ ಇರಬೇಕಿದೆ, ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಮಠ ಟಮಾನ್ಯಗಳ ಆದರ್ಶಗಳನ್ನು ನಾವು ಪಾಲಿಸಬೇಕು, ಕ್ಷೇತ್ರದಲ್ಲಿ ನನಗೆ ಸೇವೆ ಮಾಡಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದಗಳನ್ನು ತಿಳಿಸಿದರು.

ಸಮುದಾಯದ ರಾಜ್ಯ ಘಟಕದ ಕಾರ್ಯಧ್ಯಕ್ಷ ಸೋಮನಗೌಡ ಮಾತನಾಡಿ, ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು, ವಿದ್ಯಾಥರ್ಿಗಳಿಗೂ ಹಾಗೂ ನೌಕರಿಗೆ ಅನುಕೂಲವಾಗುತ್ತದೆ ಎನ್ನುವ ನಿಟ್ಟಿನಲ್ಲಿ ನಾವು ಹೋರಾಟಮಾಡಿದ್ದೇವೆ. ಇನ್ನೂ ಹೋರಾಟಮಾಡುತ್ತೇವೆ. ಸೌಲಭ್ಯ ಸಿಗುವವರೆಗೂ ನಾವು ಸುಮ್ಮನೆ ಕೂಡುವದಿಲ್ಲ, ನಮ್ಮೊಂದಿಗೆ ನೀವು ಕೈಜೋಡಿಸಿ ಎಂದು ಕರೆ ನೀಡಿದರು.

ತಾಲೂಕು ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಜಿ.ಬಿ.ಪಾಟೀಲ, ನಿಕಟ ಪೂರ್ವ ರಾಜ್ಯಾಧ್ಯಕ್ಷ ಬಸವರಾಜ ದಿಂಡೂರು, ಬಾವಿ ಬೆಟ್ಟಪ್ಪ, ರಾಜ್ಯ ಪ್ರಧಾನ ಕಾರ್ಯದಶರ್ಿ ಬಿ ಲೋಕೇಶ್, ರಾಜ್ಯ ಉಪಾಧ್ಯಕ್ಷ ಹನಸಿ ಸಿದ್ದೇಶ್, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಗಳ ಬಸವರಾಜ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ವಾಣಿಗುರು, ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ್,ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು. 48ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಬೆಳ್ಳಿಯ ಲಿಂಗದಕಾಯಿ, ಶಾಲು, ಪುಸ್ತಕಗಳನ್ನು ನೀಡಿ ಸನ್ಮಾನಿಸಲಾಯಿತು. ಟ್ರಸ್ಟ್ನ ಕಾರ್ಯದಶರ್ಿ ಶಿವಶಂಕರಗೌಡ ಸ್ವಾಗತಿಸಿದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊನ್ನದ್ ಗುರುಬಸವರಾಜ್ ನಿರ್ವಹಿಸಿದರು.