ಧರ್ಮಪೀಠ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸ್ಥಾಪಿತವಾಗಬೇಕು
ಹೂವಿನಹಡಗಲಿ 21 : ಕುರುಬ ಸಮುದಾಯದವರು ಅನ್ಯ ಸಮಾಜದ ಜತೆ ಪ್ರೀತಿ, ವಿಶ್ವಾಸದಿಂದ ಬದುಕುವುದನ್ನು ರೂಢಿಸಿಕೊಳ್ಳಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಮೈಲಾರ ಗ್ರಾಮದ ಕಾಗಿನೆಲೆ ಶಾಖಾ ಮಠದಲ್ಲಿ ಸೋಮವಾರ ಆಯೋಜಿಸಿದ್ದ ಹಾಲುಮತ ಸಮಾಜದಿಂದ ಶ್ರೀಗಳಿಗೆ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿ ಮಾತನಾಡಿದ ಶ್ರೀಗಳು ಕನಕದಾಸರು ಮೇಲ್ವರ್ಗದ ಜನರಿಂದ ದೌರ್ಜನ್ಯ ಒಳಗಾಗಿದ್ದರು. ನೀವು ಆಗಿಲ್ಲ ಎಂದ ನಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳಬೇಕು. ಕಾಗಿನೆಲೆ ಧರ್ಮಪೀಠ ಜಾತ್ಯತೀತ ಮತ್ತು ಸಾಮಾಜಿಕ ನ್ಯಾಯದ ತಳಹದಿಯ ಮೇಲೆ ಸ್ಥಾಪಿತವಾಗಿದೆ ಎಂದರು. ಕುರುಬ ಸಮುದಾಯದವರು ಅನ್ಯ ಜಾತಿ, ಧರ್ಮ, ಭಾಷಿಕರ ಜತೆ ಅನ್ನೋನ್ಯವಾಗಿ ಬೆರೆತು ಸಾಮರಸ್ಯವನ್ನು ಗಟ್ಟಿಗೊಳಿಸಬೇಕು ಎಂದು ತಿಳಿಸಿದರು. ಶಾಸಕ ಕ್ರಷ್ಣನಾಯ್ಕ ಗೊರವಯ್ಯ ರಾಮಣ್ಣ.ಪರಶುರಾಮಪ್ಪ.ಹ.ಬೊ.ಹಳ್ಳಿ ಪುರಸಭೆ ಅದ್ಯಕ್ಷ ಮರಿರಾಮಪ್ಪ.ಸಮಾಜ ತಾ.ಅದ್ಯಕ್ಷ ಹೆಚ್.ಬೀರ್ಪ. ಈಟಿ.ಲಿಂಗರಾಜ.ಈಟಿ.ಮಾಲತೇಶ ಇದ್ದರು.