ಶಿಗ್ಗಾವ್

ಮೇರು ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ: ಸ್ನೇಹಲತಾ ಕುನ್ನೂರ

ಮೇರು ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ: ಸ್ನೇಹಲತಾ ಕುನ್ನೂರ

ಶಿಗ್ಗಾವಿ 17: ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆಯಾಗಿದ್ದು, ಮಕ್ಕಳಲ್ಲಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿ ಸಮಾಜದ ಮೇರು ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಪೋಷಕರ ಪಾತ್ರ ಮಹತ್ತರವಾಗಿದೆ ಅಲ್ಲದೇ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅಂಶಗಳನ್ನು, ಗುಣಾತ್ಮಕ  ಭಾವನೆ ಮೈಗೂಡಿಸಿ ವಿಶಿಷ್ಠ ಸಾಧನೆ ಮಾಡಬಲ್ಲ ಮನೋಬಲ ಹಾಗೂ ಸಹಕಾರವನ್ನು ಮಕ್ಕಳಿಗೆ ಒದಗಿಸಬೇಕು ಎಂದು ಕುನ್ನೂರ ಸಮೂಹ ಸಂಸ್ಥೆಯ ಅಧ್ಯಕ್ಷೆ ಸ್ನೇಹಲತಾ ಕುನ್ನೂರ ಪೋಷಕರಿಗೆ ಕಿವಿ ಮಾತು ಹೇಳಿದರು. 

ಪಟ್ಟಣದ ಕುನ್ನೂರ ಇಂಟರನ್ಯಾಶನಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಅಕ್ಷರಾಭ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಶಿಕ್ಷಣ ಮಕ್ಕಳಲ್ಲಿಯೇ ಜೀವನ ನಿರ್ವಹಿಸುವ ಪಾಠವನ್ನು ಹೇಳಿಕೊಟ್ಟರೇ, ಮನೆಗಳಲ್ಲಿ ನೀಡುವ ಶಿಕ್ಷಣವು ಮಕ್ಕಳ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುತ್ತದೆ. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಸಮಾಜದ ಒಳಿತಿಗಾಗಿ ಉಪಯೋಗಿಸುವ ವ್ಯಕ್ತಿಗಳನ್ನಾಗಿ ರೂಪಿಸಬೇಕೆಂದರು. 

ಪ್ರಾಚಾರ್ಯ ಶಿವು ಹಾವೇರಿ ಮಾತನಾಡಿ ಹಿಂದೂ ಧರ್ಮದಲ್ಲಿ ಮಗು ವಿಧ್ಯೆಯನ್ನು ಆರಂಭ ಮಾಡುವ ಮುನ್ನ ಅಥವಾ ಶಾಲೆಗೆ ಸೇರಿಸುವ ಮುನ್ನ ಅಕ್ಷರಾಭ್ಯಾಸ ಮಾಡುವ ಪದ್ದತಿಯಿದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದ್ದು ಮಗು ಮುಂದೆ ವಿದ್ಯಾವಂತನಾಗಿ, ಉತ್ತಮ ಸಂಸ್ಕಾರವನ್ನು ಬೆಳೆಸಿಕೊಳ್ಳುತ್ತದೆ ಎಂಬ ನಂಬಿಕೆ ಮೇರೆಗೆಸಂಸ್ಥೆಯ ಪರವಾನಿಗೆ ಮೇರೆಗೆ ಮತ್ತು ಪಾಲಕರ ಬಲವಂತದ ಮೇರೆಗೆ ಈ ವಿಶೇಷ ಅಕ್ಷರಾಭ್ಯಾಸ ಕಾರ್ಯಕ್ರಮ ತಾಲೂಕಿನಲ್ಲಿಯೇ ಮಾದರಿ ಕಾರ್ಯಕ್ರಮವಾಗಿದೆ ಎಂದರು. 

ಪಾಲಕ ಬನ್ನೆಗೌಡ್ರ ಮಾತನಾಡಿ ಎಲ್ಲಾ ಪೋಷಕರು ತಮ್ಮ ಮಗು ಉತ್ತಮ ಶಿಕ್ಷಣವನ್ನು ಪಡೆದು ಯಶಸ್ವಿ ವ್ಯಕ್ತಿಯಾಗಬೇಕೆಂದು ಬಯಸುತ್ತಾರೆಆ ಕನಸನ್ನು ನನಸಾಗಿಸಲು ಪಾಲಕರು ತುಂಬಾ ಪ್ರಯತ್ನಿಸುತ್ತಾರೆ ಆದರೆ ಮಗು ಕೆಲವೊಮ್ಮೆ ಆದ್ಯಯನದಲ್ಲಿ ಹೆಚ್ಚು ಆಸಕ್ತಿ ವಹಿಸದಿದ್ದಾಗ ಪೋಷಕರು ನಿರಾಸೆಗೊಂಡು ಇಂತಹ ಚಟುವಟಿಕೆಗಳಲ್ಲಿ ಪಾಲ್ಗೋಂಡು ಮಕ್ಕಳ ಶ್ರೇಯೋಭಿವೃದ್ದಿಗೆ ಕಂಕಣ ಬದ್ದರಾಗಬೇಕು ಎಂದರು. 

ಉಳವಯ್ಯ ಬನ್ನಿಗಟ್ಟಿಮಠ ಗುರುಗಳ ಮುಖಾಂತರ ಕಾರ್ಯಕ್ರಮದ ಅಂಗವಾಗಿ ಶಾಲೆಯಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು. ಅಕ್ಷರಾಭ್ಯಾಸದಲ್ಲಿ ಉತ್ಸಾಹದಿಂದ ಹೆಚ್ಚಿನ ಪೋಷಕರು ತಮ್ಮ ನರ್ಸರಿ ಹಾಗೂ ಒಂದನೇಯ ತರಗತಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲಾಯಿತು. 

ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಈರಣ್ಣಾ ಬಡ್ಡಿ, ಶಿವಪುತ್ರ​‍್ಪ ಜಕ್ಕಣ್ಣವರ, ಪಾಲಕ ನ್ಯಾಯವಾದಿ ಹನುಮಂತ ಬಂಡಿವಡ್ಡರ ಸೇರಿದಂತೆ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹಾಗೂ ಪಾಲಕರು, ಪೋಷಕರು, ಮಕ್ಕಳು ಉಪಸ್ಥಿತರಿದ್ದರು. 


ಸುದ್ದಿ ಓದಿ