ಕಾಗವಾಡ

ಶಿಕ್ಷಕರ ಜೊತೆಗೆ ಪಾಲಕರ ಜವಾಬ್ದಾರಿಯು ಅತೀ ಮುಖ್ಯ

ಶಿಕ್ಷಕರ ಜೊತೆಗೆ ಪಾಲಕರ ಜವಾಬ್ದಾರಿಯು ಅತೀ ಮುಖ್ಯ

ಕಾಗವಾಡ  : ಮಕ್ಕಳ ಭವಿಷ್ಯ ಬಂಗಾರವಾಗಬೇಕು ಒಳ್ಳಯದಾಗಬೇಕು  ಎಂಬುವದನ್ನು ಮುಕ್ತವಾಗಿ ಚರ್ಚಿಸಿ ಸಮಾಲೋಚನೆ ಮಾಡಲು ಪಾಲಕರ ಸಭೆಯ ಉದ್ದೇಶವಾಗಿದೆ ಎಂದು ಕೆಆರ್ಇಎಸ್  ಹೈಸ್ಕೂಲ್ ವಿಭಾಗದ  ಉಪಪ್ರಾಚಾರ್ಯ ಎ ಎಂ ಹುಲ್ಲೆನ್ನವರ ಹೇಳಿದರು.   

ಅವರು ಐನಾಪುರ್  ಪಟ್ಟಣದ ಕೆ ಆರ್ ಇ ಎಸ್ ಸಂಸ್ಥೆಯ  ಕೇಂದ್ರ ಭವನದಲ್ಲಿ ಆಯೋಜಿಸಿದ ಸಂಸ್ಥೆಯ  ಹೈಸ್ಕೂಲ್ದಲ್ಲಿ  ಸನ್  2022ರ ಸಾಲಿನಲ್ಲಿ ಓದುತ್ತಿರುವ  ಒಂಬತ್ತನೆ ತರಗತಿಯ ಎ,ಬಿ,ಸಿ, ವಿದ್ಯಾರ್ಥಿಗಳ ಪಾಲಕರ ಸಭೆಯನ್ನು ಸರಸ್ವತಿ ಭಾವಚಿತ್ರ ಪೂಜೆ ಹಾಗೂ ದ್ವೀಪ ಬೆಳಗಿಸುವುದರೊಂದಿಗೆ  ಉದ್ಘಾಟಿಸಿ ಮಾತನಾಡುತ್ತಾ ಕಟ್ಟಡಕ್ಕೆ ನಾಲ್ಕು ಕಂಬಗಳು ಹಾಗೆ ಮಕ್ಕಳ ಅಭಿವೃದ್ಧಿಗೆ ಪಾಲಕರು, ಬಾಲಕರು, ಶಿಕ್ಷಕರು, ಸರಕಾರ,ಎಂಬ ನಾಲ್ಕು ಕಂಬ ಅವಶ್ಯ ಎಂದರು.

ಅತಿಥಿ ಗಳಾಗಿ ಆಗಮಿಸಿದ ಪಾಲಕರ ಪರವಾಗಿ ವಿಜಯಲಕ್ಷ್ಮಿ ತುಗಶೇಟ್ಟಿ ಮಾತನಾಡಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಜವಾಬ್ದಾರಿಯು ಅತೀ ಮುಖ್ಯ ಎಂದರು.  ಶಿಕ್ಷಕರ ಪರವಾಗಿ ಶಿಕ್ಷಕ ಎಸ್ ಎಂ ತಳಕೇರಿ ಮಾತನಾಡಿ ಮಕ್ಕಳು ಓದುತ್ತಾರೆ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಬೇಕಾದರೆ  ಪಾಲಕರು ಶಿಕ್ಷಕರೋಂದಿಗೆ ನಿಕಟ ಸಂಪರ್ಕ ವಿದರೆ  ವಿದ್ಯಾರ್ಥಿ ಗಳ ಕಲಿಕೆಯು ಬೆಳವಣಿಗೆಯಾಗುತ್ತದೆ ಎಂದರು.ಶಿಕ್ಷಕರಾದ ಎಲ್ ಎಚ್ ಮುಲ್ಲಾ ಪಾಲಕರ ಕರ್ತವ್ಯ ಗಳ ಬಗ್ಗೆ ವಿವರಿಸಿದರು. ಕಾರ್ಯಕ್ರಮ ವೇದಿಕೆಯಲಿ ಶಿಕ್ಷಕಿ  ವ್ಹಿ ಪಿ ಪೊತದಾರ ,ಶೀಲಾ ಕುಲಕರ್ಣಿ ,ದೈಹಿಕ ಶಿಕ್ಷಕರಾದ ರವಿ ಗಾಣಿಗೇರ, ಇದರು. ಸಭೆಯಲಿ ಎಲ್ಲ ಶಿಕ್ಷಕ ವೃಂದ ,ಪಾಲಕರು,ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಎ ಎಸ್ ನಾಯಿಕ ನಿರೂಪಿಸಿ ವಂದಿಸಿದರು 

ಸುದ್ದಿ ಓದಿ