ಇಂಡಿ

ಆಧ್ಯಾತ್ಮಿಕದ ಗುರಿಯೇ ಸತ್ಯಾನ್ವೇಷಣೆ: ಸಿ. ಎಂ. ಬಂಡಗರ

ಆಧ್ಯಾತ್ಮಿಕದ ಗುರಿಯೇ ಸತ್ಯಾನ್ವೇಷಣೆ: ಸಿ. ಎಂ. ಬಂಡಗರ


ಇಂಡಿ : ಆಧ್ಯಾತ್ಮಿಕದ ಗುರಿಯು ಹಾಗೂ ವಿಜ್ಞಾನದ ಗುರಿಯು ಸತ್ಯಾನ್ವೇಷಣೆ ಮಾಡುವುದೇ ಆಗಿದೆ. ಯೋಗಿಗಳು ಆಧ್ಯಾತ್ಮಿಕದೆಡೆಗೆ ಸಾಗಿದರೆ ವಿಜ್ಞಾನಿಗಳು ವಿಜ್ಞಾನದೆಡೆಗೆ ಸಾಗುತ್ತಾರೆ. ಆದರೆ ಅವೆರಡರ ಅಂತಿಮ ಗುರಿ ಒಂದೇ ಆಗಿದೆ ಅದುವೇ ಪರಮ ಸತ್ಯ ಕಂಡುಕೊಳ್ಳುವದಾಗಿದೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಸಿ. ಎಂ. ಬಂಡಗರ ಹೇಳಿದರು.       

  ಪಟ್ಟಣದ ಬಸವರಾಜೇಂದ್ರ ದೇವಸ್ಥಾನದಲ್ಲಿ ಬಸವರಾಜೇಂದ್ರ ಸತ್ಸಂಗ ಸಮಿತಿ ವತಿಯಿಂದ ಆಯೋಜಿಸಿದ್ದ ಐವತ್ತೇಳನೇ ಹುಣ್ಣಿಮೆ ಬೆಳಕು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಶರಣರ ವಚನಗಳಲ್ಲಿ ವಿಜ್ಞಾನ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.     

   ಬಸವಾದಿ ಶರಣರು ನೀಡಿರುವ ಪ್ರತಿಯೊಂದು ವಚನವು ಭವ್ಯ ಜೀವನ ಸಾಗಿಸಲಿಕ್ಕೆ ಪೂರಕವಾಗಿದ್ದು ಅದರಲ್ಲಿ ವೈಜ್ಞಾನಿಕ, ವೈಚಾರಿಕತೆ, ಮನೋವೈಜ್ಞಾನಿಕ ಅಂಶಗಳು ತುಂಬಿವೆ ಹೀಗಾಗಿ ಬದುಕಿಗೆ ಹೊಸ ದಿಶೆ ತೋರಿಸಲು ವಚನಗಳು ಸಹಕಾರಿಯಾಗುತ್ತವೆ ಎಂದು ಹೇಳಿದ ಅವರು ಖಗೋಳ ವಿಜ್ಞಾನ ಸೇರಿದಂತೆ ವಿಜ್ಞಾನದ ಹಲವಾರು ಶಾಖೆಗಳಿಗೆ ಶರಣರ ವಚನಗಳು ಕೊಡುಗೆಯಾಗಿವೆ ಎಂದು ಅಭಿಪ್ರಾಯಪಟ್ಟರು.          

 ಅಧ್ಯಕ್ಷತೆ ವಹಿಸಿದ ಬಸವ ಸತ್ಸಂಗ ಸಮಿತಿ ಅಧ್ಯಕ್ಷ ಐ ಬಿ ಸುರಪುರ ಮಾತನಾಡಿ,ಕಿನ್ನರಿ ಬೊಮ್ಮಯ್ಯ ಶರಣರ ಸಮಗ್ರ ಪರಿಚಯ ನೀಡಿದರು. ಸಾನಿಧ್ಯ ವಹಿಸಿದ ಜೈನಾಪುರದ ರೇಣುಕಾ ಶಿವಾಚಾರ್ಯ ಸ್ವಾಮಿಗಳು ಆಶೀರ್ವಚನ ನೀಡಿದರು. ಸಿದ್ದಪ್ಪ ಕೊಪ್ಪ, ವಾಯ್ ಜಿ ಬಿರಾದಾರ, ಗೀತಯೋಗಿ, ಎ ಜಿ ಚೌಧರಿ, ಶ್ರೀಧರ್ ಹಿಪ್ಪರಗಿ, ಸಂಗಾ ಸಿಸ್ಟರ್, ರಾಘವೇಂದ್ರ ಕುಲಕರ್ಣಿ, ದಸ್ತರೆಡ್ಡಿ, ಆರ್ ಎಸ್ ಪಾಟೀಲ ಸೇರಿದಂತೆ ಹಲವಾರು ಶರಣ ಶರಣೆಯರು ಭಾಗವಹಿಸಿದ್ದರು. ಆರ್ ವಿ ಪಾಟೀಲ ಸ್ವಾಗತಿಸಿದರು, ಎಸ್ ಬಿ ಪಾಟೀಲ ವಂದಿಸಿದರು. 


ಸುದ್ದಿ ಓದಿ